ಡಾಲಿ ಧನಂಜಯ್ ಮದುವೆಗೆ ಜೊತೆಯಾಗಿ ಬಂದ ಸಿನಿ ತಾರೆಯರು, ಫಿದಾ ಆದ ಡಾಲಿ ಕುಟುಂಬ

 | 
Jju
ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಡಾಲಿ ಧನಂಜಯ ಮದುವೆ ಮೈಸೂರಲ್ಲಿ ಅದ್ಧೂರಿಯಾಗಿ ನಡೆದಿದೆ.ನಿನ್ನೆ ಆರತಕ್ಷತೆ ಇಂದು ಶುಭಲಗ್ನದಲ್ಲಿ ಮಾಂಗಲ್ಯ ಧಾರಣೆಯ ನೆರವೇರಿದ್ದು, ಆ್ಯಕ್ಟರ್‌ ಮತ್ತು ಡಾಕ್ಟರ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಮೈಸೂರಿನ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಾಲಿ ಧನಂಜಯ್‌ ಮದುವೆಗೆ ಬೃಹತ್ ಸೆಟ್‌ ನಿರ್ಮಾಣ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು ಡಾಲಿ-ಧನ್ಯತಾ ಮದುವೆಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಅಲ್ಲದೇ ಡಾಲಿ ಧನಂಜಯ್ ಮದುವೆಗೆ ಹಲವು ಸ್ಯಾಂಡಲ್‌ವುಡ್‌ ಕಲಾವಿದರು ಆಗಮಿಸಿ ನವಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 
ನಟ ಶಿವರಾಜ್‌ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಅಮೂಲ್ಯ ಜಗದೀಶ್, ರಮ್ಯಾ, ರಕ್ಷಿತಾ, ಪ್ರೇಮ್ ದಂಪತಿ ಸೇರಿದಂತೆ ಎಲ್ಲರೂ ಮದುವೆಗೆ ಬಂದು ಧನಂಜಯ ಹಾಗೂ ಧನ್ಯತಾ ಅವರಿಗೆ ಶುಭ ಹಾರೈಸಿದ್ದಾರೆ.ಆದ್ರೆ ಮುಖ್ಯವಾಗಿ ಡಾಲಿ ಮದುವೆಗೆ ಸ್ಯಾಂಡಲ್​ವುಡ್ ಇಬ್ಬರು ಸ್ಟಾರ್​ ನಟರು ಬಂದಿಲ್ಲ. 
ಹೌದು, ಈ ಹಿಂದೆ ಡಾಲಿ ತಮ್ಮ ಮದುವೆ ಆಮಂತ್ರಣವನ್ನು ಸ್ಯಾಂಡಲ್​ವುಡ್​, ರಾಜಕೀಯ ನಾಯಕರಿಗೆ ಕೊಟ್ಟಿದ್ದರು. ಆದ್ರೆ ಡಾಲಿ ಮದುವೆಗೆ ಕಿಚ್ಚ ಸುದೀಪ್​ ಹಾಗೂ ರಾಕಿಂಗ್​ ಸ್ಟಾರ್ ಯಶ್​ ಬಂದಿಲ್ಲ.ಹೌದು, ಕಿಚ್ಚ ಸುದೀಪ್ ಹಾಗೂ ರಾಕಿಂಗ್​ ಸ್ಟಾರ್ ಯಶ್​​ ಮಿಸ್​ ಆಗಿದ್ದಾರೆ. 
ಏಕೆಂದರೆ ಕಿಚ್ಚ ಸುದೀಪ್​ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್​​​ನಲ್ಲಿ ಬ್ಯುಸಿಯಾಗಿದ್ದಾರೆ ಹೀಗಾಗಿ ಬಂದಿಲ್ಲ. ಇನ್ನೂ, ರಾಕಿಂಗ್​ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ಇಬ್ಬರು ಡಾಲಿ ಧನಂಜಯ ಅವರ ಮದುಗೆ ಬಂದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.