ಆ ಮೂರನೇ ವ್ಯಕ್ತಿ ಹೆಸರು ಬಾಯಿ ಬಿಟ್ಟ ಚಂದನ್; ಸಿ ಡಿದೆದ್ದ ಲೊಕೇಶ್
ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ಎಲ್ಲರಿಗೂ ಶಾಕ್ ಕೊಟ್ಟಿದೆ. ರಿಯಾಲಿಟಿ ಶೋಗಳಲ್ಲಿ ಮಿಂಚ್ತಾ, ಸೋಷಿಯಲ್ ಮಿಡಿಯಾದಲ್ಲಿ ಕ್ಯೂಟ್ ಆಗಿ ರೀಲ್ಸ್ ಮಾಡ್ತಾ ಎಲ್ಲರನ್ನ ರಂಜಿಸ್ತಾ ಇದ್ದ ಈ ತಾರಾಜೋಡಿ ಏಕಾಏಕಿ ಸಂಬಂಧವನ್ನ ಮುರಿದುಕೊಂಡಿದ್ದು ಯಾಕೆ ಅಂತ ಎಲ್ರೂ ತಲೆ ಕೆಡಿಸಿಕೊಂಡಿದ್ದಾರೆ.
ಅಸಲಿಗೆ ಈ ಇಬ್ಬರಿಗೂ ವಿಚ್ಛೇದನ ಕೊಡಿಸಿರೋ ವಕೀಲೆ ಹೇಳುವ ಪ್ರಕಾರ ಕಳೆದ ಒಂದು ವರ್ಷದ ಹಿಂದೆಯೇ ಈ ಜೋಡಿ ಹೊಂದಾಣಿಕೆಯ ಕೊರತೆಯಿಂದ ಡಿವೋರ್ಸ್ ಪಡೆಯೋದಕ್ಕೆ ತೀರ್ಮಾನ ಮಾಡಿತ್ತಂತೆ. ತಮ್ಮ ಸಂಬಂಧ ಹದಗೆಟ್ಟು ಡಿವೋರ್ಸ್ ಹಂತಕ್ಕೆ ಬಂದಿದ್ರೂ ಅದನ್ನ ಎಲ್ಲಿಯೂ ತೊರಗೊಡದೇ ಅನ್ಯೋನ್ಯವಾಗಿದ್ದಂತೆ ಇಬ್ಬರು ನಟನೆ ಮಾಡ್ತಾನೇ ಬಂದಿದ್ರು. ಅಷ್ಟರ ಮಟ್ಟಿಗೆ ಈ ಇಬ್ಬರು ಅತ್ಯುತ್ತುಮ ನಟ-ನಟಿಯರು.
ಆದ್ರೆ ಇವ್ರು ಅದೆಷ್ಟೇ ನಟನೆ ಮಾಡ್ತಾ ಇದ್ರೂ ತೀರಾ ಹತ್ತಿರದಿಂದ ಇವರನ್ನ ನೋಡ್ತಾ ಇದ್ದವರಿಗೆ ಏನ್ ನಡೀತಾ ಇದೆ ಅನ್ನೋ ಅಸಲಿಯತ್ತು ಗೊತ್ತಿತ್ತು. ಅದ್ರಲ್ಲೂ ರಾಜಾ ರಾಣಿ ಅನ್ನೋ ರಿಯಾಲಿಟಿ ಶೋ ಮತ್ತದರ ನಿರ್ಮಾಪಕ ಕಂ ಜಡ್ಜ್ ಸೃಜನ್ ಲೋಕೇಶ್ ಹೆಸರು ಈ ವಿಚಾರದಲ್ಲಿ ಕೇಳಿ ಬರ್ತಾ ಇದೆ.ಹಾಗಾದ್ರೆ ರಾಜಾ ರಾಣಿ ಬೇರೆ ಆಗೋದಕ್ಕೆ ಸೃಜನ್ ಕಾರಣನಾ..? ಗಂಡ ಹೆಂಡತಿ ನಡುವೆ ಬಂದ ಆಗುಂತಕ ಅವನೇನಾ..? ಹಾಲು ಜೇನಿನಂತೆ ಇದ್ದ ಚಂದನ್ – ನಿವಿ ದಾಂಪತ್ಯಕ್ಕೆ ಸೃಜನ್ ಲೋಕೇಶ್ ಹುಳಿ ಹಿಂಡಿದ್ನಾ..? ಅಸಲಿ ವಿಚಾರ ಈ ಮೂವರಿಗೇ ಗೊತ್ತು. ಆದ್ರೆ ಈ ತರಹದ ಗಾಸಿಪ್ ಬಣ್ಣದ ಲೋಕದಲ್ಲಿ ಹರಿದಾಡ್ತಾ ಇರೋದಂತೂ ನಿಜ.
