ಕರ್ಣ ಸೀರಿಯಲ್ ವಿಚಾರವಾಗಿ ಭವ್ಯಾ ಮೇಲೆ ಕೇಸ್, ಇದೀಗ ವಾಪಸ್ ಪಡೆದ ಡೈರೆಕ್ಟರ್
Jun 24, 2025, 16:26 IST
|

ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ‘ಕರ್ಣ’ ಧಾರಾವಾಹಿಯ ಪ್ರಸಾರವನ್ನು ಮುಂದೂಡಲಾಗಿದೆ. ಭವ್ಯಾ ಗೌಡ ಅವರ ಹಿಂದಿನ ಒಪ್ಪಂದದಿಂದಾಗಿ ಈ ವಿಳಂಬ ಉಂಟಾಗಿದೆ ಎಂದು ವರದಿಯಾಗಿದೆ. ಅವರು ಬೇರೆ ಚಾನೆಲ್ನೊಂದಿಗೆ ಒಪ್ಪಂದ ಹೊಂದಿದ್ದರು. ಪ್ರೋಮೋಗಳು ತೆಗೆದುಹಾಕಲ್ಪಟ್ಟಿದೆ. ಭವ್ಯಾ ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕ್ರಿಯೆಯನ್ನು ನಂಬಿ ಎಂದು ಪೋಸ್ಟ್ ಮಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕರ್ಣ ಧಾರಾವಾಹಿಯು ಜೂನ್ 16 ಸಂಜೆ 8 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಧಾರಾವಾಹಿಯು ಪ್ರಸಾರ ಕಾಣುತ್ತಿಲ್ಲ ಮತ್ತು ಹೊಸ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಜೀ ಕನ್ನಡವು ಮಾಹಿತಿ ನೀಡಿತು. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ರಿವೀಲ್ ಮಾಡಿರಲಿಲ್ಲ. ಈಗ ಕೇಳಿ ಬರುತ್ತಿರುವ ಹೊಸ ವರದಿಯ ಪ್ರಕಾರ ಭವ್ಯಾ ಗೌಡ ಅವರ ಕಾರಣಕ್ಕೆ ಧಾರಾವಾಹಿಯ ಪ್ರಸಾರ ಮುಂದೂಡಲ್ಪಟ್ಟಿದೆಯಂತೆ.
ಹೌದು, ಈ ಮೊದಲು ಬೇರೆ ಚಾನೆಲ್ ಜೊತೆ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಭವ್ಯಾಗೆ ಇಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿದರು. ಟಾಪ್ 6ರಲ್ಲಿ ಭವ್ಯಾ ಗೌಡ ಇದ್ದರು. ಆ ಬಳಿಕ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಶೋನಲ್ಲಿ ಭವ್ಯಾ ಗೌಡ ಅವರು ಸ್ಪರ್ಧೆ ಮಾಡಲೇ ಇಲ್ಲ. ಅನಾರೋಗ್ಯದ ಕಾರಣವನ್ನು ಅವರು ನೀಡಿದರು ಮತ್ತು ಶೋನಿಂದ ಹೊರ ಬಂದರು. ಆ ಬಳಿಕ ಅವರಿಗೆ ಸಿಕ್ಕ ಆಫರ್ ‘ಕರ್ಣ’ ಧಾರಾವಾಹಿ.
ಈ ಧಾರಾವಾಹಿಯ ಪ್ರೋಮೋಶೂಟ್ ಈಗಾಗಲೇ ಆಗಿತ್ತು. ಕಿರಣ್ ರಾಜ್ ಅವರು ಧಾರಾವಾಹಿಯಲ್ಲಿ ನಟಿಸಿದ್ದಾರೆ ಮತ್ತು ಇಂದಿನಿಂದ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಆದರೆ, ಭವ್ಯಾಗೆ ಈ ಮೊದಲು ಬೇರೆ ವಾಹಿನಿ ಜೊತೆ ಮಾಡಿಕೊಂಡ ಒಪ್ಪಂದ ಮುಗಿದಿರಲಿಲ್ಲ. ಈ ಕಾರಣದಿಂದ ವಾಹಿನಿಯವರು ಈ ಧಾರಾವಾಹಿಗೆ ಸ್ಟೇ ತಂದಿದ್ದಾರೆ. ಹೀಗಾಗಿ, ತಾತ್ಕಾಲಿಕವಾಗಿ ಧಾರಾವಾಹಿ ಪ್ರಸಾರವು ಸ್ಥಗಿತಗೊಂಡಿದೆ. ಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಧಾರಾವಾಹಿಯು ಪ್ರಸಾರ ಆರಂಭಿಸಬಹುದು ಎನ್ನಲಾಗುತ್ತಿತ್ತು. ಆದರೆ ಈದೀಗ ಆದಷ್ಟು ಬೇಗ ಧಾರವಾಹಿ ಬರ್ತಿದೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.