ಸಣ್ಣ ವಿಷಯಕ್ಕೆ ನಿವೇದಿತಾ ಗೌಡಗೆ ಡಿ ವೋರ್ಸ್ ಕೊಟ್ಟ ಚಂದನ್

 | 
Uu

ಟೈಮ್‌ ಬರುತ್ತೆ, ನಮ್ಗೂ ಟೈಮ್‌ ಬರುತ್ತೆ ಒಂದಲ್ಲ ಒಂದು ದಿನ ಟೈಮ್‌ ಬರುತ್ತೆ ಅನ್ನೋ ಹಾಡು ಇತ್ತೀಚೆಗೆ ಫೇಮಸ್ ಆಗಿತ್ತು. ಈ ಹಾಡನ್ನು ಹಾಡಿದ್ದ ಚಂದನ್‌ ಶೆಟ್ಟಿ. ಇದೀಗ ಚಂದನ್ ಶೆಟ್ಟಿ ಬದುಕಿನಲ್ಲಿ ಬಿರುಗಾಳಿ ಬೀಸಿದೆ.ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ  ಅವರ ವಿಚ್ಛೇದನ ಶುಕ್ರವಾರ ಭಾರೀ ಸುದ್ದಿಯಾಗಿತ್ತು. ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿದ್ದ ದಂಪತಿ ಏಕಾಏಕಿ ಬೇರೆಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು.

 ಅಲ್ಲದೇ ಹಲವರು ಇದಕ್ಕೆ ಕಾರಣವನ್ನೂ ಹುಡುಕಲು ಮುಂದಾಗಿದ್ದರು. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಆದರೆ ಇದೀಗ ಚಂದನ್ ಪರ ವಕೀಲೆ ಅನಿತಾ ಅವರು ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.ಒಂದು ವರ್ಷದಿಂದ ದೂರ ಇರುವುದನ್ನೇ ತೋರಿಸಿ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಮೂಲಕ ವಿಚ್ಛೇದನ ಪಡೆದಿದ್ದಾರೆ. 

ಪತಿ-ಪತ್ನಿಯಾಗಿ ಮುಂದುವರಿಯಲು ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಮುಖ್ಯ ಕಾರಣ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎಂದರು.ಕುಟುಂಬ ಬೆಳೆಸುವ ಉದ್ದೇಶ ಚಂದನ್ ಶೆಟ್ಟಿ ಅವರಿಗಿದೆ. ಆದರೆ, ನಿವೇದಿತಾ ಗೌಡ ಕೆರಿಯರ್‌ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದು ಡಿವೋರ್ಸ್‌ವರೆಗೂ ಬಂದಿದೆ ಎನ್ನಲಾಗಿದೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿಗೆ ಪದೇ ಪದೇ ಗುಡ್ ನ್ಯೂಸ್ ಯಾವಾಗ ಕೊಡ್ತೀರಾ? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಮೊದಮೊದಲು ಇನ್ನೂ ಟೈಮ್‌ ಇದೆ ಎಂದು ಇಬ್ಬರೂ ಹೇಳುತ್ತಿದ್ದರು. ಇತ್ತೀಚೆಗಷ್ಟೇ ನಿವೇದಿತಾ ಗೌಡ, ನಾನು ಕೆರಿಯರ್‌ ಬಗ್ಗೆ ಫೋಕಸ್ ಮಾಡ್ತಿದ್ದೇನೆ. ಹೆಚ್ಚು ಆಫರ್‌ಗಳಿವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅದರಂತೆ ಅವರು ವಿದೇಶಕ್ಕೆ ಹೋಗುವ ಆಸೆ ಹೊಂದಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.