ಜಯಮಾಲಾ ಮದುವೆಯಲ್ಲಿ ಮಿಂಚಿದ ದರ್ಶನ್ ಯಶ್ ಸುದೀಪ್, ಒಂದೇ ಮಂಟಪದಲ್ಲಿ ಚಿತ್ರರಂಗದ ಕಲಾವಿದರು
Feb 8, 2025, 08:22 IST
|

ಸ್ಯಾಂಡಲ್ವುಡ್ ಹಿರಿಯ ನಟಿ ಜಯಮಾಲಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟಿ ಜಯಮಾಲಾ ಅವರ ಏಕೈಕ ಪುತ್ರಿ ಸೌಂದರ್ಯ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಜಯಮಾಲಾ ಮಗಳು ಸೌಂದರ್ಯ ಅವರ ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ.
ಸೌಂದರ್ಯ ಜಯಮಾಲಾ ಅವರು ಎರಡು ವರ್ಷಗಳ ಕಾಲ ಅಭಿನಯಿಸಿ ಆ ನಂತರ ಸಿನಿಮಾ ರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ ರುಷಬ್ ಕೆ ಎಂಬುವವರ ಜೊತೆ ಸೌಂದರ್ಯ ಮದುವೆ ನಡೆಯುತ್ತಿದೆ. ನಟಿ ಜಯಮಾಲಾ ಮಗಳ ಮದುವೆಯು ಫೆಬ್ರವರಿ 7, 8ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಮದುವೆ ನಡೆಯಲಿದೆ. ಇನ್ನೂ, ಸೌಂದರ್ಯ ಹಳದಿ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ಹಿರಿಯ ನಟಿಯರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಈಗಾಗಲೇ ಜಯಮಾಲಾ ಮಗಳ ಹಳದಿ ಶಾಸ್ತ್ರವು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದಿದೆ. ಹಳದಿ ಶಾಸ್ತ್ರವನ್ನು ಈ ಅದ್ದೂರಿಯಾಗಿ ಮಾಡಲಾಗಿತ್ತು. ಎಲ್ಲೆಲ್ಲೂ ಹಳದಿ ಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿತ್ತು.ಇನ್ನು ನಟಿ ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್, ಹರ್ಷಿಕಾ ಪೂಣಚ್ಛ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ.
ಎಲ್ಲರೂ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಿರಿಯ ನಟಿಯರು ಡ್ಯಾನ್ಸ್ ಮಾಡಿರುವ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಸೌಂದರ್ಯ ಜಯಮಾಲಾ ಅವರು ಎರಡು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು.ಈ ಮೂಲಕ ಅವರು ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ನಟನೆಯಿಂದ ದೂರ ಆಗಿದ್ದ ಸೌಂದರ್ಯ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅವರು ಕೆಲ ವರ್ಷಗಳ ಕಾಲ ಓದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.