ನಿವೇದಿತಾ ಗೌಡಗೆ ತುಂಬಾ ಕೆಟ್ಟದಾಗಿ ಕಾಮೆಂಟ್ ಹಾಕ್ತಾರೆ, ಚಂದನ್ ಶೆಟ್ಟಿ ವಾರ್ನ್
Mar 21, 2025, 10:50 IST
|

ಸಖತ್ ರೀಲ್ ಮಾಡ್ತಾ.ಅಲ್ಲಿ ಇಲ್ಲಿ ತಿರುಗಾಡ್ತಾ ಕಿರುತೆರೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟು ಡಿವೋರ್ಸ್ ಪಡೆದು ಬೇರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ನಿವೇದಿತಾ ಗೌಡ ಡಿವೋರ್ಸ್ ಬಳಿಕ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ಇದರಿಂದ ಅನೇಕರು ನಿವೇದಿತಾ ಗೌಡ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಕೆಟ್ಟ ಹಾಗೂ ಅಶ್ಲೀಲ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಮಾಜಿ ಪತ್ನಿಗೆ ಬರುತ್ತಿರುವ ಕಮೆಂಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತಾಗಿ ನ್ಯಾಷನಲ್ ಟಿವಿ ಜೊತೆ ಮಾತನಾಡಿದ ಅವರು, ಜನರು ನನ್ನ ಬಗ್ಗೆ ಅತೀ ಪ್ರೀತಿ ತೋರಿಸಲು ಕಾರಣ ಕೂಡ ಇದೆ. ಯಾಕೆಂದರೆ ನನ್ನ ಅಭಿಮಾನಿಗಳು, ನನ್ನ ಫಾಲೋವರ್ಸ್ ನನ್ನ ಈ ಪ್ರಯಾಣವನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದಾರೆ. ನನ್ನ ಏಳು ಬೀಳುಗಳಲ್ಲಿ ಅವರು ಜೊತೆಯಾಗಿ ನಿಂತಿದ್ದಾರೆ. ನಾನು ಎಲ್ಲಿಂದ ಶುರು ಮಾಡಿದೆ. ನಾನು ಯಾವ ಊರಿನಿಂದ ಬಂದೆ, ನಾನು ಇಲ್ಲಿ ಎಷ್ಟು ಕಷ್ಟಪಟ್ಟೆ, ಈ ಸ್ಥಾನಕ್ಕೆ ಬರಲು ನಾನು ಪಟ್ಟಕಷ್ಟವನ್ನು ಪಿನ್ ಟು ಪಿನ್ ನೋಡಿದ್ದಾರೆ.
ನನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ನೋಡಿದ್ದು ಬಿಗ್ ಬಾಸ್‌ನಲ್ಲಿ. ನನ್ನನ್ನು ಜನ ಬಿಗ್ ಬಾಸ್‌ನಲ್ಲಿ ಅರ್ಥೈಸಿಕೊಂಡಿದ್ದಾರೆ. ಅಲ್ಲಿ ನನ್ನ ಜೀವನದ ಏಳು ಬೀಳುಗಳನ್ನು ಹೇಳಿಕೊಳ್ಳಲು ತುಂಬಾ ಅವಕಾಶ ಮಾಡಿಕೊಟ್ಟಿದ್ದರು. ನನಗಂತಲ್ಲ ಪ್ರತಿ ಸೀಜನ್‌ನಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಅವರ ಜೀವನದ ಬಗ್ಗೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಅದರಲ್ಲಿ ನಾನು ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಹೇಳಿಕೊಂಡಿದ್ದೇನೆ. ಆ ಬಾಂಧವ್ಯ ಜನರ ಜೊತೆ ಬೆಳೆದಿದೆ ಎಂದಿದ್ದಾರೆ
ನಾನು ನಿವೇದಿತಾ ಪರಿಚಯ ಆಗಿದ್ದೇ ಬಿಗ್ ಬಾಸ್‌ನಲ್ಲಿ. ಸುಮಾರು ಆರು ವರ್ಷಗಳು ನಾನು ಮತ್ತು ನಿವೇದಿತಾ ಒಟ್ಟಿಗೆ ಇದಿದ್ದನ್ನು ಜನರು ನೋಡಿದ್ದಾರೆ. ಅವರು ನನ್ನ ಬಿಟ್ಟು ಹೋಗಿದ್ದಾರೆ ಅಂತಲ್ಲಾ, ಏನೋ ಒಂದು ಹೊಂದಾಣಿಕೆ ಇಲ್ಲದ ಕಾರಣ ಇಬ್ಬರು ಪರಸ್ಪರ ಒಪ್ಪಿ ನಿರ್ಧರಿಸಿರುವುದು. ಹೀಗಾಗಿ ನನ್ನ ಮೇಲೆ ಪ್ರೀತಿ ಇಟ್ಟಿರುವುದಕ್ಕಾಗಿ ಖುಷಿ ಇದೆ. ಆದರೆ ಅವರಿಗೆ ಬರುವ ನೆಗೆಟಿವ್ ಕಮೆಂಟ್‌ಗಳನ್ನು ನೋಡಿದರೆ ನನಗೂ ಮನಸ್ಸಿಗೆ ಬೇಜಾರಾಗುತ್ತದೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.