ಟ್ಯೂನ್ ಕಳ್ಳ ಚಂದನ್ ಶೆಟ್ಟಿ, ಕದ್ದಿರೋದು ನಿಜ ಆದರೆ ಎಷ್ಟು ವರ್ಷ ಜೈಲು ಗೊ ತ್ತಾ

 | 
Nko
ಹೊಸ ವರ್ಷಕ್ಕೆ ಭರ್ಜರಿಯಾಗಿ ರಿಲೀಸ್ ಆದ ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಸಾಂಗ್ ಟ್ರೆಂಡಿಂಗ್‌ನಲ್ಲಿದೆ. ಆದರೆ ಈ ಸಾಂಗ್ ಮೇಲೆ ಟ್ಯೂನ್ ಕದ್ದಿರೋ ಆರೋಪ ಮಾಡ್ತಿದ್ದಾರೆ ರ‍್ಯಾಪರ್ ವೈ ಬುಲ್ ಯುವರಾಜ್.Candy music album ನಲ್ಲಿರುವ ಈ ಟ್ಯೂನ್ ನ್ನು ತಾವು 6 ವರ್ಷಗಳ ಹಿಂದೆಯೇ ವೈ ಬುಲ್ ಪಾರ್ಟಿ ಎಂಬ ಹಾಡಿನಲ್ಲಿ ಬಳಸಿದ್ದೇನೆ. ಕಾಟನ್ ಕ್ಯಾಂಡಿ ಟ್ಯೂನ್ ನನ್ನ ಪಾರ್ಟಿ ಸಾಂಗ್ ನ ನಕಲಿಯಂತೆಯೇ ಇದೆ ಎಂದು Yuvaraj ಆರೋಪಿಸಿದ್ದಾರೆ.
ಸ್ನೇಹಿತರೇ..ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ ರಿಲೀಸ್ ಆಗಿದೆ. ಈ ಮ್ಯೂಸಿಕ್ ಆಲ್ಬಮ್ ನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶಿಸಿದ್ದಾರೆ ಎನ್ನುವುದು ಗಮನಾರ್ಹ. ಚಂದನ್ ಶೆಟ್ಟಿ 2011 ರಿಂದ ರ್‍ಯಾಪ್ ಹಾಡುಗಳ ಮೂಲಕ ಮೂಲಕ ಖ್ಯಾತಿ ಪಡೆದಿದ್ದಾರೆ.3 ಪೆಗ್ , ಚಾಕಲೇಟ್ ಗರ್ಲ್ ಹೀಗೆ ಸುಮಾರಿಷ್ಟು ಪಾರ್ಟಿ ಸಾಂಗ್ ಮಾಡಿದ್ದಾರೆ.ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ನಟ, ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದಾರೆ. ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ, ಮೇಡ್ ಫಾರ್ ಈಚ್ ಅದರ್' ಎಂಬಂತೆ ಚಿಂದಿ ಮಾಡಿದ್ದಾರೆ. 
ಸ್ನೇಹಿತರೇ... ಪತ್ನಿ ನಿವೇದಿತಾ ಜೊತೆ ಡೈವೋರ್ಸ್ ಪಡೆದ ಮೇಲೆ ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ಇದೊಂದು ಟ್ರೆಂಡ್ ಸಾಂಗ್ ಆಗಿದೆ. ಇದು ನಾನು ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್‌ ಗಳಿಗೆ ಕೊಟ್ಟ ನ್ಯೂ ಈಯರ್‌ಗೆ ಗಿಫ್ಟ್' ಎಂದು ಚಂದನ್ ಶೆಟ್ಟಿ ಹೇಳಿಕೊಂಡಿದ್ರು.
ಸ್ನೇಹಿತರೇ... ಆದ್ರೆ ಇದೀಗ ವೈ ಬುಲ್ ರಾಕ್‌ಸ್ಟಾರ್ ಯುವರಾಜ್ ಅವರು 'ನಾನು ಆರು ವರ್ಷಗಳ ಹಿಂದೆ 'ವೈ ಬುಲ್' ಸಾಂಗ್ ಮಾಡಿದ್ದೆ. ಅದೇ ಟ್ಯೂನ್‌ ಬಳಸಿ ಚಂದನ್ ಶೆಟ್ಟಿ ಅವರು ಈಗ ಕಾಟನ್ ಕ್ಯಾಂಡಿ ಮಾಡಿದ್ದಾರೆ. ಆದ್ದರಿಂದ ನಾನು ಈಗ ದೂರು ನೀಡಲು ಸಜ್ಜಾಗಿದ್ದೇನೆ' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ ಹೌದು, 'ವೈ ಬುಲ್' ರಾಕ್‌ಸ್ಟಾರ್ ಯುವರಾಜ್ ಅವರ 6 ವರ್ಷಗಳ ಹಿಂದಿನ ಸಾಂಗ್‌ಅನ್ನು ನಾನು ಈಗ ಕೇಳಿದೆ.. ನನ್ನ ಕಾಟನ್ ಕ್ಯಾಂಡಿ ಹಾಗೂ ವೈ ಬುಲ್ ಆ ಹಾಡಿನ ಟ್ಯೂನ್‌ನಲ್ಲಿ ಸಿಮಿಲಾರಿಟಿ ಇದೆ.
