'ಪತ್ನಿಯ ಜೊತೆ ತಿರುಪತಿ ಬೆಟ್ಟ ಹತ್ತಿದ ದರ್ಶನ್' ವಿಜಯಲಕ್ಷ್ಮಿ ಬಯಕೆ ಈಡೇರಿಸಿದ ಕಾಟೇರ
ನಟ ದರ್ಶನ್ ತೂಗುದೀಪ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೊತೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಟ ದರ್ಶನ್ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಜೊತೆ ತಿರುಪತಿ ಹಾಗೂ ಕಾಳಹಸ್ತಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ದರ್ಶನ್ರ ಹುಟ್ಟುಹಬ್ಬ ಹತ್ತಿರದಲ್ಲಿದ್ದು, ಜೊತೆಗೆ ಹೊಸ ಸಿನಿಮಾ ಸಹ ಪ್ರಾರಂಭವಾಗಲಿದೆ. ಇದರ ನಡುವೆ ಕುಟುಂಬದೊಡನೆ ದೇವಾಲಯಕ್ಕೆ ದರ್ಶನ್ ಭೇಟಿ ನೀಡಿದ್ದಾರೆ.
ಕುಟುಂಬ ಮಾತ್ರವೇ ಅಲ್ಲದೆ ಕೆಲವು ಗೆಳೆಯರನ್ನು ಸಹ ದರ್ಶನ್ ತಮ್ಮೊಟ್ಟಿಗೆ ಕರೆದೊಯ್ದಿದ್ದಾರೆ. ಎಂಎಲ್ಎ ಸತೀಶ್ ರೆಡ್ಡಿ, ಸಚ್ಚಿದಾನಂದ ಅವರು ದರ್ಶನ್ ಜೊತೆಗಿದ್ದರು.ದರ್ಶನ್ ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುವುದುಂಟು. ಈ ಹಿಂದೆ ‘ರಾಬರ್ಟ್’ ಸಿನಿಮಾ ಸಂದರ್ಭದಲ್ಲಿ ತಿರುಪತಿಗೆ ದರ್ಶನ್ ಭೇಟಿ ನೀಡಿದ್ದರು.
ಕೆಲ ದಿನಗಳ ಹಿಂದಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತೆ ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಟೀಕೆ, ಮೂದಲಿಕೆ ನಡೆದಿತ್ತು.
ವಿವಾದವಾದ ಬೆನ್ನಲ್ಲೆ ಪವಿತ್ರಾ ಗೌಡ, ದರ್ಶನ್ ಜೊತೆಗಿನ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ಈಗ ದರ್ಶನ್, ಪತ್ನಿಯೊಟ್ಟಿಗೆ ದೇವಾಲಯಗಳಿಗೆ ಭೇಟಿ ನೀಡಿ ಪರೋಕ್ಷ ಸಂದೇಶ ರವಾನಿಸಿದಂತಿದೆ. ದರ್ಶನ್ ಫೆಬ್ರವರಿ 17ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದರ ಜೊತೆಗೆ ಅವರ ಹೊಸ ಸಿನಿಮಾ ‘ಡೆವಿಲ್’ ಸಹ ಪ್ರಾರಂಭವಾಗಲಿದೆ.ಈ ಮೂಲಕ ತಮ್ಮ ಕಾಟೇರ ಚಿತ್ರಕ್ಕೆ ಸಕ್ಸಸ್ ಕೊಟ್ಟ ದೇವರಿಗೆ ಧನ್ಯವಾದ ಹೇಳಿದ್ದಾರೆ.
ಇನ್ನೇನು ಚಿತ್ರೀಕರಣ ಆರಂಭಿಸಲಿರೋ ಡೆವಿಲ್ ದಿ ಹೀರೋ ಚಿತ್ರದ ಪ್ರಾರಂಭದ ಖುಷಿಯಲ್ಲೂ ಇಲ್ಲಿಗೆ ಭೇಟಿಕೊಟ್ಟಿದ್ದಾರೆ. ಇವರ ಈ ಒಂದು ಭೇಟಿಯ ವಿಶೇಷ ಫೊಟೋಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.