ಹೆಂಡತಿಗೆ ಪ್ರೀತಿಯಿಂದ ರೇಗಿದ ದರ್ಶನ್; ಇದು ಅಲ್ವಾ ನಿಜವಾದ ಪ್ರೀ ತಿ ಅಂದ್ರೆ

 | 
He

ಇತ್ತೀಚೆಗಷ್ಟೇ ಪತಿ ದರ್ಶನ್‌ ಅವರ ಬರ್ತ್‌ಡೇಯನ್ನು ಅಷ್ಟೇ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ್ದ ವಿಜಯಲಕ್ಷ್ಮೀ, ಇದೀಗ ತಮ್ಮ ಮದುವೆ ವಾರ್ಷಿಕೋತ್ಸವವನ್ನೂ ದುಬೈನಲ್ಲಿ ಆಚರಿಸಿದ್ದಾರೆ. ಅಲ್ಲಿನ ಅಭಿಮಾನಿಗಳು, ಆಪ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿ ಸಂಭ್ರಮಿಸಿದೆ.

2003 ಮೇ 19ರಂದು ನಟ ದರ್ಶನ್​ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟ ದರ್ಶನ್​ ಹಾಗೂ ವಿಜಯಲಕ್ಷ್ಮಿ ಅವರು ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಮದುವೆಯಾಗಿದ್ದರು. ದಂಪತಿಗೆ ವಿನೀಶ್ ಎನ್ನುವ ಒಬ್ಬ ಮಗನಿದ್ದಾನೆ. ವಿನೀಶ್ ಕೂಡ ತಂದೆಯ ಎರಡು ಸಿನಿಮಾಗಳಲ್ಲಿ ನಟಿಸಿ ಸೈ ಎಂದೆನಿಸಿಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವದ ದಿನ ಕೇಕ್ ಕತ್ತರಿಸಿ ಹೆಂಡತಿಗೂ ತಿನ್ನಿಸಿ ತುಂಟತನ ಗೈದಿದ್ದಾರೆ.

ನಟ ದರ್ಶನ್‌ ಕೈ ನೋವಿನ ಚಿಕಿತ್ಸೆ ಬಳಿಕ ಡೆವಿಲ್‌ ಸಿನಿಮಾ ಶೂಟಿಂಗ್‌ಗೆ ಬ್ರೇಕ್‌ ಹಾಕಿದ್ದಾರೆ. ಅದೇ ಕೈ ನೋವಿನಲ್ಲಿಯೇ ಚುನಾವಣಾ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು. ಇದೀಗ ಪತ್ನಿ ವಿಜಯಲಕ್ಷ್ಮೀ ಜತೆಗೆ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಪತಿ ದರ್ಶನ್‌ ಅವರ ಬರ್ತ್‌ಡೇಯನ್ನು ಅಷ್ಟೇ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ್ದ ವಿಜಯಲಕ್ಷ್ಮೀ, ಇದೀಗ ತಮ್ಮ ಮದುವೆ ವಾರ್ಷಿಕೋತ್ಸವವನ್ನೂ ಪತಿ ಜತೆಗೆ ದುಬೈನಲ್ಲಿ ಆಚರಿಸಿದ್ದಾರೆ. 

ಈ ಮದುವೆ ವಾರ್ಷಿಕೋತ್ಸವದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್ಸ್ಟಾಗ್ರಾಂನ ಸ್ಟೇಟಸ್‌ನಲ್ಲಿ ವಿಜಯಲಕ್ಷ್ಮೀ ದರ್ಶನ್‌ ಹಂಚಿಕೊಂಡಿದ್ದಾರೆ. ಅಭಿಮಾನಿ ವಲಯದಿಂದಲೂ ಅತ್ತಿಗೆ ಮತ್ತು ಅಣ್ಣನಿಗೆ ಹ್ಯಾಪಿ ಆನಿವರ್ಸರಿ, ನೂರು ಕಾಲ ಸುಖವಾಗಿರಿ ಎಂಬ ಶುಭ ಹಾರೈಕೆಗಳ ಸುರಿಮಳೆಯೇ ಸುರಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.