ಕೇಂದ್ರ ಸರ್ಕಾರದ ಅಕ್ಕಿ ಭಾಗ್ಯ ಇವತ್ತಿನಿಂದಲೇ ನಿಮ್ಮ ಮನೆ ಬಾಗಿಲಿಗೆ, Online ಮೂಲಕ ಅಕ್ಕಿ ಪಡೆಯಬಹುದು

 | 
J

ಸಾಮಾನ್ಯ ಜನರಿಗೆ ಪರಿಹಾರ ನೀಡಲು ಮತ್ತು ಚಿಲ್ಲರೆ ಹಣದುಬ್ಬರವನ್ನು ಕಡಿಮೆ ಮಾಡಲು ಸರ್ಕಾರವು ಅಕ್ಕಿಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರದ ಯೋಜನೆಯ ಅಡಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮುಂದಿನ ವಾರದಿಂದ ಕೆ.ಜಿಗೆ 29 ರೂ.ಯಂತೆ 'ಭಾರತ್ ರೈಸ್' ಮಾರಾಟ ಆರಂಭವಾಗಲಿದೆ. 

ಇದಕ್ಕಾಗಿ ಅಕ್ಕಿ ದಾಸ್ತಾನುಗಳನ್ನು ಬಹಿರಂಗಪಡಿಸುವಂತೆ ವರ್ತಕರಿಗೂ ತಿಳಿಸಲಾಗಿದೆ.ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ವಿವಿಧ ಬಗೆಯ ಅಕ್ಕಿಗಳ ರಫ್ತು ನಿಷೇಧದ ಹೊರತಾಗಿಯೂ, ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಮತ್ತು ಸಗಟು ದರಗಳು ಸುಮಾರು 15 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ. 

ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳ ಮೂಲಕ ಅಕ್ಕಿಯನ್ನು ಚಿಲ್ಲರೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ 'ಭಾರತ್ ರೈಸ್' ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ 'ಭಾರತ್ ರೈಸ್' ಅನ್ನು ಮಾರಾಟ ಮಾಡುತ್ತದೆ. ಮುಂದಿನ ವಾರದಿಂದ 5 ಕೆಜಿ ಹಾಗೂ 10 ಕೆಜಿ ಪ್ಯಾಕೆಟ್  ನಲ್ಲಿ Bharat Rice ದೊರೆಯಲಿದೆ ಎಂದು ಸಂಜೀವ್ ಚೋಪ್ರಾ  ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರವು ಐದು ಲಕ್ಷ ಟನ್ ಅಕ್ಕಿಯನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ನಿಗದಿಪಡಿಸಿದೆ.

ಹಣದುಬ್ಬರಕ್ಕೆ ಕಡಿವಾಣ ಹಾಕಲು ಈಗಾಗಲೇ 'ಭಾರತ್ ಅಟ್ಟ' ಅಂದರೆ ಗೋಧಿ ಹಿಟ್ಟನ್ನು ಕೆ.ಜಿಗೆ 27.50 ರೂ. ಯಂತೆ, 'ಭಾರತ್ ದಾಲ್' ಅನ್ನು ಕೆ.ಜಿಗೆ 60 ರೂ. ಯಂತೆ ಮಾರಾಟ ಮಾಡಲಾಗುತ್ತಿದೆ. ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕುವ ಯಾವುದೇ ಯೋಜನೆ ಇನ್ನೂ ಇಲ್ಲ ಎಂದು ಸರ್ಕಾರ ಹೇಳಿದೆ. ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯಲಾಗುತ್ತಿದೆ ಎನ್ನುವುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.