ರಾತ್ರಿಯಿಂದ ಬೆಳಗ್ಗಿನ ಜಾವವರೆಗೂ ದರ್ಶನ್ ಎಣ್ಣೆ ಪಾರ್ಟಿ, ಕಾಟೇರ ಚಿತ್ರ ತಂಡಕ್ಕೆ ಸಂಕಷ್ಟ

 | 
ಕ್

ಕಾಟೇರ ಸಿನಿಮಾ ಸಕ್ಸಸ್​ ಖುಷಿಯಲ್ಲಿರುವ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಜೆಟ್‌‌ ಲಾಗ್ ಪಬ್‌‌ನಲ್ಲಿ  ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ದರ್ಶನ್  ಅಭಿಷೇಕ್ ಅಂಬರೀಷ್ ಸೇರಿದಂತೆ ಒಟ್ಟು 8 ಮಂದಿಗೆ ವಿಚಾ್ರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ನೋಟಿಸ್  ನೀಡಿ 2 ದಿನ ಕಳೆದಿದೆ. ಇವರೆಗೆ ಯಾರೂ ಕೂಡ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಬಂದಿಲ್ಲ. 

ದುಬೈನಿಂದ ನಿನ್ನೆ ರಾತ್ರಿ ವಾಪಸ್​ ಆಗಿರುವ ದರ್ಶನ್​ ​ ಇಂದೇ ವಿಚಾರಣೆಗೆ ಹಾಜರಾಗ್ತಾರಂತೆ .ದುಬೈನಿಂದ ವಾಪಸ್ ಆಗಿರುವ ನಟ ದರ್ಶನ್​ ಬೆಳಗ್ಗೆ 11 ಗಂಟೆಗೆ ಸುಬ್ರಮಣ್ಯನಗರದ ತನಿಖಾಧಿಕಾರಿ ಸುರೇಶ್ ಮುಂದೆ ಹಾಜರು ಸಾಧ್ಯತೆ ಇದೆ ಎನ್ನಲಾಗ್ತಿದೆ. ನೋಟಿಸ್ ಕೊಟ್ಟ 8 ಮಂದಿ ಇಂದು ಪೊಲೀಸ್ ಠಾಣೆಗೆ ಬರದಿದ್ರೆ ಪೊಲೀಸರು ಮತ್ತೊಮ್ಮೆ ಸೆಲಿಬ್ರಿಟಿಗಳಿಗೆ ನೋಟಿಸ್‌ ನೀಡುವ ಸಾಧ್ಯತೆ ಇದೆ.

ಈಗಾಗಲೇ ಡಾಲಿ ಧನಂಜಯ್, ಚಿಕ್ಕಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣಗೆ ವಿಚಾರಣೆಗೆ ಹಾಜರಾಗಲು ಸುಬ್ರಮಣ್ಯನಗರ ಪೊಲೀಸರು ನೋಟಿಸ್‌ ನೀಡಿದ್ದಾರೆ.
ಮಧ್ಯರಾತ್ರಿ ಮೂರು ಗಂಟೆವರೆಗೂ ನೀವು ಜಟ್ ಲ್ಯಾಗ್ ಪಬ್ ನಲ್ಲಿ ಇದ್ದ ಬಗ್ಗೆ ಮಾಹಿತಿ ಬಂದಿದೆ. ಪ್ರಕರಣಕ್ಕೆ ಸಂಬಂಧಸಿದಂತೆ ನಿಮ್ಮನ್ನು ಕೂಲಂಕುಷವಾಗಿ ವಿಚಾರಣೆ ಮಾಡಬೇಕಿದೆ. 

ಜೊತೆಗೆ ನಿಮ್ಮಿಂದ ಹೇಳಿಕೆ ಕೂಡ ಪಡೆಯಬೇಕಿದೆ. ಜನವರಿ 8ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ನೋಟಿಸ್​​ನಲ್ಲಿ ಬರೆಯಲಾಗಿದೆ. CRPC 160 ಅಡಿಯಲ್ಲಿ ನೋಟಿಸ್​ ಜಾರಿ ಮಾಡಿದ್ದಾರೆ. ಜನವರಿ 12 ರ  ಒಳಗೆ ದರ್ಶನ್ ವಿಚಾರಣೆ ಬರುವ ಸಾಧ್ಯತೆ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.