ವೀಕ್ಷಕರಿಗೆ ಬಾರಿ ಮೋಸ; ನಮ್ಮಮ್ಮ ಸೂಪರ್ ಸ್ಟಾರ್ ವಿನ್ನರ್ ಹೆಸರು ಇ ಲ್ಲಿದೆ

 | 
Jd

ಊಪರ್ ಖಾಸಗಿ ವಾಹಿನಿಯ ಖ್ಯಾತ ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3 ರಿಯಾಲಿಟಿ ಶೋ ಅಂತ್ಯವಾಗಿದೆ. ಇಷ್ಟುದಿನಗಳ ಜರ್ನಿಗೆ ತೆರೆ ಬಿದ್ದಿದೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ ಅವರು ಈ ಶೋನ ಅತಿಥಿಯಾಗಿದ್ದರು. ಮೂರು ಸ್ಥಾನ ಪಡೆದವರಿಗೆ ಹಣ ಕೂಡ ಬಹುಮಾನವಾಗಿ ಸಿಕ್ಕಿದೆ. ಹಾಗಾದರೆ ಯಾರು ಯಾರಿಗೆ ಎಷ್ಟು ಬಹುಮಾನ ಸಿಗ್ತು? ಈ ಬಗ್ಗೆ ತಿಳಿದ್ರೆ ಆಶ್ಚರ್ಯ ಪಡ್ತೀರಿ.

ಸೃಜನ್ ಲೋಕೇಶ್, ತಾರಾ, ಅನು ಪ್ರಭಾಕರ್ ಅವರು ಈ ಶೋನ ಜಡ್ಜ್ ಆಗಿದ್ದರು. ಕಳೆದ ಮೂರು ಸೀಸನ್‌ಗಳಿಂದಲೂ ಇವರೇ ಈ ಶೋ ತೀರ್ಪುಗಾರರಾಗಿದ್ದರು. ಕಳೆದ ಎರಡು ಸೀಸನ್‌ಗಳಿಗೆ ಅನುಪಮಾ ಗೌಡ ಅವರು ನಿರೂಪಕರಾಗಿದ್ದರೆ, ಈ ಬಾರಿ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುಷ್ಮಾ ರಾವ್ ಅವರು ಈ ಸೀಸನ್‌ನ ನಿರೂಪಣೆ ಜವಾಬ್ದಾರಿ ಹೊತ್ತಿದ್ದರು.

ಇನ್ನು ಈ ಸಲ ಸಾರಿಕಾ-ಮೃದಿನಿ, ಚೈತ್ರಾ-ದುಷ್ಯಂತ್ ರನ್ನರ್ ಅಪ್ ಆದರೆ, ಶಿಲ್ಪಾ ವಿಯಾನ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಶೋನಿಂದ ಅನೇಕರಿಗೆ ಜನಪ್ರಿಯತೆ ಸಿಕ್ಕಿದ್ದು, ಕೆಲವರು ತಮಗೆ ಸಿಕ್ಕ ಜನಪ್ರಿಯತೆಯಿಂದ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಸಾರಿಕಾ-ಮೃದಿನಿ ಈ ಶೋನ ಟ್ರೋಫಿ ಗೆದ್ದಿದ್ದಾರೆ. ಇವರಿಗೆ 5 ಲಕ್ಷ ರೂಪಾಯಿ ಹಣ ಬಹುಮಾನ ಸಿಕ್ಕಿದೆ. 

ಈ ಸೀಸನ್‌ನ ಮೊದಲ ಸ್ಥಾನ ಪಡೆದಿರೋದಿಕ್ಕೆ ಸಾರಿಕಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಸಾರಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತ ವಿಡಿಯೋ ಕಂಟೆಂಟರ್ ಎನಿಸಿಕೊಂಡು ಫೇಮಸ್ ಆಗಿದ್ದಾರೆ. ಸಿಲ್ಲಿ ಲಲ್ಲಿ ಧಾರಾವಾಹಿ ನಟ ಆನಂದ್ ಅವರ ಪತ್ನಿ ಚೈತ್ರಾ ಅವರು ಈ ಶೋನಲ್ಲಿ ಮಗ ದುಷ್ಯಂತ್ ಜೊತೆ ಭಾಗವಹಿಸಿದ್ದರು. ಇವರಿಗೆ 2 ಲಕ್ಷ ರೂಪಾಯಿ ಹಣ ಬಹುಮಾನ ಸಿಕ್ಕಿದೆ. 

ದುಷ್ಯಂತ್ ಅವರಿಗೆ ಚಿಕನ್ ಅಂದರೆ ತುಂಬ ಇಷ್ಟ. ದುಷ್ಯಂತ್ ಹೊರಗಡೆ ಕಂಡರೆ ವೀಕ್ಷಕರು ‘ಚಿಕನ್ ಸ್ಟಾರ್’ ಅಂತ ಕರೆಯಲು ಶುರು ಮಾಡಿದ್ರಂತೆ. ಇದು ಚೈತ್ರಾಗೆ ತುಂಬ ಖುಷಿ ಕೊಟ್ಟಿದೆಯಂತೆ. ಆದ್ರೆ ಕೆಲ ಅಭಿಮಾನಿಗಳು ಮಾತ್ರ ಭಾರಿ ಮೋಸವಿದು ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.