ದುಬಾರಿ ಬೆಲೆಯ ಸೀರೆ ಉಟ್ಟು ದೇವಲೋಕದ ಅಪ್ಸರೆಯರ ಹಾಗೆ ಮಿಂಚಿದ ಚೈತ್ರ ಕುಂದಾಪುರ
Feb 12, 2025, 16:09 IST
|

ಈ ಹಿಂದೆ ವಿವಾದಗಳಿಂದ ಫೇಮಸ್ ಆಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದ ಹಾಗೂ ಡೈನಾಮಿಕ್ ಭಾಷಣಕಾರ್ತಿ ಚೈತ್ರಾ ಕುಂದಪುರ ಈಗ ಮಾಡೆಲ್. ಸೀರೆಯುಟ್ಟು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನಸ್ಸು ಗೆದ್ದಿದ್ದ ಚೈತ್ರಾ ಕುಂದಾಪುರ ಅವರಿಗೆ ಬ್ಯೂಟಿ ಪಾರ್ಲರ್ ಗಳಿಂದ ಆಫರ್ ಬರ್ತಿದೆ.
ಒಂದಾದ್ಮೇಲೆ ಒಂದು ಬ್ಯೂಟಿ ಪಾರ್ಲರ್, ಸೀರೆ ಅಂಗಡಿಗೆ ಹೋಗುವ ಚೈತ್ರಾ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಸೀರೆಯಲ್ಲಿ ಹುಡುಗಿಯರು ಕಾಣಿಸಿಕೊಳ್ಳೋದೆ ಅಪರೂಪ ಎನ್ನುವ ಕಾಲ ಇದು. ಮಾಡರ್ನ್ ಡ್ರೆಸ್ ಧರಿಸೋರಿಗೆ ಬೇಡಿಕೆ ಜಾಸ್ತಿ ಅಂದ್ಕೊಂಡರ ಕಲ್ಪನೆಯನ್ನು ಚೈತ್ರಾ ಬದಲಿಸ್ತಿದ್ದಾರೆ.
ಬರೀ ಮಾಡರ್ನ್ ಡ್ರೆಸ್ ಹಾಕಿದ್ರೆ ಮಾತ್ರವಲ್ಲ ಸೀರೆಯುಟ್ಟು ಕೆಲಸ ಗಿಟ್ಟಿಸಿಕೊಳ್ಳಬಹುದು ಎಂಬುದನ್ನು ತೋರಿಸ್ತಿದ್ದಾರೆ.ಈಗ ಚೈತ್ರಾ ಅವರ ಇನ್ನೊಂದು ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆಯಲ್ಲಿ ಚೈತ್ರಾ ಮಿಂಚಿದ್ದಾರೆ. six_yards_by_designer_trend ಹೆಸರಿನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆ: ಎ ಟೈಮ್‌ಲೆಸ್ ಕ್ಲಾಸಿಕ್. ರಾಯಲ್ ಬ್ಲೂ ಬಣ್ಣವು ಸೊಬಗು ಮತ್ತು ಅತ್ಯಾಧುನಿಕತೆಯನ್ನು ಹೊರಹಾಕುವ ಬಣ್ಣವಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಸೀರೆಯುಟ್ಟು, ಸಿಂಪಲ್ ಮೇಕಪ್ ಮಾಡ್ಕೊಂಡಿರುವ ಚೈತ್ರಾ ಕುಂದಾಪುರ, ಕ್ಯಾಟ್ ವಾಕ್ ಮಾಡ್ತಾರೆ. ಚೈತ್ರಾ ಈ ಸೀರೆ ವಿಡಿಯೋವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದ ಚೈತ್ರಾ ನೀವೇನಾ ಅಂತ ಪ್ರಶ್ನೆ ಮಾಡಿದ್ದಾರೆ. ಮಾತು ಹೆಚ್ಚಿದ್ರೂ ಸಂಸ್ಕೃತಿ ಮರೆತಿಲ್ಲ ಚೈತ್ರಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.