ಯೂಟ್ಯೂಬ್ ಚಾನಲ್‌ ಮೂಲಕ ದಿನಲೂ ಗಿರಾಕಿಗಳನ್ನು ಮನೆಗೆ ಕರೆಯುತ್ತಿದ್ದ ಚಂದುಳ್ಳಿ ಚೆಲುವೆಯರು

 | 
Nd
ಈಗೆಲ್ಲಾ ಕಾಲ ಬದಲಾಗಿದೆ. ಜನರಿಗೆ ಬೇಗನೆ ದುಡ್ಡು ಮಾಡುವ ಆಸೆ ತಲೆಗೇರಿದೆ.ಯೂಟ್ಯೂಬ್ ಚಾನೆಲ್ ಸ್ಟುಡಿಯೋ ಒಳಗೆ ಸ್ಪಾ ಸೆಂಟರ್ ನಡೆಸುತ್ತಿದ್ದು, ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂಬ ದೂರುಗಳು ಬಂದ ಬೆನ್ನಲ್ಲೇ ಮಾಚವರಂ ಸಿಐ ಪ್ರಕಾಶ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ವೆಟರ್ನರಿ ಕಾಲೋನಿ ಸರ್ವಿಸ್ ರಸ್ತೆಯಲ್ಲಿರುವ ಸ್ಟುಡಿಯೋ 9 ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಸಲಿ ಸತ್ಯ ಗೊತ್ತಾಗಿ ಪೊಲೀಸರಿಗೆ ಶಾಕ್ ಆಗಿದೆ.
ಆರೋಪಿಗಳು ಎಪಿ 23 ಹೆಸರಿನಲ್ಲಿ ಯೂಟ್ಯೂಬ್ ನ್ಯೂಸ್ ಚಾನೆಲ್ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೆ, ಒಳಗೆ ಸ್ಪಾ ಸೆಂಟರ್ ಮೂಲಕ ಅಕ್ರಮ ಚಟುವಟಿಕೆಗಳಲ್ಲಿ ತೊಡದಿದ್ದರು. ದಾಳಿಯ ವೇಳೆ 10 ಮಹಿಳೆಯರು ಮತ್ತು 13 ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಎಲ್ಲಾ ಮಹಿಳೆಯರು ಬೇರೆ ರಾಜ್ಯಗಳಿಗೆ ಸೇರಿದವರು ಎಂದು ಗುರುತಿಸಲಾಗಿದೆ.
ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಚಲಸಾನಿ ಪ್ರಸನ್ನ ಭಾರ್ಗವ್ ಎಂಬಾತ ಸ್ಪಾ ಸೆಂಟ‌ರ್ ನಡೆಸುತ್ತಿದ್ದ ಎಂದು ಪೊಲೀಸರು ಗುರುತಿಸಿದ್ದಾರೆ. ಸದ್ಯ ಭಾರ್ಗವ್ ತಲೆಮರೆಸಿಕೊಂಡಿದ್ದಾನೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಹೊರಗೆ ನೋಡೋಕೆ ನ್ಯೂಸ್ ಚಾನಲ್ ಆದ್ರೆ ಅಲ್ಲಿನ ಅಸಲೀಯತ್ತು ಬೇರೇನೇ ಇತ್ತು. ಹಲವಾರು ಜನ ದೂರು ದಾಖಲಿಸಿದ್ದ ಪರಿಣಾಮವಾಗಿ ಇದೀಗ ಆ ಜಾಗಕ್ಕೆ ಪೊಲೀಸ್ ರೈಡ್ ನಿಂದಾಗಿ ಇವರುಗಳು ಮಾಡುತ್ತಿದ್ದ ಮೋಸ ಹೊರಬಿದ್ದಿದೆ. ಇನ್ನು ಸ್ಪಾ ಮಾಲಿಕನಿಗೆ ಬಿರುಸಿನ ಹುಡುಕಾಟ ನಡೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.