ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರ ಕುಂದಾಪುರ, ಕಿಚ್ಚನ ಕೋಪಕ್ಕೆ ಚೈತ್ರ ಕಂಗಾಲು
Dec 21, 2024, 22:25 IST
|
ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ ಅವರ ಆಟಕ್ಕಿಂತ ಅವರು ಬೊಬ್ಬೆ ಹಾಕುವುದೇ ಅತಿಯಾಗಿದೆ. ಚೈತ್ರ ಅವರ ವರ್ತನೆಗೆ ಭವ್ಯಾ ಗೌಡ ಅವರು ಕೂಡ ಸಿಟ್ಟಿಗೆದ್ದಿದ್ದರು.
ಇನ್ನು ಚೈತ್ರ ಕುಂದಾಪುರ ಅವರ ಬಗ್ಗೆ ಕಿಚ್ಚ ಸುದೀಪ್ ಕೂಡ ಕೋಪಗೊಂಡಿದ್ದಾರೆ. ವಾರದ ಜೊತೆ ಕಿಚ್ಚ ಜೊತೆ ಇದೀಗ ಚೈತ್ರ ಕುಂದಾಪುರ ಕಿಚ್ಚನ ಕೋಪಕ್ಕೆ ಬಲಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಾರದ ಚರ್ಚೆಯಲ್ಲಿ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳ ಜೊತೆ ಅವರ ವಾರದ ಕಥೆಗಳ ಬಗ್ಗೆ ಮಾತಾನಾಡುತ್ತಾರೆ.
ಆದರೆ, ಈ ವಾರ ಚೈತ್ರ ಕುಂದಾಪುರ ಅವರ ಜೊತೆ ಸಿಟ್ಟಿಗೆದ್ದು ಬಿಟ್ಟಿದ್ದಾರೆ. ಹೌದು, ಚೈತ್ರ ಕುಂದಾಪುರ ಅವರ ಚಟಪಟ ಮಾತಿನ ಮೇಲೆ ಸುದೀಪ್ ಅವರು ಗರಂ ಆದ ವಿಚಾರ ಇದೀಗ ವೈರಲ್ ಆಗುತ್ತಿದೆ.
ಚೈತ್ರ ಕುಂದಾಪುರ ಬಳಿ ಕೆಲವೊಂದು ಪ್ರಶ್ನೆಗಳನ್ನು ಸುದೀಪ್ ಅವರು ಮುಂದಿಟ್ಟರು, ಈ ವೇಳೆ ಪ್ರತಿಸ್ಪರ್ಧಿಗಳ ಮೇಲೆ Nonstop Fire ಮಾಡಿದ್ದಾರೆ ಚೈತ್ರ. ಈ ವೇಳೆ ಸುದೀಪ್ ಅವರು ಚೈತ್ರ ಮೇಲೆ ರೊಚ್ಚಿಗದ್ದು ಬಿಟ್ಟಿದ್ದರು.