ಮದುವೆ ಕಾರ್ಯಕ್ರಮಕ್ಕೆ ಕೋಟಿ ಬೆಲೆಯ ವಾಚ್ ಹಾಕಿಕೊಂಡು ಬಂದ ದರ್ಶನ್

 | 
Jd
ನಟ ದರ್ಶನ್ ಮತ್ತೆ ಸಿನಿಮಾಗಳ ಕಡೆ ಮುಖ ಮಾಡಿದಂತೆ ಕಾಣುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ದರ್ಶನ್ ಹೊರ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಹೋದರ ದಿನಕರ್ ನಿರ್ದೇಶನದ ರಾಯಲ್ ಸಿನಿಮಾ ಈ ವಾರ ತೆರೆಗೆ ಬಂದಿದೆ.ಇತ್ತೀಚೆಗೆ ಸಿನಿಮಾ ನೋಡಿ ದರ್ಶನ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇನ್ನು ತಾಯಿ ಮೀನಾ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮಿ ಸಮೇತ ದರ್ಶನ್ ರಾಯಲ್ ಸಿನಿಮಾ ವೀಕ್ಷಿಸಿದರು. ಮಲ್ಲೇಶ್ವರದ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಚಿತ್ರದ ಸ್ಪೆಷಲ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರದ ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ನಾಯಕ ವಿರಾಟ್, ನಾಯಕಿ ಸಂಜನಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ಸ್ಟೈಲಿಶ್ ಲುಕ್‌ನಲ್ಲಿ ಸಿನಿಮಾ ನೋಡಲು ದರ್ಶನ್ ಆಗಮಿಸಿದ್ದರು.
ದರ್ಶನ್ ಕೆಂಪು ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕನ್ನಡಕ ಧರಿಸಿದ್ದರು. ಇನ್ನು ಕೈಯಲ್ಲಿ ದುಬಾರಿ ವಾಚ್ ಕೂಡ ಇತ್ತು. ಸದ್ಯ ಅಭಿಮಾನಿಗಳು ದರ್ಶನ್ ತೊಟ್ಟಿದ್ದ ಟೀಶರ್ಟ್ ಹಾಗೂ ಕೈಯಲ್ಲಿದ್ದ ವಾಚ್ ದರ ಎಷ್ಟು ಎಂದು ಊಹಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅದರ ಬೆಲೆ ಎಷ್ಟು ಎಂದು ಹುಡುಕಾಡುತ್ತಿದ್ದಾರೆ. ಈ ಹಿಂದೆ ಕೂಡ ದುಬಾರಿ ಟೀ-ಶರ್ಟ್, ಪ್ಯಾಂಟ್ ಧರಿಸಿ ದರ್ಶನ್ ಕಾಣಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ಈ ವೇಳೆ ದರ್ಶನ್ ಧರಿಸಿದ್ದ ಟೀ-ಶರ್ಟ್, ಪ್ಯಾಂಟ್, ಸನ್‌ ಗ್ಲಾಸ್ ದರದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹತ್ತು ಸಾವಿರ ರೂ. ಟೀ ಶರ್ಟ್, 30 ಸಾವಿರದ ಜೀನ್ಸ್ ಪ್ಯಾಂಟ್, ಲಕ್ಷ ರೂಪಾಯಿ ಕೂಲಿಂಗ್ ಗ್ಲಾಸ್ ತೊಟ್ಟಿದ್ದಾರೆ ಅಂತೆಲ್ಲಾ ಅಂತೆಕಂತೆ ಮಾತುಗಳು ಕೇಳಿಬಂದಿತ್ತು.ಅಂದಹಾಗೆ 'ರಾಯಲ್' ಸಿನಿಮಾ ನೋಡಲು ಬಂದಿದ್ದ ವೇಳೆ ದರ್ಶನ್ 30 ಸಾವಿರ ರೂ. ಬೆಲೆ ಟೀ-ಶರ್ಟ್, 34 ಲಕ್ಷ ರೂ. ವಾಚ್ ಧರಿಸಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.