ಎರಡನೇ ಮದುವೆಗೆ ಒಪ್ಪಿಕೊಂಡ ಚೈತ್ರ ವಾಸುದೇವನ್

 | 
Ha
ಮದುವೆಯಾಗಿ ಕೆಲವೇ ಕೆಲವು ವರ್ಷಗಳಲ್ಲಿ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಕಳೆಯುತ್ತಿದ್ದ ಖ್ಯಾತ ಆ್ಯಂಕರ್​ ಚೈತ್ರಾ ವಾಸುದೇವನ್​ ಅವರು ಎರಡನೆಯ ಬಾರಿಗೆ ಮದುವೆಯಾಗ್ತಿರುವ ವಿಷಯ ಅವರ ಅಭಿಮಾನಿಗಳಿಗೆ ತಿಳಿದದ್ದೇ. ಕೆಲ ದಿನಗಳ ಹಿಂದೆ ಚೈತ್ರಾ, ಪ್ಯಾರಿಸ್ ನಲ್ಲಿ ಭಾವಿ ಪತಿ ಜಗದೀಪ್​ ಎಲ್​. ಅವರ ಜೊತೆ ಪ್ರೀವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದರು.  ವಿಡಿಯೋವನ್ನು ಚೈತ್ರಾ ಹಂಚಿಕೊಂಡಿದ್ದರು. ಅದೇ ಮೊದಲ ಬಾರಿಗೆ ಭಾವಿ ಪತಿಯ ಮುಖವನ್ನು ತೋರಿಸಿದ್ದರು.
 ಅದಕ್ಕೂ ಮುನ್ನ  ಸೋಷಿಯಲ್ ಮೀಡಿಯಾದಲ್ಲಿ ಮದುವೆ ವಿಷ್ಯವನ್ನು ಹಂಚಿಕೊಂಡಿದ್ದ ಚೈತ್ರಾ, ನಾನು ನಿಮ್ಮೊಂದಿಗೆ  ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ. ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯನ್ನು , ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ ಎಂದಿದ್ದರು.
ಇದೀಗ ತಮ್ಮ ಮತ್ತು  ಜಗದೀಪ್​ ಅವರ ಮೊದಲ ಭೇಟಿ, ಪ್ರೀತಿ, ಪ್ರೇಮ, ಮದುವೆಯ ಬಗ್ಗೆ ಚೈತ್ರಾ ಅವರು ಮಾತನಾಡಿದ್ದಾರೆ. ನ್ಯಾಷನಲ್​ ಟಿವಿ ಯೂಟ್ಯೂಬ್​ ಜೊತೆ ಈ ಬಗ್ಗೆ ಸಂದರ್ಶನ ನೀಡಿದ್ದಾರೆ ಚೈತ್ರಾ ವಾಸುದೇವನ್​. ಪ್ಯಾರೀಸ್​ನಲ್ಲಿ ಪ್ರೀ ವೆಡ್ಡಿಂಗ್​ ಶೂಟ್​ನಲ್ಲಿ ಮಾಡಿರುವ ಕುರಿತು ಮಾತನಾಡಿರುವ ಅವರು, ಪ್ಯಾರೀಸ್​​ ಮತ್ತು ಫ್ರಾನ್ಸ್​ಗೆ ಹೋಗುವ ಪ್ಲ್ಯಾನ್​ ಮೊದಲೇ ಇತ್ತು. ಆ ಬಳಿಕ ಮದುವೆ ಫಿಕ್ಸ್​ ಆಯಿತು. ಆದ್ದರಿಂದ ಜಗದೀಪ್​ ಅವರನ್ನೂ ಕರೆದುಕೊಂಡು ಹೋಗುವ ಪ್ಲ್ಯಾನ್​ ಮಾಡಿರುವುದಾಗಿ ತಿಳಿಸಿದರು. ಇದು  ಆಗಿದ್ದು ಅಚಾನಕ್​ ಅಷ್ಟೇ ಎಂದರು.
