ಬಹು ದುಬಾರಿ ಶಿಲ್ಪಾ ಶೆಟ್ಟಿ ಒಡೆತನದ ಹೋಟೆಲ್ ನಲ್ಲಿ ದಿನಲೂ ಚಾ ತಿಂಡಿ ಸವಿಯುತ್ತಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ
Mar 24, 2025, 15:03 IST
|

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ರೆಸ್ಟೋರೆಂಟ್, ರೆಸಾರ್ಟ್‌ಗಳಿಗೆ ಹೋಗೋದು ಜಾಸ್ತಿ. ಸಿನಿಮಾ ರಂಗದವರ ಜೊತೆ ಆತ್ಮೀಯತೆಯಿಂದಿರೋ ವಿಜಯಲಕ್ಷ್ಮೀ ಅವರು ಆಗಾಗ ಟ್ರಾವೆಲ್ ಮಾಡ್ತಾರೆ, ಮದುವೆ, ಸಭೆ-ಸಮಾರಂಭಗಳಿಗೂ ಹೋಗ್ತಾರೆ. ಈಗ ಅವರು ಶಿಲ್ಪಾ ಶೆಟ್ಟಿ ಒಡೆತನದ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಆಹಾರದ ಬೆಲೆ ಮಾತ್ರ ಕೇಳ್ಬೇಡಿ.
ಶಿಲ್ಪಾ ಶೆಟ್ಟಿ ಅವರು ಬೆಂಗಳೂರಿನಲ್ಲಿ Bastian Garden City ಎಂಬ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಅರವತ್ತು ವರ್ಷದ ಬಂಗಲೆಯಲ್ಲಿ ವಿವಿಧ ರೀತಿಯ ಆಹಾರವಿದೆ. ಅದರಲ್ಲೂ ಸಮುದ್ರದ ಆಹಾರಗಳಿಗೆ ಈ ರೆಸ್ಟೋರೆಂಟ್ ತುಂಬ ಫೇಮಸ್. ಇನ್ನು ಇಲ್ಲಿ ಓರ್ವ ವ್ಯಕ್ತಿಯ ಸಾಮಾನ್ಯ ಪ್ಲೇಟ್‌ಗೆ ಮಿನಿಮಮ್ ಎರಡು ಸಾವಿರ ರೂಪಾಯಿ ಬೆಲೆ ಇದ್ಯಂತೆ. ಈ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟರೆ, ಬೇರೆ ದೇಶಕ್ಕೆ ಹೋದ ಅನುಭವ ಸಿಗೋದಂತೂ ಫಿಕ್ಸ್. ಏಕಕಾಲಕ್ಕೆ 400 ಜನರು ಕೂರಬಹುದಾದ ಈ ರೆಸ್ಟೋರೆಂಟ್ ಪ್ರತಿ ತಿಂಗಳು ಹತ್ತು ಕೋಟಿ ರೂಪಾಯಿ ಕಮಾಯಿ ಮಾಡುತ್ತದೆಯಂತೆ. ಅಂದಹಾಗೆ ಶಿಲ್ಪಾ ಶೆಟ್ಟಿ ಅವರು ಈ ರೆಸ್ಟೋರೆಂಟ್‌ಗೆ 50% ಹಣ ಹೂಡಿದ್ದಾರಷ್ಟೇ.
ಮಂಗಳೂರು ಬೆಡಗಿ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ನಟಿಯಷ್ಟೇ ಅಲ್ಲ. ಯಶಸ್ವೀ ವ್ಯಾಪಾರಸ್ಥೆ ಕೂಡಾ ಹೌದು. ಈಗಾಗ್ಲೇ ಮುಂಬೈನ ಎರಡು ಕಡೆಗಳಲ್ಲಿ 'ಬಾಸ್ಟಿಯನ್' ಅನ್ನೋ ಸೂಪರ್ ಹಿಟ್ ರೆಸ್ಟೊರೆಂಟ್ ನಡೆಸ್ತಿದ್ದಾರೆ. ಈ ಎರಡೂ ರೆಸ್ಟೊರೆಂಟ್‌ಗಳಲ್ಲಿ ಊಟ ತಿಂಡಿ ರುಚಿ ಮಾತ್ರ ಅಲ್ಲ. ಅಲ್ಲಿನ ಆಂಬಿಯನ್ಸ್, ವೈಬ್ ಎಲ್ಲವೂ ಸಿಕ್ಕಾಪಟ್ಟೆ ಫೇಮಸ್. ಎಷ್ಟರ ಮಟ್ಟಿಗೆ ಜನ ಈ ರೆಸ್ಟೊರೆಂಟ್‌ಗಳನ್ನು ಇಷ್ಟಪಡ್ತಾರೆ ಅಂದ್ರೆ, ವಾರಗಟ್ಟಲೆ ಮೊದಲೇ ಟೇಬಲ್ ಬುಕ್ ಆಗುತ್ತಂತೆ.
ಪತಿ ರಾಜ್ ಕುಂದ್ರಾ ಜೊತೆ ಸೇರಿ ಶಿಲ್ಪಾ ಆರಂಭಿಸಿದ ಈ ರೆಸ್ಟೊರೆಂಟ್ ಚೈನ್ ಈಗ ರೆಕ್ಕೆ ಬಿಚ್ಚಿ ಬೇರೆ ಕಡೆಗಳಿಗೂ ಹರಡಲು ಸಜ್ಜಾಗಿದೆ. ಮುಂಬೈನ ಹೊರಗೆ ಮೊದಲನೇ ಬ್ರಾಂಚ್ ಅನ್ನು ಶಿಲ್ಪಾ ಬೆಂಗಳೂರಿನಲ್ಲಿ ಆರಂಭಿಸ್ತಿದ್ದಾರೆ. ಬೆಂಗಳೂರಿನ ಬಾಸ್ಟಿಯನ್ ಬಹು ದೊಡ್ಡ ಕಾರ್ಪೆಟ್ ಏರಿಯಾ ಹೊಂದಿದ್ದು ಇಂಟೀರಿಯರ್ ಕೆಲಸ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ಅಂದ್ರೆ ಮಾರ್ಚ್ 2024ಕ್ಕೆ ಬಾಸ್ಟಿಯನ್ ಬೆಂಗಳೂರು ಆಹಾರ ಪ್ರಯರಿಗೆ ಬಾಗಿಲು ತೆರೆಯಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.