ಪವಿತ್ರ ಗೌಡ ಕದ್ದುಮುಚ್ಚಿ ಮಾಡಿರುವ ವಿಡಿಯೋ ಲೀ.ಕ್ ಮಾಡಿದ‌ ದರ್ಶನ್ ಪತ್ನಿ ವಿಜಯಲಕ್ಷ್ಮಿ

 | 
Bnj

ಸ್ಯಾಂಡಲ್​ವುಡ್​ ನಟಿ ಪವಿತ್ರಾ ಗೌಡ ವಿರುದ್ಧ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಸಿಡಿದೆದ್ದಿದ್ದಾರೆ. ತನ್ನ ಗಂಡ‌ನ ಫೋಟೋಗಳನ್ನ ಶೇರ್ ಮಾಡಿದ್ದಕ್ಕೆ ಆಕ್ಷೇಪ‌ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ. ನಟಿ ಪವಿತ್ರಾ ಗೌಡ ಅವರು ಡಿ ಬಾಸ್​ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ರಿಲೇಶನ್ ಷಿಪ್ ಗೆ 10 ವರ್ಷ ಎಂದು ಬರೆಯುವ ಮೂಲಕ ಪೋಸ್ಟ್ ಹಾಕಿಕೊಂಡಿದ್ದಾರೆ. 

ಫೋಟೋದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಮಗಳ ಜೊತೆಗಿರುವ ದರ್ಶನ್ ಕಾಣಿಸಿಕೊಂಡಿದ್ದಾರೆ. ಅತ್ತ ಪವಿತ್ರಾ ಗೌಡ ಹಾಕಿರುವ ಪೋಸ್ಟ್ ಕಂಡು ದರ್ಶನ್​ ಪತ್ನಿ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಫೋಟೋ ಹಾಕಿಕೊಂಡು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. 

ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ, ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ.

ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯುವ ಮೂಲಕ ಸಂಜಯ್ ಸಿಂಗ್, ಖುಷಿ ಗೌಡ, ಶಾನ್ವಿ ಸಂಸೂರಿ ಹಾಗೂ ಪವಿತ್ರಾ ಗೌಡ ಅಕೌಂಟ್​ಗೆ ಟ್ಯಾಗ್​ ಮಾಡಿದ್ದಾರೆ. 
 
ಒಟ್ಟಿನಲ್ಲಿ ಪವಿತ್ರಾ ಗೌಡ ಹಾಕಿಕೊಂಡಿರುವ ದರ್ಶನ್​ ಫೋಟೋಗೆ ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಗೌರವಕ್ಕೆ ಧಕ್ಕೆ‌ತರುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆಲ್ಲ ನಟಿ ಪವಿತ್ರಾ ಗೌಡ ಏನು ಉತ್ತರ ಕೊಡಲಿದ್ದಾರೆ ಎಂದು ಕಾದುನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.