ಬೆನ್ನು ನೋವಿನಿಂದ ದುಃಖ ಅನುಭವಿಸುತ್ತಿರುವ ದರ್ಶನ್, ಸಿನಿಮಾ‌ ಜೀವನಕ್ಕೆ ಗುಡ್ ಬಾಯ್

 | 
Ju
ಅಭಿಮಾನಿಗಳ ಮೆಚ್ಚಿನ ದಾಸ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರೋ ದರ್ಶನ್ ಸಹಿತ  17 ಆರೋಪಿಗಳು ಇವತ್ತು ಸೆಷೆನ್ಸ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಎಪ್ರಿಲ್‌ 8ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಅಚ್ಚರಿ ಅಂದ್ರೆ ದರ್ಶನ್ ಆರ್.ಆರ್. ನಗರ ಬಂಗಲೆಗೆ ಶಿಫ್ಟ್ ಆಗಿದ್ದು ಅಲ್ಲಿಂದಲೇ ಕೋರ್ಟ್​ಗೆ ಹೋಗಿದ್ದಾರೆ. 
ಇಷ್ಟು ದಿನ ಪತ್ನಿ ಮನೆಯಲ್ಲಿದ್ದ ದರ್ಶನ್ ಮತ್ತೆ ಆರ್.ಆರ್. ನಗರ ಮನೆಗೆ ಮರಳಿರೋದು ಹಲವು ಅನುಮಾನಗಳನ್ನ ಹುಟ್ಟಿಹಾಕಿದೆ. ದಾಸನ ಆರ್.ಆರ್ ನಗರ ಗೃಹಪ್ರವೇಶದ ಹಿಂದಿನ ಅಸಲಿ ರಹಸ್ಯ ಇಲ್ಲಿದೆ.ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ ದರ್ಶನ್, ಬೇಲ್ ಪಡೆದು ಆಚೆ ಬಂದ ಮೇಲೂ ಆರ್. ಆರ್ ನಗರ ಮನೆಗೆ ಬಂದಿರಲಿಲ್ಲ. ಒಂದೂವರೇ ತಿಂಗಳು ಆಸ್ಪತ್ರೆಯಲ್ಲಿ ದಿನ ಕಳೆದ ದಾಸ ಆ ನಂತರ ಹೋಗಿದ್ದು ಪತ್ನಿ ನೆಲೆಸಿರೋ ಹೊಸಕೆರೆಹಳ್ಳಿಯ ಆಪಾರ್ಟ್​​ಮೆಂಟ್‌ಗೆ.ಮೈಸೂರಿನ ಫಾರ್ಮ್​​ ಹೌಸ್‌ ಗೆ ಹೋದರೂ  ಆರ್​. ಆರ್. ನಗರ ಮನೆ ಬಳಿ ಮಾತ್ರ ದರ್ಶನ್ ಬಂದಿರಲಿಲ್ಲ. 
ಆದ್ರೆ ಅಚ್ಚರಿ ಅಂದ್ರೆ ಇವತ್ತು ದರ್ಶನ್ ಈ ಆರ್ ಆರ್ ನಗರದ ತೂಗುದೀಪ ನಿವಾಸದಲ್ಲಿ ದರ್ಶನ ಕೊಟ್ಟಿದ್ದಾರೆ. ಮನೆ ಮುಂದೆ ದರ್ಶನ್ ಕಾರ್ ನಿಂತಿರೋದು ಕಂಡು ಅನೇಕ ಅಭಿಮಾನಿಗಳು ಕುತೂಹಲದಿಂದ ಮನೆ ಮುಂದೆ ಸೇರಿದ್ದಾರೆ. ಮನೆಯಿಂದ ಹೊರಬಂದು ಕಾರ್ ಏರಿದ ದಾಸ, ಅದಕ್ಕೂ ಮುನ್ನ ಅಭಿಮಾನಿಗಳ ಕೈ ಕುಲುಕಿದ್ದಾರೆ. ಅಚಾನಕ್ ಆಗಿ ದಾಸ ಆರ್.ಆರ್ ನಗರದಲ್ಲಿ ದರ್ಶನ ಕೊಟ್ಟಿದ್ದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ದರ್ಶನ್ ಅರೆಸ್ಟ್ ಆಗಿ ಬೇಲ್ ಗಾಗಿ ಪರದಾಡ್ತಾ ಇದ್ದ ವೇಳೆ, ದರ್ಶನ್ ಪತ್ನಿ ಅನೇಕ ಜ್ಯೋತಿಷಿಗಳ ಮನೆ ಬಾಗಿಲಿಗೂ ಅಲೆದಾಡಿದ್ರು, ಆಗ ಕೆಲ ಜ್ಯೋತಿಷಿಗಳು ದಾಸ ವಾಸ ಮಾಡ್ತಾ ಇರೋ ಆರ್.ಆರ್ ನಗರ ಬಂಗಲೆಯ ವಾಸ್ತು ಸರಿಯಿಲ್ಲ. ಅದೇ ಕಾರಣಕ್ಕೆ ಅವರು ಪದೇ ಪದೇ ವಿವಾದಕ್ಕೆ ಸಿಲುಕ್ತಾ ಇದ್ದಾರೆ. ಹೀಗಾಗಿ  ಬೇಲ್ ಮೇಲೆ ಆಚೆ ಬಂದ ಮೇಲೂ ಅವರನ್ನ ಆ ಮನೆಗೆ ಕಳುಹಿಸಿಬೇಡಿ  ಎಂದು ವಿಜಯಲಕ್ಷ್ಮೀಗೆ ಎಚ್ಚರಿಕೆ ಕೊಟ್ಟಿದ್ದರಂತೆ. 
ಅಂತೆಯೇ ವಿಜಯಲಕ್ಷ್ಮೀ ತಾವು ಮಗನ ಜೊತೆ ನೆಲೆಸಿರೋ ಅಪಾರ್ಟ್​​ಮೆಂಟ್ ನಲ್ಲೇ ದರ್ಶನ್‌ನನ್ನು ಇರಿಸಿಕೊಂಡಿದ್ದರು. ಅಭಿಮಾನಿಗಳ ಕಂಡರೆ ಹಿಗ್ಗುವ ದಾಸ ಗುಣದಲ್ಲಿ ಕೊಂಚ ಕೂಡಾ ಬದಲಾಗಿಲ್ಲ ಅನ್ನೊದು ಅಭಿಮಾನಿಗಳ ಮಾತು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.