ಮಾಲಾಶ್ರೀ ಮಗಳ ಬರ್ತಡೆ ಆಚರಿಸಿದ ದರ್ಶನ್, ಕಾಟೇರ ನಟಿಗೆ ಬೆಲೆಬಾಳುವ ಗಿಫ್ಟ್ ಕೊಟ್ಟ ದಾಸ

 | 
ಹ

ನಟ ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿರುವ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ದರ್ಶನ್ ಹಾಗೂ ಆರಾಧನಾ ನಟಿಸಿರುವ ಕಾಟೇರ ಸಿನಿಮಾ ಸ್ಯಾಂಡಲ್​​ವುಡ್​ನ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. 

ಈ ಚಿತ್ರ ರಿಲೀಸ್ ಆಗಿ ಮೂರು ವಾರಗಳಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರುವ ಸೂಚನೆ ಸಿಕ್ಕಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಗೆಲುವನ್ನು ಸಂಭ್ರಮಿಸಲಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ‘ಕಾಟೇರ’ ಅಬ್ಬರಿಸಲಿದೆ. ಈ ಚಿತ್ರದಿಂದ ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ದೊಡ್ಡ ಗೆಲುವು ಕಂಡಿದ್ದಾರೆ.

ಕಾಟೇರ’ ಸಿನಿಮಾ ಕಳೆದ ವರ್ಷ ಡಿಸೆಂಬರ್ 29ರಂದು ರಿಲೀಸ್ ಆಯಿತು. ಒಂದು ವಾರ ಮೊದಲು ರಿಲೀಸ್ ಆದ ‘ಡಂಕಿ’ ಹಾಗೂ ‘ಸಲಾರ್’ ಸಿನಿಮಾಗಳ ಅಬ್ಬರದ ನಡುವೆಯೂ ‘ಕಾಟೇರ’ ಉತ್ತಮ ಓಪನಿಂಗ್ ಪಡೆಯಿತು. ಈ ಸಿನಿಮಾದ ಮೊದಲ ದಿನದ ಗಳಿಕೆ ನೋಡಿ ಚಿತ್ರತಂಡಕ್ಕೆ ಖುಷಿ ಆಗಿದೆ. ಆರಾಧನಾ ಅವರಿಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ.

ನಟಿ ಮಾಲಾಶ್ರೀ ಮಗಳು ಎನ್ನದೆ ತನ್ನ ಪ್ರತಿಭೆಯಿಂದಲೆ ಗುರುತಿಸಿ ಕೊಂಡಿರುವ ಇವರಿಗೆ ನಟ ದರ್ಶನ್ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ ಅಲ್ಲದೆ ವಾಚ್ ಒಂದನ್ನು ಉಡುಗರೆಯನ್ನಾಗಿ ನೀಡಿ ಉತ್ತಮ ಅವಕಾಶಗಳು ದೊರೆಯಲಿ, ಅಮ್ಮನಂತೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದುವಂತವಳಾಗು ಎಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.