ದರ್ಶನ್ ಎಡಗಾಲು ರಿಕವರಿ ಆಗ್ತಾ ಇಲ್ಲ, ಸಿನಿಮಾದಲ್ಲಿ ನಟನೆ ಅಸಾಧ್ಯ! ಡಾಕ್ಟರ್ ಸ್ಪಷ್ಟತೆ
Nov 7, 2024, 21:36 IST
|
131 ದಿನಗಳ ಜೈಲುವಾಸದ ಬಳಿಕ ನಟ ದರ್ಶನ್ ತೂಗುದೀಪ್‌ಗೆ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಬೆನ್ನ ನೋವು ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ ಚಿಕಿತ್ಸೆ ಪಡೆಯಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದೆ. ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದರ್ಶನ್‌ಗೆ ಬೆನ್ನುನೋವು ತೀವ್ರವಾಗಿದ್ದು ಅವರ ಎಡಗಾಲು ಕೂಡ ಜೋಮು ಹಿಡಿದಂತಾಗುತ್ತಿದೆ ಎಂದು ವಕೀಲರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು. ಬಳ್ಳಾರಿ ಜೈಲಿನಲ್ಲಿ ದರ್ಶನ್ ನಡೆಯಲು ಕೂಡ ಕಷ್ಟಪಡುತ್ತಿರುವ ವಿಡಿಯೋಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದವು. ದರ್ಶನ್‌ಗೆ ನೋವು ಇದೀಗ ಮತ್ತಷ್ಟು ಹೆಚ್ಚಿದ್ದು, ತುಂಬಾ ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯಲ್ಲಿನ ವಿಡಿಯೋ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ಮರುಗುತ್ತಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡಿದ ನ್ಯೂರೋ ಸರ್ಜನ್ ನವೀನ್ ಅಪ್ಪಾಜಿ ಗೌಡ, ಬೆನ್ನು ನೋವು ಹೆಚ್ಚಾಗಿದೆ ಎಂದು ನಟ ದರ್ಶನ್ ಅಡ್ಮಿಟ್ ಆಗಿದ್ದಾರೆ. ಬೆನ್ನು ನೋವಿನ ಜೊತೆಗೆ ನಟ ದರ್ಶನ್ ಅವರಿಗೆ ಎಡಗಾಲಿನ ನೋವು ತುಸು ಹೆಚ್ಚಾಗಿಯೇ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೀಗೆ ಬಿಟ್ಟರೆ ಕೆಲಸ ನಿರ್ವಹಿಸದಂತೆ ಆಗಬಹುದು.MRI ಹಾಗೂ Nerve condition study test ಗಳನ್ನು ಮಾಡಲಾಗುತ್ತೆ.ಇದು ನರಗಳು ಡ್ಯಾಮೇಜ್ ಆಗಿದ್ರೆ ಮಾಡುವಂತಹ ಟೆಸ್ಟ್ ಆಗಿದೆ.
ನಡೆದಾಗ ನೋವು ಬಂದ್ರೇ, ಕುಳಿತುಕೊಳ್ಳುವಾಗ ನೋವು ಬಂದ್ರೆ, ಕೆಮ್ಮಿದಾಗ, ಸೀನಿದಾಗ ನೋವು ಬಂದ್ರೇ ನೋವಿನ ಪ್ರಮಾಣ ಜಾಸ್ತಿ ಇದೆ ಎಂದು ಅರ್ಥ. ಶಸ್ತ್ರಚಿಕಿತ್ಸೆ ಕೊನೆಯ ಆಯ್ಕೆಯಾಗಿದೆ ಎಂದಿದ್ದಾರೆ.ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾ ಅಥವಾ ಫಿಸಿಯೋಥೆರಪಿನಾ ಎನ್ನುವುದು ಇನ್ನು 48 ಗಂಟೆಗಳಲ್ಲಿ ನಿರ್ಧಾರ ಆಗಲಿದೆ. ವೈದ್ಯರು ದರ್ಶನ್‌ಗೆ ಮಾಡಿರುವ ಪರೀಕ್ಷಾ ವರದಿಗಳನ್ನು ಪರಾಮರ್ಶೆ ಮಾಡುತ್ತಿದ್ದು, ಕುಟುಂಬದ ಜೊತೆಗೆ ಹಾಗೂ ರೋಗಿ ದರ್ಶನ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.