ಹೋಟೆಲ್ ನಲ್ಲಿ ಕೋಳಿ ಬಿರಿಯಾನಿ ಅಂತ ಕಾಗೆ ಬಿರಿಯಾನಿ ತಿನ್ನಿಸಿದ ದಂಪತಿಗಳು, ಕಾ'ಕಾ ಎಂದ ಗಿರಾಕಿಗಳು
Dec 24, 2024, 13:07 IST
|
ಸ್ನೇಹಿತರೆ, ಕೋಳಿ ಬಿರಿಯಾನಿ ಮಾಂಸ ಪ್ರೀಯರ ಅಚ್ಚುಮೆಚ್ಚಿನ ಆಹಾರವಿದು. ರುಚಿ ರುಚಿಯ ಬಿಸಿ ಬಿಸಿಯ ಬಿರಿಯಾನಿಯನ್ನು ಬಾಯಿ ಚಪ್ಪರಿಸಿ ತಿನ್ನುತಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಆದ್ರೆ ಇನ್ಮುಂದೆ ಹೊರಗಡೆ ಬಿರಿಯಾನಿ ತಿನ್ನೋ ಮುನ್ನ ಈ ಸ್ಟೋರಿ ಒಮ್ಮೆ ನೋಡ್ಲೇ ಬೇಕು.
ಇನ್ನು, ವೆಜ್ ಬಿರಿಯಾನಿ ಮಾತ್ರವಲ್ಲದೆ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ, ಪ್ರಾನ್ಸ್ ಬಿರಿಯಾನಿ ಹೀಗೆ ಬಗೆಬಗೆಯ ಬಿರಿಯಾನಿಗಳು ಮಾಂಸಾಹಾರಿಗಳಿಗೆ ತುಂಬಾ ಇಷ್ಟ. ಹಾಗಂತ ಕೋಳಿ ಮಾಂಸದ ಬದಲಾಗಿ ಕಾಗೆ ಮಾಂಸದ ಬಿರಿಯಾನಿ ನಿಮ್ಮ ಹೊಟ್ಟೆ ಸೇರ್ಬೋದು.
ಹೌದು ತಮಿಳು ನಾಡಿನ ತಿರುವಳ್ಳೂರು ಜಿಲ್ಲೆಯ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊಂದು ಚಿಕನ್ ಮಾಂಸದ ಬದಲಾಗಿ ಕಾಗೆ ಮಾಂಸವನ್ನೇ ಹೋಟೆಲ್ ಗಳಿಗೆ ನೀಡ್ತಿದ್ರು. ಅದ್ಯಾಕೋ ಕೆಲ ದಿನಗಳಿಂದ ಚಿಕನ್ ಬಿರಿಯಾನಿ ತಿಂದ ಗ್ರಾಹಕರ ಆರೋಗ್ಯ ಕೂಡ ಹಾಲಾಗತೊಡಗಿತ್ತು.
ಇದರಿಂದ ಅನುಮಾನ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇವ್ರ ಮನೆಯನ್ನ ಶೋಧ ಮಾಡಿದ್ರೆ 19 ಸತ್ತ ಕಾಗೆಗಳು ದೊರೆತಿವೆ. ಇನ್ನು ಅಧಿಕಾರಿಗಳ ಭಯದಿಂದ ಬಾಯ್ಬಿಟ್ಟ ಭೂಚಮ್ಮ ಕಳೆದ ಕೆಲ ದಿನಗಳಿಂದ ಸಂಸಾರ ನಡೆಸೋಕೆ ಹಣ ಇಲ್ಲವಾಗಿತ್ತು ಹಾಗಾಗಿ ಅಹಾರದಲ್ಲಿ ವಿಷ ಹಾಕಿ ಕಾಗೆಗಳ ಕೊಂದು ಕೋಳಿಯ ಬದಲಾಗಿ ಕಾಗೆ ಮಾಂಸ ಮಾರಾಟ ಮಾಡ್ತಿದ್ವಿ ಅಂತ ಒಪ್ಪಿಕೊಂಡಿದ್ದಾಳೆ.
ಇದನ್ನ ಕೇಳಿದ ಅಧಿಕಾರಿಗಳು ಈಗಾಗಲೇ ಕಾಗೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಷ್ಟರ ಮೇಲೆ ಇದು ಬೇರೆ ಎಂದು ಅರಣ್ಯ ಇಲಾಖೆಯ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ಕಾಗೆಗಳನ್ನು ಕೀಟಗಳೆಂದು ಪರಿಗಣಿಸಲಾಗಿರುವ ಕಾರಣದಿಂದಾಗಿ ದಂಪತಿಯನ್ನು ಬಂಧಿಸದೆ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ 5 ಸಾವಿರ ರೂ.ದಂಡ ವಿಧಿಸಿ, ಅರಣ್ಯ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟ ಜಗ್ಗೇಶ್ ಅವ್ರ ಸಿನಿಮಾ ಒಂದರಲ್ಲಿ ಚಿಕನ್ ಬಿರಿಯಾನಿ ಎಂದು ನಾಯಿ ಮಾಂಸದ ಬಿರಿಯಾನಿ ತಿಂದು ಭವ್ ಭವ್ ಎಂದು ಕೂಗಿದಂತೆ ಇನ್ನು ಏನೇನು ಮಾಡಿ ತಿನ್ನಿಸ್ತಾರೋ ದೇವರೇ ಬಲ್ಲ.