ಮತ್ತೆ ಒಂದಾದ ಚಂದನ್ ಶೆಟ್ಟಿ ನಿವೇದಿತಾ, ಮರು ಮದುವೆಗೆ ಅಸ್ತು ಎಂದ ಪೋಷಕರು

 | 
ರರಹ
ಬಿಗ್‌ ಬಾಸ್‌ ಮನೆಯಲ್ಲಿ ಪ್ರೀತಿಸಿ, ಮದುವೆಯಾಗಿದ್ದ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಅವರು ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಹೊಂದಾಣಿಕೆ ಸಮಸ್ಯೆ ಎಂದು ಈ ಜೋಡಿ ಡಿವೋರ್ಸ್‌ ಪಡೆದಿತ್ತು. ಈಗ ಇವರಿಬ್ಬರು ದಿಢೀರ್‌ ಸುದ್ದಿಗೋಷ್ಠಿ ಕರೆದು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಮನುಷ್ಯ ಅಂದಕೂಡಲೇ ಎಮೋಶನ್ಸ್‌ ಇರುತ್ತದೆ. ಹಾಗೆಯೇ ನಮಗೂ ನಾಲ್ಕು ವರ್ಷ ಜೊತೆಗಿದ್ದೆವು. ಈಗ ದೂರ ಆಗಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಾನು ನನ್ನ ಮನಸ್ಸು ಗಟ್ಟಿಮಾಡಿಕೊಳ್ಳೋಣ ಅಂದುಕೊಂಡಿದ್ದೆ. 
ನಿಜಕ್ಕೂ ನಮಗೆ ಇದು ಎಮೋಶನಲ್‌ ಆಗಿರುತ್ತದೆ. ಪರ್ಸನಲ್‌, ಪ್ರೊಫೆಶನಲ್‌ ಎರಡನ್ನೂ ಒಟ್ಟಿಗೆ ತರೋದು ಒಳ್ಳೆಯದಲ್ಲ. ಆದರೆ ಇಬ್ಬರೂ ಕರಿಯರ್‌ನಲ್ಲಿ ಮುಂದುವರೆಯಲೇಬೇಕು. ಸಿನಿಮಾ ಕೆಲಸ ಆಗಿದ್ದರಿಂದ ಇಬ್ಬರೂ ಪ್ರೊಫೆಶನಲ್‌ ಆಗಿಯೇ ಇರ್ತೀವಿ. ಈ ಸಿನಿಮಾಕ್ಕೆ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ಈ ಸಿನಿಮಾದಲ್ಲಿ ನಿವೇದಿತಾ ದೃಶ್ಯ ಜಾಸ್ತಿ ಇದೆ. ಅವರಿಗೆ ಬಾಯ್‌ಫ್ರೆಂಡ್‌ ಆಗಿ ಸಪೋರ್ಟ್‌ ಮಾಡಿರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.
ಚಂದನ್‌ ಶೆಟ್ಟಿ ಅವರನ್ನು ನೋಡಿ ನಿವೇದಿತಾ ಗೌಡ ಅವರು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದನ್ನು ನೋಡಿ ಎಲ್ಲರೂ ಇವರಿಬ್ಬರು ಮತ್ತೆ ಒಂದಾದ್ರಾ ಅಂತ ಪ್ರಶ್ನೆ ಬಂದಿತ್ತು. ಅದಕ್ಕೆ ಉತ್ತರ ಕೊಟ್ಟ ನಿವೇದಿತಾ ಗೌಡ, ನಾಲ್ಕು ವರ್ಷ ನಾವು ಒಂದು ಬಾಂಧವ್ಯ ಹೊಂದಿದ್ದೇವೆ. ನಿಜಕ್ಕೂ ಇದು ಎಮೋಶನಲ್‌ ಆಗಿತ್ತು. ಯಾವುದೇ ಪ್ರಾಜೆಕ್ಟ್‌ ಇದ್ದರೂ ಕೂಡ ಅದು ಮುಗಿಯುವಾಗ ಬೇಸರ ಆಗುತ್ತದೆ. ಹಾಗೆಯೇ ಈ ಸಿನಿಮಾ ಶೂಟಿಂಗ್‌ ಮುಗಿಯುತ್ತಿದೆ, ಹಾಗಾಗಿ ಅಳು ಬಂತು. ಈ ಸಿನಿಮಾ ಕಥೆ ತುಂಬ ಚೆನ್ನಾಗಿದೆ ಎಂದು ಹೇಳಿದ್ದರು. 
ಇನ್ನು ನಿರ್ದೇಶಕರು ಈ ಬಗ್ಗೆ ಮಾತನಾಡಿದ್ದು, ಈ ಹಿಂದೆ ಒಂದು ದೃಶ್ಯದಲ್ಲಿ ಹಗ್‌ ಮಾಡಿ, ನಿವೇದಿತಾ ಗೌಡ ಅವರು ಇಪ್ಪತ್ತು ನಿಮಿಷ ಅತ್ತಿದ್ದಾರೆ. ಆಮೇಲೆ ಸಮಾಧಾನ ಮಾಡಿದ್ದೇವೆ. ಚಂದನ್-ನಿವೇದಿತಾ ಗೌಡ ಅವರ ಜೀವನದಲ್ಲಿ ನಡೆದ ದೃಶ್ಯಗಳು ಸಿನಿಮಾದಲ್ಲಿ ಲಿಂಕ್‌ ಆಗುತ್ತವೆ. ಹೀಗಾಗಿ ಅವರೇನು ಅಂತ ನನಗೆ ಗೊತ್ತಿದೆ. ನಿವೇದಿತಾ ಗೌಡ ಅವರು ಫೈಟ್‌ ಸೀನ್‌ ಮತ್ತೆ ಕೊಡಿ ಎಂದು ಹೇಳಿದ್ದರು. ಈ ರೀತಿ ಕಲಾವಿದರು ಸಿಕ್ಕರೆ ನಿರ್ದೇಶಕರು ಮತ್ತೆ ಏನು ಬೇಕಿದ್ರೂ ಮಾಡಬಹುದು ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.