ಬಿಗ್ ಬಾಸ್ ರಜತ್ ಮುಖವಾಡ ಕಳಚಿದ ಕಾಮಿಡಿ ಕಿಲಾಡಿ ನಯನಾ

 | 
ಿ
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತಕ್ಕೆ ಬಂದಿದೆ. ಇಂದು ಮತ್ತು ನಾಳೆ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. 6 ಮಂದಿ ಪಿನಾಲೆ ರೇಸ್‌ ನಲ್ಲಿ ಕಪ್‌ ಹಿಡಿಯಲು ನಿಂತಿದ್ದು,   ಮೊದಲನೇ ದಿನ  ಓರ್ವ ಸ್ಪರ್ಧಿ ಮನೆಯಿಂದ ಹೊರಬಂದಿದ್ದಾರೆ. ಐವರು ಮನೆಯೊಳಗಿದ್ದು ಗ್ರ್ಯಾಂಡ್‌ ಫಿನಾಲೆ ವೇದಿಕೆಗೆ ಬರುವವರ್ಯಾರು? ಎಂಬುದು ಕೂತೂಹಲ ಹೆಚ್ಚಿಸಿದೆ. ಇಂದಿನ ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯಿಂದ ಭವ್ಯಾ ಗೌಡ ಹೊರಬಂದರು.
 ವೈಲ್ಡ್‌ ಕಾರ್ಡ್  ಎಂಟ್ರಿ ಕೊಟ್ಟಿದ್ದ ರಜತ್‌ ಕಿಶನ್‌ ಅವರು ಔಟ್‌ ಆಗಿ ಹೊರ ಬಂದಿದ್ದಾರೆಂದು ಎಂದು ಸುದ್ದಿಯಾಗಿತ್ತು ಆದರೆ ಅವರು ಮುಂದಿನ ಸಂಚಿಕೆಗೆ ಕಾಲಿಟ್ಟಿದ್ದಾರೆ.  ಈ ಮೂಲಕ ಟ್ರೋಫಿ  ಪಡೆದುಕೊಳ್ಳುವ ರೇಸ್‌ ನಲ್ಲಿ ಇನ್ನೂ ಕೂಡ ರಜತ್‌ ಇರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನು ಇವರ ಪರವಾಗಿ ಹಲವಾರು ಕಲಾವಿದರು ವೋಟ್ ಮಾಡಲು ಕೇಳಿ ಕೊಂಡಿದ್ದಾರೆ.
ಹೌದು ನಟ ಯೋಗಿ ಕೂಡ ರಜತ್ ನನಗೆ ಬಹಳ ವರ್ಷಗಳಿಂದ ಗೆಳೆಯ ನೋಡಲು ರಫ್ ಎನಿಸಿದರೂ ಒಳ್ಳೆಯ ಮನುಷ್ಯ ಅವನನ್ನು ವೋಟ್ ಹಾಕಿ ಗೆಲ್ಲಿಸಿ ಅಂದಿದ್ದಾರೆ. ಇನ್ನು ಮಾಸ್ಟರ್ ಆನಂದ್ ಅವರ ಪತ್ನಿ ಕೂಡ ಲೈವ್ ಬಂದು ರಜತ್ ಅವರನ್ನ ಗೆಲ್ಲಿಸಲು ಕೇಳಿಕೊಂಡಿದ್ದಾರೆ. ಹಾಸ್ಯ ನಟಿ ನಯನ ಕೂಡ ಇವರ ಗೆಲುವನ್ನು ಬೆಂಬಲಿಸಿದ್ದಾರೆ.
ವೈಲ್ಡ್‌ ಕಾರ್ಡ್ ಎಂಟ್ರಿಯಾಗಿ 50 ದಿನ ಕಳೆದ ಬಳಿಕ ಮನೆಗೆ ಕಾಲಿಟ್ಟ ರಜತ್‌  ಅದ್ಭುತ ಆಟವಾಡಿ ಪ್ರೇಕ್ಷಕರ ಮನ ಗೆದ್ದಿದ್ದರು. ಮನೆಯವರಿಗೆ ಸಖತ್ ಪೈಪೋಟಿ ನೀಡಿರುವ ರಜತ್ ಫಿನಾಲೆಯವರೆಗೆ ಬಂದಿರುವುದೇ ಒಂದು ಆಶ್ಚರ್ಯ. ಬಿಗ್‌ಬಾಸ್‌ ಕನ್ನಡದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವ ಸ್ಪರ್ಧಿ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಟದ ಕೊನೆಯ ಹಂತದವರೆಗೆ ಬಂದಿರುವ ಉದಾಹರಣೆ ಇಲ್ಲ.
ರಜತ್‌ ಅವರ ಆಟವನ್ನು ನೋಡಿ ಬಿಗ್‌ಬಾಸ್‌ ಆರಂಭವಾಗುವ ಮೊದಲ ದಿನದಿಂದಲೇ ರಜತ್‌ ಇರಬೇಕಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು.ಇದೀಗ ರಜತ್‌ ಅವರು ಕೂಡ 50 ಲಕ್ಷ ರೇಸ್‌  ನಲ್ಲಿ ಮುಂದುವರೆಯಲಿದ್ದು, ಯಾರು ಬಿಗ್ಬಾಸ್‌ 11ರ ಪಟ್ಟದ ಅರಸನಾಗುತ್ತಾರೆ ಎಂಬುದಕ್ಕೆಲ್ಲ ಸ್ಪಷ್ಟನೆ ನಾಳೆ ಸಂಜೆ 6 ಗಂಟೆಗೆ ಆರಂಭವಾಗುವ ಬಿಗ್‌ಬಾಸ್‌ ಫಿನಾಲೆ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ತಿಳಿದು ಬರಲಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.