ರಕ್ಷಿತ್ ಶೆಟ್ಟಿ ಹೆಸರಿಗೆ ಕಳಂಕ ತರುವ ಸಂಚು, ಕೊರಗಜ್ಜ ದೈವದ ಬಳಿ ಬಂದು ಅಭಯ ಪಡೆದ ಶೆಟ್ರು

 | 
Hd

ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಸದ್ಯ ರಿಚರ್ಡ್‌ ಆಂಟನಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಯಶಸ್ಸಿನ ಬಳಿಕ ರಿಚರ್ಡ್‌ ಆಂಟನಿ ಬರವಣಿಗೆಯಲ್ಲಿ ಕೂತಿದ್ದಾರೆ. ಈ ನಡುವೆ ಕೆಲಸದಿಂದ ಒಂದಷ್ಟು ಬಿಡುವು ಪಡೆದುಕೊಂಡ ರಕ್ಷಿತ್‌, ಹುಟ್ಟೂರಿನಲ್ಲಿ ಬಿಡಾರ ಹೂಡಿದ್ದಾರೆ. ಆಚಾರ ವಿಚಾರ ಸಂಪ್ರದಾಯಗಳ ಮೊರೆ ಹೋದ ರಕ್ಷಿತ್‌, ದೈವದ ನೇಮೋತ್ಸವದಲ್ಲಿ ಭಾಗವಹಿಸಿದ್ದಾರೆ.

ಸಿನಿಮಾ ಕೆಲಸಗಳು ಎಷ್ಟೇ ಇದ್ದರೂ, ಅದೆಲ್ಲದರ ನಡುವೆಯೂ ಸಮಯ ಮಾಡಿಕೊಂಡು ದೈವದ ಕಾರ್ಯಗಳಲ್ಲಿ ಆಗಾಗ ಭಾಗವಹಿಸುತ್ತಲೇ ಇರುತ್ತಾರೆ. ಹೀಗಿರುವಾಗಲೇ ಉಡುಪಿಯ ಅಲೆವೂರಿನಲ್ಲಿ ನಡೆದ ನೇಮೋತ್ಸವದಲ್ಲಿ ರಕ್ಷಿತ್ ಇತ್ತೀಚೆಗೆ ಭಾಗವಹಿಸಿದ್ದರು. ಅಲೆವೂರು ಜೋಡು ರಸ್ತೆಯಲ್ಲಿ ನಡೆದ ಕರಾವಳಿಯ ಕಾರ್ಣಿಕ 118ನೇ‌ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಭಾಗಿಯಾಗವಹಿಸಿ ದೈವದ ಆಶೀರ್ವಾದ ಪಡೆದರು.

ಇದೇ ವೇಳೆ ದೈವದ ಬಳಿಕ ಬೇಡಿಕೊಂಡ ರಕ್ಷಿತ್‌ ಶೆಟ್ಟಿ, ನಾನು ಹಿಡಿದಿ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ, ಸಾಂಗವಾಗಿ ನೆರವೇರಬೇಕು. ಅದಕ್ಕೆ ನಿನ್ನ ಅನುಗ್ರಹ ಬೇಕು. ನನ್ನ ಜತೆಗೆ ಬೆಂಗಾವಲಾಗಿ ನೀನು ನಿಲ್ಲಬೇಕು ಎಂದು ನೇಮೋತ್ಸವದಲ್ಲಿ ಕೊರಗಜ್ಜ ದೈವದ ಬಳಿ ಬೇಡಿಕೊಂಡಿದ್ದಾರೆ ರಕ್ಷಿತ್‌ ಶೆಟ್ಟಿ. ರಕ್ಷಿತ್‌ ಅವರ ಈ ಬೇಡಿಕೆಗೆ ಕೊರಗಜ್ಜನಿಂದಲೂ ಧನಾತ್ಮಕ ಪ್ರತಿಕ್ರಿಯೆ ಬಂದಿದೆ. ನಿನ್ನ ಹಿಂದೆ ನಾನಿದ್ದೇನೆ, ನಿನ್ನ ಅಡೆತಡೆಗಳಿಗೆ ನಾನು ದಾರಿ ಮಾಡಿಕೊಡುವೆ ಎಂದು ದೈವ ಹರಸಿದೆ.

ನೀನು ಹೆದರಬೇಡ. ನಿನಗೆ ಎದುರಾಗುವ ಎಲ್ಲ ಅಡೆತಡೆಗಳಿಗೆ ನಾನು ಬೆಂಗಾವಲಾಗಿರುತ್ತೇನೆ. ನೀನು ಮಾಡಬೇಕೆಂದುಕೊಂಡಿರುವ ಕೆಲಸ ಕಾರ್ಯಗಳಿಗೆ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ಅದು ಮುನ್ನಡೆಯತ್ತ ಸಾಗಲಿದೆ. ಏನೇ ಸಮಸ್ಯೆ ಎದುರಾದರೂ, ಅದಕ್ಕೆ ನಾನು ಉತ್ತರ ಕೊಡಲಿದ್ದೇನೆ. ಈ ನಡುವೆ ತೆರೆಮರೆಯಲ್ಲಿ ನಿನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ದೈವ ರಕ್ಷಿತ್‌ ಶೆಟ್ಟಿಗೆ ನುಡಿದಿದೆ. ಅಷ್ಟೇ ಅಲ್ಲ,ಜನರ ಕೆಟ್ಟ ದೃಷ್ಟಿ ನಿನ್ನ ಮೇಲೆ ಬಿದ್ದಿದೆ. ನಿನ್ನ ಹೆಸರು ಹಾಳು ಮಾಡಲು ಕೆಲವರು ಸಂಚು ರೂಪಿಸಿದ್ದಾರೆ. 

ಆ ಸಂಚೂ ನನ್ನ ಗಮನಕ್ಕೆ ಬಂದಿದೆ. ನೀನು ಚಿಂತಿಸಬೇಡ. ಆ ದುಷ್ಟ ಶಕ್ತಿಗಳನ್ನು ನಾನು ಮಟ್ಟ ಹಾಕುವೆ. ನನ್ನ ಕಾಲ ಬುಡದಲ್ಲಿಟ್ಟು ಶಿಕ್ಷಿಸುವೆ. ನಿನ್ನ ಕಾರ್ಯಗಳು ಯಶಸ್ವಿಯಾಗಲಿವೆ. ಹಿಡಿದ ಕೆಲಸಗಳತ್ತ ನೀನು ಮುನ್ನಡೆ ಎಂದು ಕೊರಗಜ್ಜ ದೈವ ರಕ್ಷಿತ್‌ ಶೆಟ್ಟಿ ಅವರಿಗೆ ಹರಸಿದೆ. ಇದೇ ವೇಳೆ ದೈವದಿಂದ ಪ್ರಸಾದವನ್ನೂ ಪಡೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.