ಬಿಗ್ ಬಾಸ್ ಸ್ಪರ್ಧಿಗಳ ಕಿರುಕುಳಕ್ಕೆ ದೇವರ ಮೋರೆ ಹೋದ ಚೈತ್ರ ಕುಂದಾಪುರ, ವರಕೊಟ್ಟ ದೇವಿ

 | 
Je
ಬಿಗ್ ಬಾಸ್ ಮನೆಯಲ್ಲಿ‌ ಇದೀಗ ಚೈತ್ರ ಕುಂದಾಪುರ ಅವರನ್ನು ಇಡೀ ಮನೆಯವರು ಟಾರ್ಗೆಟ್ ಮಾಡಿದ್ದಾರೆ. ಚೈತ್ರ ಕುಂದಾಪುರ ಬಾಯಿ ಬಡ್ಕಿ ಅಂತೆಲ್ಲ ಸಹಸ್ಪರ್ಧಿಗಳಿಂದ ಚೈತ್ರ ಮೇಲೆ ಆರೋಪ ಬರುತ್ತಿದೆ.
ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇದೀಗ ಚೈತ್ರ ಕುಂದಾಪುರ ಒಂಟಿಯಾಗಿ ಇದ್ದಾರೆ. ಕಳೆದ ಎರಡು ವಾರಗಳ ಹಿಂದೆ ಚೈತ್ರ ಕುಂದಾಪುರ ಜೊತೆ ಶಿಶಿರ್ ಅವರು ಜೊತೆಗಿದ್ದರು. ಚೈತ್ರ ಅವರ ಪರ ನಿಂತು ಬೆಂಬಲಿಸುತ್ತಿದ್ದರು. ಆದರೆ ಶಿಶಿರ್ ಅವರು ಹೊರಬಂದ ಬಳಿಕ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಸಹಸ್ಪರ್ಧಿಗಳ ಕಣ್ಣಿಗೆ ಕುರಿಯಂತೆ ಕಾಣುತ್ತಿದ್ದಾರೆ. 
ಹಾದು ಚೈತ್ರ ಕುಂದಾಪುರ ಅವರು 'ನನ್ನಂತವಳು ಈ ಬಿಗ್ ಬಾಸ್ ಮನೆಗೆಲ್ಲ ಬರಬಾರದಿತ್ತು ಎಂದು ದೇವರ ಮುಂದೆ ಕಣ್ಣೀರು ಹಾಕಿದ್ದಾರೆ'. ಇನ್ನು ಈ ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ಮಾತಾನಾಡುವ ಏಕೈಕ ವ್ಯಕ್ತಿ ಅಂದರೆ ಅದ್ಯ್ ಚೈತ್ರ. ಈಕೆಯ ಮಾತಿನ ಚಮತ್ಕಾರಕ್ಕೆ ಬಿಗ್ ಬಾಸ್ ಮನೆಮಂದಿ ಸೋತು ಹೋಗಿದ್ದರು.‌
ಆದರೆ ಇದೀಗ ಈಕೆಯನ್ನು ಟಾರ್ಗೆಟ್ ಮಾಡಿ ಮನೆಯಿಂದ ಹೊರ ಹೋಗಲು ಬಿಗ್ ಬಾಸ್ ಸ್ಪರ್ಧಿಗಳು ಹೊಸ ಪ್ಲಾನ್ ಮಾಡುತ್ತಿದ್ದಾರೆ. ಈಕೆಯ ಅತಿಯಾದ ಮಾತು ಬಿಗ್ ಬಾಸ್ ಮನೆ ಕೆಡುತ್ತಿದೆ ಎಂದು ಇತ್ತೀಚೆಗೆ ‌ಕಿಚ್ಚನ ಜೊತೆ ಕೂಡ ಹೇಳಿಕೊಂಡಿದ್ದರು.