ತಲೆಯ ವಿಗ್ ತೆಗೆದು ಬೀಡಿ ಸಿಗರೇಟು ಸೇದುತ್ತಿರುವ ದ ರ್ಶನ್; ಜೊತೆಯಲ್ಲೇ ಮ್ಯಾನೇಜರ್ ನಾಗ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಫೋಟೋ ವೈರಲ್ ಆಗಿದೆ. ಎರಡು ದಿನಗಳ ಹಿಂದಷ್ಟೇ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ದಾಳಿ ನಡೆಸಿದ್ದರು. ಆದರೆ ಇದೀಗ ಜೈಲಿನ ಒಳಗಡೆಯಿಂದಲೇ ದರ್ಶನ್ ಸೇರಿ ಕೈದಿಗಳ ಫೋಟೋ ವೈರಲ್ ಆಗಿರುವುದು ಜೈಲಿನ ನಿಯಮಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
ದರ್ಶನ್, 11ನೇ ಆರೋಪಿ ನಾಗರಾಜ್, ರೌಡಿಶೀಟರ್ ವಿಲ್ಸನ್ ನಾಗರಾಜ್ ಹಾಗೂ ಇನ್ನೊಬ್ಬರ ಜೊತೆ ಜೈಲಿನ ವಿಡಿಯೋ ಕಾನ್ಫೆರೆನ್ ಹಾಲ್‌ನ ಹಿಂಭಾಗದ ಸ್ಥಳದಲ್ಲಿ ಕೂತಿದ್ದಾರೆ. ದರ್ಶನ್ ಖುರ್ಚಿ ಮೇಲೆ ಕೂತು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಕಾಫಿ ಕಪ್ ಹಿಡಿದುಕೊಂಡಿರುವುದು ಫೋಟೋದಲ್ಲಿ ಕಂಡುಬಂದಿದೆ.
ಜೈಲಿನ ಒಳಗಡೆ ಕಟ್ಟುನಿಟ್ಟಿನ ನಿಯಮಗಳಿರುವುದರಿಂದ ದರ್ಶನ್ ಅವರ ಫೋಟೋ ತೆಗದು ಲೀಕ್ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕಾಡಿದೆ. ಕೈದಿಯೊಬ್ಬರು ದೂರದಿಂದ ಫೋಟೋ ತೆಗೆದು ಅದನ್ನು ಹಂಚಿದ್ದಾರೆ ಎಂದು ಹೇಳಲಾಗುತ್ತಿದೆ. ಜೈಲಿನಲ್ಲಿ ನಗುಮುಖದಿಂದ ಇರುವ ದರ್ಶನ್, ಐಷಾರಾಮಿ ಜೀವನದ ಸೌಲಭ್ಯ ಸಿಗುತ್ತಿದೆಯೇ? ಎನ್ನುವ ಅನುಮಾನ ಶುರುವಾಗಿದೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿ 2 ತಿಂಗಳಾಗಿದೆ. ಪೊಲೀಸರು ಒಂದು ಕಡೆ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷಿಗಳನ್ನು ಸಂಗ್ರಹಿಸುತ್ತಾ ಕಠಿಣ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಕಾಯುತ್ತಿದ್ದಾರೆ.
ಈ ಬೆನ್ನಲ್ಲೇ ದರ್ಶನ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.