ಡಾಲಿ‌ ಧನಂಜಯ್ ನಿಶ್ಚಿತಾರ್ಥಕ್ಕೆ ಆಗಮಿಸಿದ ಮೋಹಕ‌ ತಾರೆ; ನನಗೂ ನಿನ್ನಂತ ಗಂಡ ಬೇಕು ಎಂದ ರಮ್ಯಾ

 | 
G j
ಚಂದನವನದಲ್ಲಿ ಡಾಲಿ ಎಂದೇ ಗುರುತಿಸಿಕೊಂಡಿರುವ ಅದ್ಭುತ ನಟ ಅಂದ್ರೆ ಅದು ಧನಂಜಯ್. ಪುಟ್ಟ ಗ್ರಾಮದಿಂದ ಬಂದ ಪ್ರತಿಭಾನ್ವಿತ ನಟ ಧನಂಜಯ್ ಮನೆಯಲ್ಲಿ ಶೀಘ್ರದಲ್ಲಿಯೇ ಗಟ್ಟಿಮೇಳ ಮೊಳಗಲಿದೆ. ಇನ್ನು ಡಾಲಿ ಧನಂಜಯ್ ಕನ್ನಡ, ತೆಲಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗದ ಧನಂಜಯ್, ಸಾಹಿತಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 
ಶಿಕ್ಷಣದಲ್ಲಿ ಸದಾ ಮುಂದಿದ್ದ ಧನಂಜಯ್, 7 ಮತ್ತು 10ನೇ ಕ್ಲಾಸ್‌ನಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಡಾ.ರಾಜ್‌ಕುಮಾರ್ ಸಿನಿಮಾಗಳಿಂದ ಪ್ರೇರಿತರಾದ ಧನಂಜಯ್ ಚಿತ್ರರಂಗದತ್ತ ಆಕರ್ಷಿತರಾದರು. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಪೂರ್ಣಗೊಳಿಸಿ, ಇಲ್ಲಿಯೇ ಇಂಜಿನಿಯರಿಂಗ್ ಪದವಿಗೆ ದಾಖಲಾದರು. ಇಂಜಿನಿಯರಿಂಗ್ ಪದವಿ ಬಳಿಕ ಧನಂಜಯ್ ಅವರು ಇನ್ಫೋಸಿಸ್‌ನಲ್ಲಿ ಕೆಲಸ ಪಡೆದುಕೊಂಡಿದ್ದರು. 
ಆದ್ರೆ ಧನಂಜಯ್‌ ಅವರನ್ನು ಬಣ್ಣದ ಲೋಕ ಸೆಳೆದಿತ್ತು.ಜಯನಗರ 4th ಬ್ಲಾಕ್ ಕಿರುಚಿತ್ರದಲ್ಲಿ ಧನಂಜಯ್ ಮೊದಲು ಕ್ಯಾಮೆರಾ ಫೇಸ್ ಮಾಡಿದ್ದರು. ನಂತರ ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಧನಂಜಯ್ ಅವರಿಗೆ ಸಿಗುತ್ತದೆ. ಈ ಚಿತ್ರದ ನಟನೆಗೆ ಸೈಮಾ ಅವಾರ್ಡ್ ಸಹ ಧನಜಯ್ ಪಡೆದುಕೊಳ್ಳುತ್ತಾರೆ.
ಇದಾದ ಬಳಿಕ ರಾಠಿ, ಬಾಕ್ಸರ್, ಅಲ್ಲಮ ಸಿನಿಮಾದಲ್ಲಿ ನಟಿಸಿದರು. 2018ರಲ್ಲಿ ನಿರ್ದೇಶಕ ದುನಿಯಾ ಸೂರಿ ತಮ್ಮ ಟಗರು ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಎದುರು ಖಳನಾಯಕ ಡಾಲಿ ಪಾತ್ರಕ್ಕೆ ಆಯ್ಕೆ ಮಾಡುತ್ತಾರೆ. ಇಲ್ಲಿಂದ ಧನಂಜಯ್, ಡಾಲಿಯಾಗಿ ಫೇಮಸ್ ಆದರು. 2021ರ ರತ್ನನ್ ಪ್ರಪಂಚ್ ಸಿನಿಮಾ ಕರುನಾಡಿನ ಪ್ರತಿ ಮನೆಯನ್ನು ತಲುಪಿತ್ತು. ಹಿರಿಯ ನಟಿ ಉಮಾಶ್ರೀ ಮಗನಾಗಿ ಕಾಣಿಸಿಕೊಂಡಿದ್ದ ಧನಂಜಯ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಸಿನಿರಂಗದಲ್ಲಿ ಉತ್ತುಂಗದಲ್ಲಿರುವ ನಟ ಧನಂಜಯ್ ವೈವಾಹಿಕ ಬಂಧನಕ್ಕೊಳಗಾಗುತ್ತಿದ್ದಾರೆ. ವೈದ್ಯೆ ಧನ್ಯತಾ ಜೊತೆ ಇಂದು ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಮುಂದಿನ ವರ್ಷ ಫೆಬ್ರವರಿ 16ರಂದು ಮದುವೆಯಾಗಲಿದೆ. ಸ್ವಗ್ರಾಮದಲ್ಲಿ ಸಿಂಪಲ್ ಆಗಿ ನೆರವೇರಿದ ನಿಶ್ಚಿತಾರ್ಥ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಡೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.