6 ಮಗುವಿಗೆ ಜನ್ಮ ನೀಡಿದ ಚಾರ್ಲಿ; ಒಮ್ಮೆಲ್ಲೇ ಒಡೋಡಿ ಬಂದ ರಕ್ಷಿತ್ ಶೆಟ್ಟಿ

 | 
Gh

ಎರಡು ವರ್ಷಗಳ ಹಿಂದೆ ತೆರೆಕಂಡ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ? 777 ಚಾರ್ಲಿ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಚಾರ್ಲಿಯು ಮರಿಗೆ ಜನ್ಮ ನೀಡಿ, ಪ್ರಾಣ ಬಿಡುತ್ತದೆ. ಈ ಸೀನ್ ನೋಡಿದ್ದ ಪ್ರೇಕ್ಷಕರು ಕಣ್ಣೀರಿಟ್ಟಿದ್ದರು. ಆದರೆ ಈಗ ರಿಯಲ್ ಆಗಿ ಮುದ್ದಾದ ಮರಿಗಳಿಗೆ ಚಾರ್ಲಿ ಜನ್ಮ ನೀಡಿದ್ದು, ಎಲ್ಲರಲ್ಲೂ ಸಂತಸವನ್ನು ಉಂಟು ಮಾಡಿದೆ.

ಹೌದು, ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದ ಶ್ವಾನವು ಈಗ ರಿಯಲ್ ಆಗಿ ತಾಯಿ ಆಗಿದೆ. ಒಂದಲ್ಲಾ ಎರಡಲ್ಲಾ ಆರು ಮರಿಗಳಿಗೆ ಚಾರ್ಲಿ ಈಗ ಜನ್ಮ ನೀಡಿದ್ದಾಳೆ. ಅದರಲ್ಲಿ ಐದು ಹೆಣ್ಣು ಮರಿಗಳಿದ್ದರೆ, ಒಂದು ಗಂಡು ಮರಿ ಇದೆ. ಅಂದಹಾಗೆ, ಚಾರ್ಲಿ ಮೈಸೂರಿನಲ್ಲಿ ಇದ್ದಾಳೆ. 777 ಚಾರ್ಲಿ ಸಿನಿಮಾಕ್ಕಾಗಿ ಚಾರ್ಲಿಗೆ ತರಬೇತಿ ನೀಡಿದ್ದವರು ಪ್ರಮೋದ್. 

ಸದ್ಯ ಅವರ ಮನೆಯಲ್ಲಿ ಚಾರ್ಲಿ ವಾಸವಾಗಿದ್ದು, ಇದೀಗ ಸಂತಸದ ವಿಷಯ ತಿಳಿದು ನಟ ರಕ್ಷಿತ್ ಶೆಟ್ಟಿ ಅವರು ಮೈಸೂರಿಗೆ ಭೇಟಿ ನೀಡಿ, ಚಾರ್ಲಿಯನ್ನು ಕಂಡು ಸಂಭ್ರಮಿಸಿದ್ದಾರೆ.ಚಾರ್ಲಿ ಮರಿಗಳಿಗೆ ಜನ್ಮ ನೀಡಿದ ವಿಚಾರವನ್ನು ತಿಳಿಯುತ್ತಿದ್ದಂತೆಯೇ ಸಖತ್ ಖುಷಿಯಾದ ರಕ್ಷಿತ್ ಶೆಟ್ಟಿ ಅವರು, ಮೈಸೂರಿಗೆ ಹೋಗಿ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ. 

ಇಷ್ಟು ವರ್ಷ ಕಳೆದರೂ ಯಾಕೆ ಚಾರ್ಲಿ ಮರಿ ಹಾಕಿಲ್ಲ ಎಂಬ ಆತಂಕ 777 ಚಾರ್ಲಿ ಟೀಮ್‌ಗೆ ಇತ್ತಂತೆ. ಇದೀಗ ಅದು ದೂರವಾಗಿದೆ. ಮೇ 9ರಂದು 6 ಮರಿಗಳಿಗೆ ಚಾರ್ಲಿ ತಾಯಿ ಆಗಿದ್ದಾಳೆ.ನಮ್ಮ 777 ಚಾರ್ಲಿ ಸಿನಿಮಾ ರಿಲೀಸ್ ಆಗಿ 2 ವರ್ಷ ಆಯ್ತು. ಸಿನಿಮಾ ಬಿಡುಗಡೆ ಆದಮೇಲೆ ಚಾರ್ಲಿ ತಾಯಿ ಆಗಬೇಕು, ಅದು ಮರಿಗಳಿಗೆ ಜನ್ಮ ನೀಡಬೇಕು ಎಂಬ ಆಸೆ ನಮಗೆಲ್ಲರಿಗೂ ಇತ್ತು.

 ಆಗಲೇ ಅವಳ ಜರ್ನಿಗೆ ಒಂದು ಪರಿಪೂರ್ಣತೆ ಸಿಗುತ್ತದೆ ಎಂಬ ಫೀಲಿಂಗ್ ನಮ್ಮ ತಂಡಕ್ಕೆ ಇತ್ತು. ಚಾರ್ಲಿ ತಾಯಿ ಆಗಬೇಕು ಎಂಬುದನ್ನು ನಾನು ತುಂಬ ಸಮಯದಿಂದ ಎದುರು ನೋಡುತ್ತಿದ್ದೆ. ಪ್ರಮೋದ್‌ಗೆ ಫೋನ್ ಮಾಡಿದಾಗೆಲ್ಲಾ, ಇದರ ಬಗ್ಗೆ ಕೇಳ್ತಾ ಇದ್ದೆ. ವಯಸ್ಸಾಗಿದೆ, ಅನುಮಾನ..ಅಂತಲೇ ಅವರು ಹೇಳುತ್ತಿದ್ದರು. ಅಚ್ಚರಿ ಎಂದರೆ, ಮೇ 9ರಂದು 6 ಪಪ್ಪಿಗಳಿಗೆ ಜನ್ಮ ನೀಡಿದ್ದಾಳೆ ಚಾರ್ಲಿ. ಅವುಗಳನ್ನು ನೋಡುವುದಕ್ಕಾಗಿ ಮೈಸೂರಿಗೆ ಬಂದಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.