ರಾಜಾ-ರಾಣಿ ಶೋನಲ್ಲಿ ಚಂದನ್ ಆ್ಯಂಡ್ ನಿವೇದಿತಾ ಭಾಗಿಯಾಗಿ ವಿನ್ನರ್ ಆಗಿದ್ರು. ಈ ಶೋ ನಂತರ ಚಂದನ್ ಸಿನಿಮಾ ಸಂಗೀತ, ಮ್ಯೂಸಿಕ್ ಶೋಗಳು, ನಟನೆ ಅಂತ ಬ್ಯುಸಿಯಾದ್ರು. ಆದ್ರೆ ನಿವೇದಿತಾ ಗಿಚ್ಚಿ ಗಿಲಿಗಿಲಿ ಅನ್ನೋ ಶೋನಲ್ಲಿ ನಟಿಸೋದಕ್ಕೆ ಶುರುಮಾಡಿದ್ರು. ಅಲ್ಲಿಂದಲೇ ಎಲ್ಲವೂ ಹಳಿತಪ್ತು ಅಂತ ಸ್ಮಾಲ್ ಸ್ಕ್ರೀನ್ ಸೆಟ್ಗಳಲ್ಲಿ ಸುದ್ದಿಯಾಗಿತ್ತು.
ಯೆಸ್, ನಿವೇದಿತಾ ಬರ್ತ್ಡೇಗೆ ಸೃಜನ್ ಲೋಕೇಶ್ ಭರ್ಜರಿ ಗಿಫ್ಟ್ ಕೊಟ್ಟಿದ್ರು. ತಮ್ಮ ನಿರ್ಮಾಣದ ಶೋಗಳಲ್ಲಿ ನಿವೇದಿತಾಗೆ ಅವಕಾಶದ ಮೇಲೆ ಅವಕಾಶ ಕೊಟ್ರು. ಅಷ್ಟೆಲ್ಲಾ ಯಾಕೆ ತಮ್ಮ ನಿರ್ಮಾಣದ ಜಿಎಸ್ಟಿ ಅನ್ನೋ ಸಿನಿಮಾದಲ್ಲೂ ನಟನೆಯ ಚಾನ್ಸ್ ಕೊಟ್ರು.ನಿವಿಯ ಬರ್ತ್ಡೇಗೆ ಸೃಜಾ ಹಾಕಿರೋ ಪೋಸ್ಟ್ ನೋಡಿದ್ರೆ ಇವ್ರ ಆತ್ಮೀಯತೆ ಅದ್ಯಾಪರಿ ಇದೆ ಅನ್ನೋದು ಗೊತ್ತಾಗುತ್ತೆ.
ಸೃಜನ್ ಮತ್ತು ನಿವಿಯ ಈ ಅಸಹಜ ಸಲುಗೆಯನ್ನ ನೋಡಿ ಅನೇಕರು ಚಂದನ್ಗೆ ಎಚ್ಚರಿಸಿದ್ರಂತೆ. ಮ್ಯೂಸಿಕ್ ಕಾಂಸೆರ್ಟ್ ಅಂತ ಊರೂರು ತಿರುಗುವ ಚಂದನ್ಗೆ ನಿನ್ನ ಹೆಂಡತಿ ಬಗ್ಗೆ ಗಮನ ಹರಿಸು ಅಂತ ಸೂಚಿಸಿದ್ರಂತೆ
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.