ಇದೇ ವೇಳೆ, ತಮ್ಮ ಮತ್ತು ಜಗದೀಪ್​ ಪರಿಚಯ ಆರಂಭವಾಗಿರುವ ಬಗ್ಗೆ ಮಾತನಾಡಿರುವ ಚೈತ್ರಾ, ನಾನು ಈವೆಂಟ್ ನಡೆಸುತ್ತಿದ್ದೇನೆ. ಜಗದೀಪ್​ ಅವರ ಸ್ನೇಹಿತರ ಮಗನ ಹುಟ್ಟುಹಬ್ಬಕ್ಕೆ ಎಲ್ಲಾ ಕಡೆ ಸರ್ಚ್​ ಮಾಡಿ, ನನ್ನ ಈವೆಂಟ್​ ಕಂಪೆನಿಗೆ ಬಂದರು. ಅವರ ಸ್ನೇಹಿತರಿಗೆ ಮಗುವನ್ನು ನೋಡಿಕೊಳ್ಳಬೇಕಾಗಿದ್ದರಿಂದ ಜಗದೀಪ್​ ಅವರೇ ಅದರ ಉಸ್ತುವಾರಿ ವಹಿಸಿಕೊಂಡಿದ್ದರಿಂದ, ನನ್ನ ಮತ್ತು ಅವರ ನಡುವೆ ಮಾತುಕತೆ ನಡೆಯಿತು. ಕೊನೆಗೆ ಅವರು ಇದೇ ವಿಷಯವಾಗಿ ನಮ್ಮ ಕಂಪೆನಿಗೆ ಬಂದರು. ಹೀಗೆ ಪರಿಚಯ ಶುರುವಾಯಿತು. ಒಂದೇ ಜಿಮ್​, ಒಂದೇ ಕಾಲೇಜು ಇವೆಲ್ಲಾ ಮಾತನಾಡುವ ನಡುವೆ ಅವರಿಗೆ ನಾನು ಇಷ್ಟವಾದೆ. ನೇರವಾಗಿಯೇ ಅವರು ಈ ವಿಷಯವನ್ನು ನನಗೆ ಹೇಳಿದರು. ಮದುವೆಯ ಬಗ್ಗೆ ಪ್ರಸ್ತಾಪಿಸಿದರು ಎಂದು ಚೈತ್ರಾ ಹೇಳಿದ್ದಾರೆ. 
ನಾನು ಅಷ್ಟು ಬೇಗ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಕಾಲಾವಕಾಶ ಬೇಕು ಎಂದೆ. ಅವರು ನೇರವಾಗಿ ನನ್ನ ಅಪ್ಪ-ಅಮ್ಮನ ಬಳಿ ಮಾತನಾಡಿದರು. ಅವರ ಗುಣ ನನ್ನ ಅಪ್ಪ-ಅಮ್ಮನಿಗೆ ಇಷ್ಟವಾಯಿತು. ಅವರಿಗೆ ಅಪ್ಪ ಇಲ್ಲ. ಜೀವನದಲ್ಲಿ ತುಂಬಾ ಪ್ರಯತ್ನ ಪಟ್ಟು ಮೇಲೆ ಬಂದವರು. ಅವರನ್ನು ನೋಡಿ ನನಗೂ ಖುಷಿಯಾಯಿತು. ಇಬ್ಬರ ಮೈಂಡ್​ಸೆಟ್​, ಗುರಿ ಎಲ್ಲವೂ ಒಂದೇ ರೀತಿ ಎನ್ನಿಸಿತು. ಅವರು ಫ್ಯಾಮಿಲಿಮ್ಯಾನ್​ ರೀತಿ ಎನ್ನಿಸಿತು. ನನಗೂ ಇಷ್ಟವಾಗಿ ಒಪ್ಪಿಕೊಂಡೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.