ನಿವೇದಿತಾ ಬಿಟ್ಟು ‌ಹೋದ ಬಳಿಕ ಒಂಟಿಯಾಗಿ ಅಡುಗೆ ಮನೆ ಕ್ಲೀನ್ ಮಾಡುತ್ತಿರುವ ಚಂದನ್ ಶೆಟ್ಟಿ

 | 
Ghu
ರ್ಯಾಪರ್ ಚಂದನ್ ಶೆಟ್ಟಿ ಮತ್ತೂಮ್ಮೆ ಸುದ್ದಿಯಲ್ಲಿದ್ದಾರೆ.
ನಿವೇದಿತಾ ಗೌಡ ಗೆ ವಿಚ್ಛೇದನ ನೀಡಿದ ನಂತ್ರ ರ‍್ಯಾಪರ್ ಚಂದನ್ ಶೆಟ್ಟಿ ಸಖತ್ ಸದ್ದು ಮಾಡ್ತಿದ್ದಾರೆ. ಅವರ ನಾನಾ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈಗ ಕಿರಿಕ್ ಕೀರ್ತಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಶೆಟ್ಟಿ ರೀಲ್ಸ್ ವೈರಲ್ ಆಗಿದೆ. ರಾತ್ರಿ ಉಳಿದ ಅನ್ನ.. ಬೆಳಿಗ್ಗೆ ಪರಮಾನ್ನ ಎಂದು ಶೀರ್ಷಿಕೆ ಹಾಕಿ, ಕಿರಿಕ್ ಕೀರ್ತಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಅಡುಗೆ ಮಾಡ್ತಿರೋದನ್ನು ನೀವು ನೋಡ್ಬಹುದು. ಕೀರ್ತಿ, ಏನು ಮಾಡ್ತಿದ್ದೀರಿ ಎಂದು ಕೇಳ್ತಾರೆ. ಚಂದನ್ ಹೇಳುವ ಮೊದಲೇ ಕೀರ್ತಿ, ಚಿತ್ರಾನ್ನ ಎನ್ನುವುದಲ್ಲದೆ ಬ್ಯಾಚ್ಯುಲರ್ ಚಿತ್ರಾನ್ನ ಎನ್ನುತ್ತಾರೆ. ಅದಕ್ಕೆ ನಗುವ ಚಂದನ್, ಒಗ್ಗರಣೆಗೆ ಅನ್ನ ಹಾಕಿ ಚಿತ್ರಾನ್ನ ಮಾಡ್ತಾರೆ. ಹೌದು ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ಕಿರಿಕ್ ಕೀರ್ತಿ ಈ ವಿಡಿಯೋಕ್ಕೆ ಬಳಕೆದಾರರು ಲೈಕ್ ಒತ್ತಿದ್ದಾರೆ. ಅನೇಕರು ಕಮೆಂಟ್ ಮಾಡಿದ್ದಾರೆ. ಚಂದನ್ ಅವರಿಗೆ ಫುಲ್ ಸ್ವಾತಂತ್ರ್ಯ ಸಿಕ್ಕಿದೆ. ಹೆಂಗ್ ಬೇಕಾದ್ರೂ ಊಟ ಮಾಡ್ಬಹುದು ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ವಿಚ್ಛೇದಿತರದ್ದೇ ಒಂದು ಸಂಘ ಓಪನ್ ಆದ್ರೂ ಅಚ್ಚರಿ ಇಲ್ಲ ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ. 
ಬ್ಯಾಚ್ಯುಲರ್ ಚಿತ್ರಾನ್ನ ಅಂದ್ರೆ ಬೆಸ್ಟ್. ಅದ್ರಲ್ಲಿ ಪ್ರೀತಿ, ಮಮತೆ, ಸ್ನೇಹ ಎಲ್ಲ ಬೆರೆತಿರುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಬಳಕೆದಾರರೊಬ್ಬರು ಹಾರ್ದಿಕ್ ಪಾಂಡ್ಯರನ್ನು ಕರೆದುಕೊಳ್ವಂತೆ ಸಲಹೆ ನೀಡಿದ್ರೆ ಇನ್ನೊಬ್ಬರು ಅಪ್ಪು ಸರ್, ರಾತ್ರಿ ಉಳಿದ ಅನ್ನದಲ್ಲಿ ಚಿತ್ರಾನ್ನ ಹೇಗೆ ಮಾಡ್ಬೇಕು ಅಂತ ಹೇಳಿದಾರೆ. ತಿಳ್ಕೊಳ್ಳಿ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 
ಇನ್ನೊಬ್ಬರು ಚಂದನ್ ಕಲ್ಬೆರಿಕೆ ಬ್ಯಾಚ್ಯುಲರ್, ನಾವು ಪೂರಾ ಬ್ಯಾಚ್ಯುಲರ್ ಅಂದ್ರೆ, ನಿಮ್ಮನ್ನು ನೋಡಿದ್ರೆ ಬೇಸರವಾಗುತ್ತೆ, ಎಷ್ಟು ಸ್ವಾತಂತ್ರ್ಯ ಸಿಕ್ಕಿದೆ ನಿಮಗೆ ಅಂತ ಇನ್ನೊಬ್ಬರು ಚಂದನ್ ನೋಡಿ ಹೊಟ್ಟೆ ಉರಿದುಕೊಂಡಿದ್ದಾರೆ. ಬಳಕೆದಾರರೊಬ್ಬರು, ಚಿತ್ರಾಹ್ನಕ್ಕೆ ಈರುಳ್ಳಿ ಹಾಕೇ ಇಲ್ಲ ಅಂದ್ರೆ ಮತ್ತೊಬ್ಬರು ಸ್ವಾತಂತ್ರ್ಯನ ಫುಲ್ ಎಂಜಾಯ್ ಮಾಡಿ ಅಂತ ಸಲಹೆ ನೀಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.