ಚಂದನ್ ಕವಿತಾ ಮಗುವಿನ ನಾಮಕರಣ, ಕನ್ನಡದ ಖ್ಯಾತನ ನಟನ ಹೆಸರಿಟ್ಟ ಜೋಡಿ
| Updated: Nov 26, 2024, 13:08 IST
ಸ್ಯಾಂಡಲ್‌ವುಡ್‌ನ ನಟಿ ಕವಿತಾ ಗೌಡ ತಮ್ಮ ಎರಡು ತಿಂಗಳ ಮಗುವಿನ ಫೋಟೋ ಶೇರ್ ಮಾಡಿದ್ದಾರೆ. ಪತಿ ಚಂದನ್ ಜೊತೆಗಿನ ಇನ್ನೊಂದಿಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಮ್ಮ ಆದ ವಿಶೇಷ ಅನುವವನ್ನ ಕೂಡ ಹೇಳಿಕೊಂಡಿದ್ದಾರೆ. ಮಗನೊಂದಿಗಿನ ವಿಶೇಷ ಕ್ಷಣವನ್ನ ಕೂಡ ಅಷ್ಟೇ ವಿಶೇಷವಾಗಿಯ ಹೇಳಿಕೊಂಡಿದ್ದಾರೆ.
ನಿನ್ನ ನಾನು ಅಪ್ಪಿಕೊಂಡಾಗ ಸಿಗೋ ಖುಷಿನೇ ಬೇರೆ ಇದೆ. ಪ್ರತಿ ಸಲವೂ ಅದೇ ಬೇಕೆನಿಸುತ್ತದೆ. ನೀನು ನನ್ನ ಅಪ್ಪಿಕೊಂಡಾಗ ಸಿಗೋ ಖುಷಿ ಬೇರೆ. ಆದರೆ, ನಾನು ನಿನ್ನ ತಬ್ಬಿಕೊಳ್ಳುವ ಖುಷಿನೇ ಅನನ್ಯ ಅಂತಲೂ ಕವಿತಾ ಗೌಡ ಬರೆದುಕೊಂಡಿದ್ದಾರೆ.ತಮ್ಮ ಎರಡು ತಿಂಗಳ ಮಗುವಿನೊಂದಿಗಿನ ಆ ಎರಡು ತಿಂಗಳ ಅನುಭವವನ್ನ ಹೀಗೆ ಬರೆದುಕೊಂಡಿದ್ದಾರೆ.
ಈ ಅನುಭವದ ಸಾಲುಗಳನ್ನ ಇಂಗ್ಲೀಷ್‌ನಲ್ಲಿಯೇ ಬರೆದುಕೊಂಡಿದ್ದಾರೆ. ಈ ಮೂಲಕ ಅಮ್ಮ ಆದ ವಿಶೇಷ ಅನುಭವನ್ನ ಎಲ್ಲರೊಟ್ಟಿಗೆ ಈ ರೀತಿ ಶೇರ್ ಮಾಡಿಕೊಂಡಿದ್ದಾರೆ.ಕವಿತಾ ಗೌಡ ಮತ್ತು ಪತಿ ಚಂದನ್ ಕುಮಾರ್ ಕೂಡ ಮಗನ ಜೊತೆಗೆ ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ. ಕಳೆದ ಸೆಪ್ಟೆಂಬರ್-18 ರಂದು ಹುಟ್ಟಿದ ಮಗನಿಗೆ ಈಗ ಎರಡು ತಿಂಗಳಾಗಿದೆ. ಈ ಎರಡು ತಿಂಗಳ ಮಗನೊಟ್ಟಿಗೆ ಚಂದನ್ ಹಾಗೂ ಕವಿತಾ ಗೌಡ ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಚಂದನ್ ಹಾಗೂ ಕವಿತಾ ಗೌಡ ತಮ್ಮ ಮಗನನ್ನ ವಿಶೇಷವಾಗಿಯೇ ಜನರಿಗೆ ಪರಿಚಯ ಮಾಡಿಸಿದ್ದಾರೆ. ಸ್ಪೆಷಲ್ ಫೋಟೋ ಶೂಟ್‌ನ ವಿಡಿಯೋ ಹಾಗೂ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ತಮ್ಮ ಫ್ಯಾನ್ಸ್‌ಗೆ ಮಗನ ಮುಖ ತೋರಿದಿದ್ದಾರೆ. ಆದರೆ, ಈ ಮೊದಲು ಮಗನ ಮುಖವನ್ನ ಹೈಡ್ ಮಾಡಿಯೇ ಒಂದಷ್ಟು ಫೋಟೋಗಳನ್ನ ಚಂದನ್ ಕುಮಾರ್ ಹಂಚಿಕೊಂಡಿದ್ದರು.
ಕವಿತಾ ಗೌಡ ಸ್ಪೆಷಲ್ ಫೋಟೋ ವೈರಲ್ ಆಗಿವೆ. ಇವುಗಳನ್ನ ನೋಡಿದ ಫ್ಯಾನ್ಸ್ ಕೂಡ ಕಾಂಪ್ಲಿಮೆಂಟ್ಸ್ ಕೂಡ ಕೊಟ್ಟಿದ್ದಾರೆ. ಕ್ಯೂಟ್ ಅಮ್ಮ-ಮಗ ಅಂತಲೇ ಹೇಳಿದ್ದಾರೆ. ಮಗುವಿನ ಹೆಸರೇನು ಎಂದು ಸಹ ಕೇಳಿದ್ದಾರೆ.ಒಟ್ಟಾರೆ, ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಅಂತಲೂ ಹೇಳಬಹುದು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.