ಸಿನಿಮಾದಲ್ಲಿ ಅವಕಾಶವಿಲ್ಲದೆ ರಸ್ತೆ ಬದಿ ಬಟ್ಟೆ ವ್ಯಾಪಾರ ಮಾಡುತ್ತಿರುವ ಚಾರುಲತಾ

 | 
ರಪು

ಹಲ್ಲಿನ ಮೇಲೊಂದು ಹಲ್ಲಿದ್ದರೂ ಮಲ್ಲಿಗೆಯಂಥ ನಗುವನ್ನು ಚೆಲ್ಲುತ್ತಲೇ ಕನ್ನಡ ಪ್ರೇಕ್ಷಕರನ್ನು ಸೆಳೆದಿದ್ದ ಚಂದನವನದ ಚೆಲುವೆ ಚಾರುಲತಾ ಈಗೆಲ್ಲಿದ್ದಾರೆ? ಏನು ಮಾಡಿಕೊಂಡಿದ್ದಾರೆ? ಅತ್ಯಂತ ಬೇಡಿಕೆಯಲ್ಲಿದ್ದ ನಟಿ ಚಿತ್ರರಂಗದಿಂದ ದೂರಾಗಿದ್ದೇಕೆ?

'ಓ ಮಲ್ಲಿಗೆ' ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ನಟಿ ಚಾರುಲತಾ ಕಾಣಿಸಿಕೊಂಡಾಗ ಈ ಚಂದುಳ್ಳಿ ಚೆಲುವು ಚಂದನವನದ ದಂತದ ಬೊಂಬೆ ಎಂದೇ ಕನ್ನಡಿಗರು ಒಪ್ಪಿಕೊಂಡಿದ್ದರು. ಉಜಾಲಾ ಜಾಹಿರಾತಿನಿಂದ ಖ್ಯಾತಿ ಪಡೆದಿದ್ದ ಸೋನಿಯಾ ಎಂಬ ಹುಡುಗಿಯನ್ನು ಓ ಮಲ್ಲಿಗೆ ಚಿತ್ರಕ್ಕೆ ಆಯ್ಕೆ ಮಾಡಿದಾಗ ವಿ. ಮನೋಹರ್ ಚಾರುಲತಾ ಎಂದು ನಾಮಕರಣ ಮಾಡಿದ್ದರು.

ಸುಮಾರು 50 ಚಿತ್ರಗಳಲ್ಲಿ ನಟಿಸಿರುವ ಚಾರುಲತಾ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರಾಗುವ ಮುನ್ನ ಕನ್ನಡ, ಒಡಿಯಾ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಈಗಲೂ ಟಿವಿಯಲ್ಲಿ ನೀಲಾಂಬರಿ, ಜೋಡಿಹಕ್ಕಿ, ಮದುವೆ, ಜಗತ್ ಕಿಲಾಡಿ, ಪಾಂಡವರು, ಹಬ್ಬದಂತ ಚಿತ್ರಗಳು ಕಾಣಿಸಿಕೊಂಡಾಗ ಈ ಸುಂದರಿ ಎಲ್ಲಿ ಹೋದರೆಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. 

ಆದರೆ, ಹಲವಾರು ವರ್ಷಗಳಿಂದ ಕಣ್ಮರೆಯಾಗಿದ್ದ ಚಾರುಲತಾ ಈ ವರ್ಷ ತಮ್ಮ 50ನೇ ಚಿತ್ರ ಕಲಿಗಾಲದೊಂದಿಗೆ ಕನ್ನಡಿಗರ ಮುಂದೆ ಬರಲಿದ್ದಾರೆ. ಆಕೆಗೆ ಸಿನಿಮಾ ಬದುಕು ಸಾಕೆನಿಸಿದ್ದೇ ಅವರು ಮರೆಯಾಗಲು ಕಾರಣ. ಕೇವಲ ತನ್ನ ಫ್ರೆಂಡ್ ಸಾಯಿಕುಮಾರ್‌ಗಾಗಿ ತಾನು ಈ ಚಿತ್ರ ಒಪ್ಪಿಕೊಂಡಿರುವುದಾಗಿ ನಟಿ ಹೇಳಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆ ಕಾಣಲಿದೆ.ಪಂಜಾಬಿ ಚೆಲುವೆ ಚಾರುಲತಾ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳೇ ಕಳೆದಿವೆ. 

ಈಗಲೂ ಅವರಿಗೆ ಕನ್ನಡದಲ್ಲಿ ಐಟಂ ಸಾಂಗ್‌ಗಳಿಗೆ ಆಫರ್ ಬರುತ್ತವಂತೆ. ಆದರೆ ಆಕೆ ಒಪ್ಪಿಕೊಳ್ಳುತ್ತಿಲ್ಲ. ಇಷ್ಟಕ್ಕೂ ಚಾರುಲತಾ ಈಗೇನು ಮಾಡಿಕೊಂಡಿದ್ದಾರೆ ಗೊತ್ತಾ? ದೆಹಲಿಯಲ್ಲಿ ತಾಯಿಯೊಂದಿಗಿದ್ದು, ಗಾರ್ಮೆಂಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು, ಇದು ಅವರೇ ಇಷ್ಟ ಪಟ್ಟು ಮಾಡುತ್ತಿರುವ ಬಿಸ್ನೆಸ್. ಇನ್ಸ್ಟಾಗ್ರಾಂನಲ್ಲಿ ಬಹಳ ಆ್ಯಕ್ಟಿವ್ ಆಗಿರುವ ನಟಿ ಆಗಾಗ ರೀಲ್ಸ್ ಹಾಕುತ್ತಲೇ ಇರುತ್ತಾರೆ. ಈ ರೀಲ್ಸ್‌ಗಳಲ್ಲಿ ಆಗಾಗ ತಮ್ಮ ಕನ್ನಡ ಪ್ರೀತಿಯನ್ನೂ ವ್ಯಕ್ತಪಡಿಸುತ್ತಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.