ಹೊಸ ವರ್ಷಕ್ಕೆ ಎರಡನೇ ಸಿಹಿಸುದ್ದಿ ಕೊಟ್ಟ ಚೈತ್ರ ವಾಸುದೇವ್, ರಾಜ್ಯಾದ್ಯಂತ ಸಂಭ್ರಮ
Jan 30, 2025, 22:21 IST
|

ಮೊದಲ ಮದುವೆಯಿಂದ ಜೀವನದಲ್ಲಿ ಸಂಕಷ್ಟ ಅನುಭವಿಸಿ ಕೊನೆಗೆ ವಿಚ್ಛೇದನ ಪಡೆದಿದ್ದ ಖ್ಯಾತ ಆಂಕರ್ ಚೈತ್ರಾ ವಾಸುದೇವನ್ ಇದೀಗ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ವಿಚ್ಛೇದನದ ಬಳಿಕ ಹಲವು ದಿನಗಳು ನೋವಿನಲ್ಲೇ ಕಳೆದಿದ್ದ ಅವರು, ಬಳಿಕ ಆಂಕರಿಂಗ್ ಕೆಲಸಕ್ಕೆ ಮರಳಿದ್ದರು.
ಅದರ ಜೊತೆ ತಮ್ಮದೇ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಕಟ್ಟಿದ್ದು ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ 7ನೇ ಆವೃತ್ತಿಯ ಸ್ಪರ್ಧಿ ಕೂಡ ಆಗಿದ್ದ ಚೈತ್ರಾ ವಾಸುದೇವನ್, ಮೊದಲನೇ ಮದುವೆಯಿಂದ ಮಾನಸಿಕವಾಗಿ ಸಾಕಷ್ಟು ಹಿಂಸೆ ಅನುಭವಿಸಿದ್ದರು. ಕೊನೆಗೆ ಅವರು ಮೊದಲ ಮದುವೆಯನ್ನು ಮುರಿದುಕೊಂಡು ಗಂಡನಿಂದ ದೂರವಾಗಿದ್ದರು.
ಕನ್ನಡ ಚಿತ್ರರಂಗದ ಅನೇಕರು ಚೈತ್ರಾ ವಾಸುದೇವನ್‌ಗೆ ಧೈರ್ಯ ತುಂಬಿದ್ದರು. ಹೆಂಸತಿ ಸತ್ತರೆ ಗಂಡ ಸನ್ಯಾಸಿಯಾಗಿರಲ್ಲ, ಬೇರೆ ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಕೂಡ ಅದೇ ರೀತಿ ಯೋಚಿಸಬೇಕು ಎಂದು ನಟ ಜಗ್ಗೇಶ್ ಚೈತ್ರಾ ವಾಸುದೇವನ್‌ಗೆ ಸಲಹೆ ಕೊಟ್ಟಿದ್ದರು. ಚೈತ್ರಾ ತಮ್ಮ ಆಂಕರಿಂಗ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಕಡೆ ಹೆಚ್ಚು ಗಮನ ಹರಿಸಿದ್ದರು.
ಚೈತ್ರಾ ವಾಸುದೇವನ್ ಸದ್ಯ ಪ್ಯಾರಿಸ್‌ನಲ್ಲಿ ಮದುವೆಗಾಗಿ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ಅಲ್ಲಿಯೇ ತಮ್ಮ ಪ್ರೀ ವೆಡ್ಡಿಂಗ್ ಫೋಟೊಶೂಟ್ ಕೂಡ ನಡೆಸುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಪ್ರಿವೆಡ್ಡಿಂಗ್ ಫೋಟೊ ಶೂಟ್‌ನ ವಿಡಿಯೋ ಹಂಚಿಕೊಂಡಿದ್ದು ಮದುವೆ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.