    ಆದರೆ ಅದು ಆಕಸ್ಮಿಕವಷ್ಟೇ. 6 ವರ್ಷಗಳ ಹಿಂದೆ ಲಾಂಚ್ ಆಗಿದ್ದ ಆ ಹಾಡು ಸೂಪರ್ ಹಿಟ್ ಆಗಿರಲಿಲ್ಲ. ಹೀಗಾಗಿ ನಾನು ಆ ಟ್ಯೂನ್‌ ಅನ್ನು ಕದ್ದು ಮಾಡುವ ಅಗತ್ಯವೇ ಇಲ್ಲ. ಸಾಮಾನ್ಯವಾಗಿ ಯಾರೇ ಆದರೂ ಜಗತ್ತಿನಲ್ಲಿ, ಗೆದ್ದ ಟ್ಯೂನ್ ಕದ್ದ ಉದಾಹರಣೆ ಇದೆ. ಆದರೆ ಅಷ್ಟೇನೂ ಹಿಟ್ ಆಗದೇ ಇರುವ ಹಾಡಿನ ಟ್ಯೂನ್ ಕದ್ದು ಮತ್ತೆ ಅದನ್ನು ಹೊರತರುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಜಗತ್ತಿನಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಒಂದೇ ರೀತಿಯ ಟ್ಯೂನ್ ಮಾಡುವ ಚಾನ್ಸ್ ಇದೆ  ಎಂಬುದು ಗೂಗಲ್ ಕೂಡ ಹೇಳುತ್ತದೆ. ಹೀಗಾಗಿ, ನನ್ನ ಹಾಡು ವೈ ಬುಲ್‌ ಹಾಡಿನ ಟ್ಯೂನ್‌ಗೆ ಹೋಲಿಕೆ ಆಗುತ್ತಿರುವುದು 'ಬೈ ಚಾನ್ಸ್' ಅಷ್ಟೇ. ಸಂಗೀತಗಾರರು ಪ್ರತಿಯೊಬ್ಬರೂ ಕೆಲವು ಟ್ಯೂನ್‌ಗಳಿಂದ ಪ್ರೇರಣೆ ಪಡೆದೇ ಇರುತ್ತಾರೆ. ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಕದ್ದು ಮಾಡುವ ಹಾಡುಗಳು, ಟ್ಯೂನ್ ಗಳು, ಪ್ರೇರಣೆ ಪಡೆದಿದ್ದೇವೆ ಹೇಳೋದು ಚಿತ್ರರಂಗದಲ್ಲಿ ಹೊಸತೇನಲ್ಲ. ಈ ಹಿಂದೆ ಕೂಡ ಹಲವಾರು ವ್ಯಕ್ತಿಗಳು ಮಾಡಿದ್ದಾರೆ.ಸಂಗೀತದ ಸ್ವರಗಳು ಲಿಮಿಟೆಡ್ ಇರೋದ್ರಿಂದ ಟ್ಯೂನ್‌ಗಳು ಕೂಡ ಲಿಮಿಟೆಡ್ ಆಗಿರುತ್ತವೆ. ಅವುಗಳಿಂದ ಹಲವಾರು ಹಾಡುಗಳು ಹುಟ್ಟಿಕೊಳ್ಳುತ್ತವೆ. ಈ ಕಾಟನ್ ಕ್ಯಾಂಡಿ ಕೂಡ ಅದೇ ರೀತಿ ವೈ ಬುಲ್‌ ಹಾಡಿಗೆ ಹೋಲಿಕೆ ಆಗಿರಬಹುದು ಅಷ್ಟೇ. ಒಟ್ಟಿನಲ್ಲಿ, ಕಾಟನ್ ಕ್ಯಾಂಡಿ ಈಗ ಬಿಸಿ ಆಗುತ್ತಿರೋದಂತೂ ಸತ್ಯ.