ಅಮೆರಿಕಾದಿಂದ ಬಂದ ಶಿವಣ್ಣನ ಮನೆಗೆ ಓಡೋಡಿ ಬಂದ ದರ್ಶನ್, ಮನೆ ತುಂಬಾ ಸಂಭ್ರಮ

 | 
Jjj
ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ನಿನ್ನೆ ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಆಪ್ತರು ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ಎಲ್ಲರೆಡೆ ಮುಗುಳ್ನಗುತ್ತಾ ಕೈಬೀಸಿದ ಶಿವಣ್ಣ, ತಮ್ಮ ಸ್ವಾಗತಕ್ಕೆ ಆಗಮಿಸಿದವರನ್ನು ತಬ್ಬಿ ಸಂತಸ ಪಟ್ಟರು.
 ಬಳಿಕ ವಿಮಾನ ನಿಲ್ದಾಣದ ಹೊರಗೆ ತಮಗಾಗಿ ಕಾಯುತ್ತಿದ್ದ ಅಭಿಮಾನಿಗಳೆಡೆಗೆ ಕೈಬೀಸಿದರು. ಅವರು ತಂದ ಹಾರಗಳನ್ನು ಹಾಕಿಸಿಕೊಂಡು ಕಾರಿನಲ್ಲಿ ಮನೆಯತ್ತ ಪ್ರಯಾಣಿಸಿದರು.ಏರ್​ಪೋರ್ಟ್ ರಸ್ತೆ, ಶಿವಣ್ಣ ಅವರ ಮನೆಯ ಬಳಿ ಶಿವಣ್ಣ ಅವರ ಕಟೌಟ್​ಗಳು ರಾರಾಜಿಸುತ್ತಿವೆ. ಶಿವಣ್ಣ ಗುಣಮುಖರಾಗಿ ಬರುತ್ತಿರುವುದಕ್ಕೆ ಶುಭ ಕೋರಿ ಹಲವಾರು ಮಂದಿ ಕಟೌಟ್​ಗಳನ್ನು, ಶುಭ ಸಂದೇಶಗಳನ್ನು ಕಟೌಟ್​ ಮಾಡಿ ಹಾಕಿಸಿದ್ದರು. 
ಶಿವರಾಜ್ ಕುಮಾರ್ ಅವರ ಜೊತೆಗೆ ಕೆಲವೆಡೆ ಗೀತಾ ಶಿವರಾಜ್ ಕುಮಾರ್ ಅವರ ಕಟೌಟ್​ ಅನ್ನು ಸಹ ಹಾಕಿರುವುದು ವಿಶೇಷ. ಶಿವಣ್ಣ ಮರಳುತ್ತಿರುವುದಕ್ಕೆ ಹಲವೆಡೆ ಅಭಿಮಾನಿಗಳು ಅನ್ನ ಸಂತರ್ಪಣೆ ಸಹ ಆಯೋಜನೆ ಕೂಡ ಮಾಡಲಾಗಿದೆ 
ಶಿವರಾಜ್ ಕುಮಾರ್ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲೆಂದು 35 ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಮಿಸಿಸಿಪ್ಪಿ ಕ್ಯಾನ್ಸರ್ ಇನ್​ಸ್ಟಿಟ್ಯೂಷನ್​ನಲ್ಲಿ ಶಿವರಾಜ್ ಕುಮಾರ್ ಅವರಿಗೆ ಶಸ್ತಚಿಕಿತ್ಸೆ ಮಾಡಲಾಯ್ತು. ಶಿವಣ್ಣ ಅವರು ಅಲ್ಲಿಯೇ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಗೀತಾ ಶಿವರಾಜ್ ಕುಮಾರ್, ಅವರ ಪುತ್ರಿ ನಿವೇದಿತಾ, ಮಧು ಬಂಗಾರಪ್ಪ ಅವರುಗಳು ಸಹ ಅಮೆರಿಕಕ್ಕೆ ತೆರಳಿದ್ದರು.
ಈದೀಗ ಶಿವಣ್ಣ ಆರೋಗ್ಯ ವಿಚಾರಿಸಲು ನಟ ದರ್ಶನ್ ಕೂಡ ಮನೆಗೆ ಆಗಮಿಸಿದ್ದಾರೆ. ಈ ಹಿಂದೆ ಶಿವಣ್ಣನ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ತಿಳಿದಾಗ ದರ್ಶನ್ ಜೈಲಿನಲ್ಲಿದ್ದ ಕಾರಣದಿಂದಾಗಿ ಈಗ ವಿಚಾರಿಸಲು ತೆರಳಿದ್ದಾರೆ ಎನ್ನಲಾಗಿದೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸ್ನೇಹಿತರು, ಸಂಬಂಧಿಕರು ನನಗೆ ಧೈರ್ಯ ತುಂಬಿದ್ದಾರೆ. 
ಹೋಗಬೇಕಾದರೆ ಭಾವುಕನಾಗಿದ್ದೆ. ಮನೆಯಲ್ಲಿ ಎಲ್ಲರ ಬೆಂಬಲ ಸಿಕ್ಕಿತು ಅಲ್ಲಿ ಹೋದ ಮೇಲೆ ಆತವಿಶ್ವಾಸ ಬಂತು. 6 ಗಂಟೆ ಮನೆಯವರಿಗೂ ಚಿಂತೆ ಕಾಡಿತ್ತು. ಎರಡು ಮೂರು ದಿನ ಲಿಕ್ವಿಡ್‌ ಫುಡ್‌ನಲ್ಲೇ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ಲೈಟ್‌ ವಾಕ್‌ ಶುರು ಮಾಡಿದೆ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.