ಸ್ವಂತ ಮಗಳ ಸಿ ಡಿ ಇಟ್ಟುಕೊಂಡು ಆಟವಾಡಿಸುತ್ತಿರುವ ಸಿ ಪಿ ಯೋಗೇಶ್ವರ್, ಅದರಲ್ಲಿ ಇದೆಯಾ ಸು ಖದಾಟ
Oct 30, 2024, 18:42 IST
|

ಚನ್ನಪಟ್ಟಣ ಚುನಾವಣೆಯ ರಾಜಕೀಯ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಇತ್ತ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ಜಂಗಿ ಕುಸ್ತಿ ನಡೆಯುತ್ತಿದೆ. ರಾಜಕೀಯ ಆರೋ ಪ್ರತ್ಯಾರೋಪಗಳು, ವಾಕ್ಸಮರಗಳು ನಡೆಯುತ್ತಿದೆ. ಆದರೆ ಇದರ ನಡುವೆ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಣ್ಣೀರಿಡುತ್ತಿದ್ದಾರೆ.
ತಂದೆ ತನ್ನನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಡಿ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಕಾಂಗ್ರೆಸ್ ಸೇರಿಕೊಳ್ಳಲು ನಿಶಾ ಯೋಗೇಶ್ವರ್ ಅವರ ಸಿಡಿ ಕಾರಣ ಅನ್ನೋ ಮಾತುಗಳು ವರದಿಗಳು ಹರಿದಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಸಿಡಿ ಮುಂದಿಟ್ಟು ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸೇರಿಕೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪಗಳಿಗೆ ನಿಶಾ ಯೋಗೇಶ್ವರ್ ಉತ್ತರ ನೀಡುತ್ತಾ, ಡಿಕೆ ಶಿವಕುಮಾರ್ ಬಳಿಯಿಂದಲೂ ಸ್ಪಷ್ಟನೆ ಕೇಳಿದ್ದಾರೆ.
ಸಿಡಿ ಕುರಿತು ನಿಶಾ ಯೋಗೇಶ್ವರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ನಿಶಾ ಯೋಗೇಶ್ವರ್, ತನ್ನ ಸಿಡಿ ವಿಚಾರಕ್ಕೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಅನ್ನೋದು ತನ್ನ ತಂದೇ ಸಿಪಿ ಯೋಗೇಶ್ವರ್ ಅವರು ಮಾಡಿದ ಕುತಂತ್ರದ ಸುಳ್ಳು ಪ್ರಚಾರ ಎಂದಿದ್ದಾರೆ. ಈ ರೀತಿ ಯಾವುದೇ ಸಿಡಿ ಡಿಕೆ ಶಿವಕುಮಾರ್ ಬಳಿ ಇದ್ದರೆ ಯಾವುದೇ ಯೋಚನೆ ಮಾಡದೆ ಬಿಡುಗೆ ಮಾಡಿ ಎಂದು ನಿಶಾ ಯೋಗೇಶ್ವರ್ ಆಗ್ರಹಿಸಿದ್ದಾರೆ.
ಪುತ್ರಿ ನಿಶಾ ಯೋಗೇಶ್ವರ್ ಮಾನ ರಕ್ಷಣೆಗಾಗಿ ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ. ನನ್ನ ಅಸಲಿ ನೋವು, ಕಣ್ಣೀರ ಹಾದಿಯನ್ನು ಯಾರು ವರದಿ ಮಾಡುತ್ತಿಲ್ಲ, ಇದಕ್ಕೆ ತನ್ನ ತಂದೆಯೇ ನಿರ್ಬಂಧ ಹಾಕಿದ್ದಾರೆ. ಆದರೆ ತಮಗೆ ಇಷ್ಟಬಂದ ರೀತಿ ಈ ರೀತಿಯ ಸುದ್ದಿ ಹಾಕುತ್ತಿದ್ದಾರೆ. ಇದು ತಂದೆ ಸಿಪಿ ಯೋಗೇಶ್ವರ್ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡಿದ ಮತ್ತೊಂದು ತಂತ್ರ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.