ಆಪ್ತ ಸ್ನೇಹಿತನ ಸಾ ವಿನ ಸುದ್ದಿ ಕೇಳಿ ಬೆನ್ನುನೋವಿನಲ್ಲೂ ಓಡೋಡಿ ಬಂದ ದರ್ಶನ್

 | 
Js
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಸಿನಿಮಾ ಯಾರಿಗ್ತಾನೆ ಗೊತ್ತಿಲ್ಲ ಹೇಳಿ? 2008 ರಲ್ಲಿ ಬಿಡುಗಡೆಯಾಗಿದ್ದ ನವಗ್ರಹ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಳೆದ ವರ್ಷ ರೀ-ರಿಲೀಸ್‌ ಮಾಡಿದಾಗಿಲೂ ‘ನವಗ್ರಹ’ ಚಿತ್ರ ಥಿಯೇಟರ್‌ಗಳಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಇದೇ ಚಿತ್ರದಲ್ಲಿ ಶೆಟ್ಟಿ ಪಾತ್ರದಲ್ಲಿ ನಟಿಸಿದ್ದ ಗಿರಿ ದಿನೇಶ್ ಹಠಾತ್‌ ಸಾವನ್ನಪ್ಪಿದ್ದಾರೆ. ಬಾರದ ಲೋಕಕ್ಕೆ ಗಿರಿ ದಿನೇಶ್‌ ಪಯಣಿಸಿದ್ದಾರೆ.
ಗಿರಿ ದಿನೇಶ್ ಆರೋಗ್ಯವಾಗಿಯೇ ಇದ್ದರು. ನಿನ್ನೆ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿತು. ಏಕಾಏಕಿ ಕುಸಿದು ಬಿದ್ದ ಗಿರಿ ದಿನೇಶ್ ಅವರನ್ನ ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಅಷ್ಟರಲ್ಲೇ, ಮಾರ್ಗ ಮಧ್ಯೆಯೇ ಗಿರಿ ದಿನೇಶ್ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು.
ಗಿರಿ ದಿನೇಶ್ ಅವರಿಗೆ 45 ವರ್ಷ ವಯಸ್ಸಾಗಿತ್ತು. ಗಿರಿ ದಿನೇಶ್‌ಗೆ ಇನ್ನೂ ಮದುವೆ ಆಗಿರಲಿಲ್ಲ. ಅಣ್ಣನ ಮನೆಯಲ್ಲಿ ಗಿರಿ ದಿನೇಶ್‌ ವಾಸವಿದ್ದರಂತೆ. ನವಗ್ರಹ ರೀ ರಿಲೀಸ್‌ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಗಿರಿ ದಿನೇಶ್ ಭಾಗವಹಿಸಿರಲಿಲ್ಲ. ಕ್ಯಾಮರಾದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರಂತೆ ಗಿರಿ ದಿನೇಶ್.ಕನ್ನಡ ಚಿತ್ರರಂಗದ ಖ್ಯಾತ ದಿವಂಗತ ನಟ ದಿನೇಶ್ ಅವರ ಪುತ್ರ ಗಿರಿ. ಹಾಸ್ಯ ನಟನಾಗಿಯೂ, ಖಳನಟನಾಗಿಯೂ ದಿನೇಶ್‌ ಜನಪ್ರಿಯತೆ ಪಡೆದಿದ್ದರು. ಚಂದನವನದ ಖಳನಟ ಪುತ್ರರೇ ಸೇರಿ ಮಾಡಿದ ‘ನವಗ್ರಹ’ ಸಿನಿಮಾದಲ್ಲಿ ಗಿರಿ ದಿನೇಶ್‌ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದರು. 
ನವಗ್ರಹ ಸಿನಿಮಾದಲ್ಲಿ ಗಿರಿ ದಿನೇಶ್ ಅವರ ಕಾಮಿಡಿ ಟೈಮಿಂಗ್‌ ಹೈಲೈಟ್ ಆಗಿತ್ತು. ಇನ್ನು ನವಗ್ರಹ ಸಿನಿಮಾದ ಬಳಿಕ 'ವಜ್ರ' ಹಾಗೂ ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’ ಚಿತ್ರಗಳಲ್ಲಿ ಗಿರಿ ದಿನೇಶ್ ಮಿಂಚಿದ್ದರು. ಗಿರಿ ದಿನೇಶ್ ಪ್ರತಿಭಾವಂತ ಕಲಾವಿದರಾಗಿದ್ದರೂ, ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳದ ಗಿರಿ ದಿನೇಶ್‌ ಇಂದು ಚಿರನಿದ್ರೆಗೆ ಜಾರಿದ್ದಾರೆ. ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. (ಮಿತ್ರರೆ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.