ನೆಚ್ಚಿನ ದಾ ಸನಿಗೆ 'ಮೂರು ಪೆಗ್ಗಿನ' ಚಂದನ್ ಶೆಟ್ಟಿಯ ಹಾಡು
ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನಟಿ ಸುಮಾರು ಮೂರು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಇದೀಗ ಈ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಸಂಪೂರ್ಣವಾಗಿ ಪ್ರಕರಣದಿಂದ ಹೊರಬಂದಿದ್ದಾರೆ.
ಆದರೆ ಈ ಕೇಸ್‌ನಲ್ಲಿ ಅವರನ್ನು ಸಿಲುಕಿಸಿದ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇತ್ತೀಚಿಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ನಾನೆಷ್ಟು ಕನ್ನಡತಿ ಅಂದರೆ ನಾನು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ. ಕನ್ನಡ ಮಾತನಾಡುತ್ತೇನೆ. ಕನ್ನಡ ಚಿತ್ರರಂಗಕ್ಕೆ ಬಂದ ಮೇಲೆ ಕನ್ನಡ ಓದುವುದನ್ನು ಕಲಿತಿದ್ದೇನೆ.
ಯಾಕೆಂದರೆ ನಾನು ಶಾಶ್ವತವಾಗಿ ಅಂದರೆ ನನ್ನ ಕೊನೆ ಉಸಿರು ಇರುವ ತನಕ ಕನ್ನಡದ ನಟಿಯಾಗಬೇಕು ಎಂದು, ಎಷ್ಟು ಕಷ್ಟಪಟ್ಟು ಸ್ಪಷ್ಟವಾಗಿ ಕನ್ನಡ ಕಲಿತಿದ್ದೇನೆ. ಆ ಕಷ್ಟ ನನಗೆ ಗೊತ್ತು. ಇಷ್ಟು ಕನ್ನಡದ ಬಗ್ಗೆ ಕನ್ನಡದ ಹುಡುಗಿಯರು ಸಹ ಮಾತನಾಡಲ್ಲ. ಒಂದೂ ಇಂಗ್ಲಿಷ್ ಮಾತನಾಡದೇ ನಾವು ಅಷ್ಟು ಸ್ಪಷ್ಟವಾಗಿ ಅಷ್ಟು ಸರಿಯಾಗಿ ಕನ್ನಡ ಮಾತನಾಡುತ್ತೇವೆ ಎಂದರೆ ಅದು ನಮ್ಮ ಡೆಡಿಕೇಷನ್.
ಕನ್ನಡ ಕಲಿಯುವ ನನ್ನ ಪ್ರಯತ್ನ ನಾನು ಮಾಡುತ್ತಲೇ ಇರುತ್ತೇನೆ. ಒಳ್ಳೆ ಪಾತ್ರ ಸಿಗಬೇಕು ಎಂದು ನಾನು ಮಾಡುತ್ತಲೇ ಇರುತ್ತೇನೆ ಎಂದರು.ಹೀಗಿರುವಾಗ ಇಂತಹ ಪ್ರಕರಣದಲ್ಲಿ ಇಡೀ ಕರ್ನಾಟಕದಲ್ಲಿ ಸಿಕ್ಕಿದ್ದು ಇಬ್ಬರು ಹೆಣ್ಣು ಮಕ್ಕಳೆನಾ..? ಅದರಲ್ಲೂ ಉತ್ತರ ಭಾರತದವರು ಅಂತಾ ಮೂಲೆಗೆ ಹಾಕಿ ಚಚ್ಚಿ ಹಾಕಿದ್ದೀರಾ, ಬೇರೆ ಯಾರೂ ಸಿಗಲಿಲ್ವಾ..?
ಎಲ್ಲಾ ಕನ್ನಡ ಇಂಡಸ್ಟ್ರಿ ಗಂಡಸರು, ವಿವಿಐಪಿಗಳ ಮಕ್ಕಳು, ಯಾರ್ಯಾರು ಪಾರ್ಟಿ ಮಾಡುತ್ತಾರೆ ಅವರೆಲ್ಲಾ ಏನು ಬಳೆ ಹಾಕಿಕೊಂಡಿದ್ದಾರಾ? ನಾನು ಮತ್ತೆ ರಾಗಿಣಿನೇ ಜಂಟ್ಸ್ ಆಗಿದ್ದೇವಾ ಇಲ್ಲಿ ಎಂದು ಬಹಳ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.