ದರ್ಶನ್ ಪತ್ನಿ ವಿಜಯಲಕ್ಷ್ಮಿ ದುಬೈನಲ್ಲಿ ಒಂಟಿಯಾಗಿ ಎಂಜಾಯ್ ಮಾಡುತ್ತಿದ್ದಾರೆ; ಇವರ ಅಂದಕ್ಕೆ ಮನಸೋತ ಕರುನಾಡು

 | 
H

ಆಗಾಗ ಪ್ರವಾಸಕ್ಕೆ ತೆರಳುವ ದರ್ಶನ್ ತೂಗ್ ದೀಪ್ ಅವರ ಪತ್ನಿ ವಿಜಯಲಕ್ಷ್ಮಿ ಮಗ ವಿನೀಶ್ ಜೊತೆ ದುಬೈ ಪ್ರವಾಸದಲ್ಲಿದ್ದು, ಅಲ್ಲಿನ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾಟೇರ ಸಿನಿಮಾದ ನಂತರ ಡೆವಿಲ್ ಚಿತ್ರದ ಶೂಟಿಂಗ್ ಅಲ್ಲಿ ದರ್ಶನ್ ಬ್ಯುಸಿ ಆಗಿರುವ ಕಾರಣದಿಂದ ಇವರಿಬ್ಬರೂ ತೆರಳಿದ್ದಾರೆ ಎನ್ನಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ವಿಜಯಲಕ್ಷ್ಮೀ  ದುಬೈನ ಸುಂದರ ತಾಣಗಳಲ್ಲಿ ಮಗನೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಿಜಯಲಕ್ಷ್ಮೀ ಬಿಳಿ ಬಣ್ಣದ ಮೇಲೆ ಪರ್ಪಲ್ ಬಣ್ಣದ ಫ್ಲೋರಲ್ ಡಿಸೈನ್  ಇರುವಂತಹ ಡ್ರೆಸ್ ದರಿಸಿದ್ದಾರೆ.

ಅದಕ್ಕೆ ಮ್ಯಾಚ್ ಆಗುವಂತೆ ಕೊರಳಿಗೆ ದೊಡ್ಡದಾದ ಬಿಳಿ ಮುತ್ತಿನ ಹಾರವನ್ನು ಧರಿಸಿದ್ದು, ಸಖತ್ತಾಗಿ ಕಾಣಿಸುತ್ತಿದ್ದಾರೆ. 
ವಿಜಯಲಕ್ಷ್ಮಿ ತಮ್ಮ ಫ್ಯಾಮಿಲಿ ಜೊತೆ ದುಬೈ ಪ್ರವಾಸ ಮಾಡ್ತಿದ್ದಾರೆ. ಅವರು ಶೇರ್ ಮಾಡಿರೋ ಫೋಟೋಗಳಲ್ಲಿ ಜೊತೆಯಾಗಿ ಬೇರೋಬ್ಬರೂ ಇದ್ದಾರೆ, ಅಲ್ಲದೆ ಮಗ ವಿನೀಶ್ ದರ್ಶನ್ ಜೊತೆ ಮತ್ತಿಬ್ಬರು ಮಕ್ಕಳು ಇದ್ದಾರೆ. 

ಅದು ದರ್ಶನ್ ಅವರ ಸಹೋದರ ದಿನಕರ್ ತೂಗ್ ದೀಪ್ ಅವರ ಮಕ್ಕಳು ಎನ್ನಲಾಗುತ್ತಿದೆ. ಇನ್ನು ಮುದ್ದು ಮುದ್ದಾಗಿ ಕಾಣಿಸ್ತಿರೋ ವಿಜಯಲಕ್ಷ್ಮಿ ಫೋಟೋ ನೋಡಿ ಅಭಿಮಾನಿಗಳು ಅತ್ತಿಗೆ ಸೂಪರ್ ಆಗಿ ಕಾಣಿಸ್ತಿದ್ದೀರಿ, ಕ್ಯೂಟ್ ಆಗಿ ಕಾಣಿಸ್ತಿದ್ದೀರಿ ಅತ್ತಿಗೆ, ಅತ್ತಿಗೆಮ್ಮ ಎಂದು ಹಲವರು ಹಾರ್ಟ್ ಇಮೋಜಿ ಹಾಕಿ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.