ಮದುವೆಯಾದ ಎರಡನೇ ದಿನಕ್ಕೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಕೆಲಸಕ್ಕೆ ವಾಪಸ್ ಆದ ಡಾಲಿ ಪತ್ನಿ
| Feb 20, 2025, 10:25 IST
ನಟ ಧನಂಜಯ್ ಹಾಗೂ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಅಭಿಮಾನಿಗಳು ಈ ವೈಭವೋಪೇತ ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಿದ್ದಾರೆ.ಎರಡು ತಿಂಗಳ ಕಾಲ ಧನಂಜಯ್ ಮದುವೆ ಆಮಂತ್ರಣ ನೀಡಿ ಅತಿಥಿಗಳನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಶಿವರಾಜ್‌ಕುಮಾರ್, ಯಶ್, ಸುದೀಪ್, ರಮ್ಯಾ, ರಕ್ಷಿತಾ ಹೀಗೆ ಸಾಕಷ್ಟು ಗಣ್ಯರು, ತಾರೆಯರನ್ನು ಮದುವೆಗೆ ಕರೆದಿದ್ದರು. ತಮ್ಮ ಅಭಿಮಾನಿಗಳನ್ನು ಕೂಡ ಮದುವೆಗೆ ಬರುವಂತೆ ಮನವಿ ಮಾಡಿದ್ದರು.ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು.
ಅತಿಥಿಗಳು, ಅಭಿಮಾನಿಗಳು ವೇದಿಕೆಗೆ ಬರಲು, ಮರಳಿ ತೆರಳಲು, ಊಟಕ್ಕೆ ಕೂರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 10 ಸಾವಿರಕ್ಕೂ ಅಧಿಕ ಮಂದಿ ಧನು-ಧನ್ಯಾ ಮದುವೆ ಸಮಾರಂಭದಲ್ಲಿ ಭಾಗಿ ಆಗಿ ಶುಭ ಕೋರಿದ್ದಾರೆ.ಇನ್ನೂ ಧನ್ಯಾತಾ ಅವರು ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಕೂಡ ಧನಂಜಯ್ ಹೇಳಿಕೊಂಡಿದ್ದಾರೆ.
ನನಗೆ ಧನ್ಯತಾ ಇಷ್ಟ ಆಗಿದ್ದು ಅವರು ಯಾವಾಗಲೂ ಸಮಾಜ ಸೇವೆಯಲ್ಲಿ ನಿರತರಾಗಿರುತ್ತಾರೆ. ಯಾವಾಗಲೂ ಅಲ್ಲಿ ಕ್ಯಾಂಪ್ ಇಲ್ಲಿ ಕ್ಯಾಂಪ್ ಮಾಡ್ತಾಯಿದ್ದೇನೆ ಅಂತಲೇ ಹೋಳುತ್ತಲೇ ಇರುತ್ತಾರೆ. ಅದು ನನಗೆ ಇಷ್ಟ ಆಯ್ತು ಎಂದಿದ್ದಾರೆ ಡಾಲಿ. ನಾನು ಬ್ಯೂಸಿ ಇದ್ದಾಗ ಅವರು ಅರ್ಥ ಮಾಡಿಕೊಳ್ಳುತ್ತಾರೆ.
ಅವರದ್ದೂ ಬ್ಯೂಸಿ ಪ್ರೋಫೇಷನ್ ಅದು ನನಗೂ ಅರ್ಥ ಆಗುತ್ತೆ. ಹೊಂದಿಕೊಂಡು ಹೋಗಲು ಇಷ್ಟು ಸಾಕು ಎಂದಿದ್ದಾರೆ. ಈಗಾಗಲೇ ಹಲವಾರು ಡಿಲೇವರಿ ಮಾಡಿಸಿರುವ ಧನ್ಯತಾ ಮಹಿಳಾ ತಜ್ಞೆ ಕೂಡಾ ಹೌದು. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.