ಎಲ್ಲಾ ಕಡೆಯಲ್ಲೂ ದಶ೯ನ್, ಈ ದಶ೯ನ್ ಯಾರು; ಮೋದಿ
Sep 16, 2024, 14:58 IST
|
ಕಳೆದ ಮೂರು ತಿಂಗಳಿನಿಂದ ರೇಣುಕಾಸ್ವಾಮಿ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಅನ್ನು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಒಂದಿಷ್ಟು ಅಂಶಗಳನ್ನು ಪೊಲೀಸರು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ದರ್ಶನ್‌ಗೆ ಈ ಪ್ರಕರಣ ಉರುಳಾಗಿ ಪರಿಣಮಿಸಿದೆ. ಏನೇ ಮಾಡಿದರೂ ಕೂಡ ಈ ಪ್ರಕರಣದಿಂದ ಹೊರ ಬರುವುದು ಬಹಳಷ್ಟು ಕಷ್ಟ ಅಂತಲೇ ಹೇಳಲಾಗುತ್ತಿದೆ. ದರ್ಶನ್‌ಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಹಾಗಾದರೆ ದರ್ಶನ್ ಜೈಲಿನಿಂದ ಹೊರಬರೋಕೆ ಸಾಧ್ಯನೇ ಇಲ್ವಾ? ಸುಬ್ಬ ಮತ್ತು ಮುದ್ದು ಹೆಂಡ್ತಿ ಲೈಫ್ ಇಷ್ಟೇನಾ? ಖ್ಯಾತ ನಟನಿಗೆ ಇನ್ಮುಂದೆ ಜೈಲಿನಲ್ಲಿ ನರಕ ದರ್ಶನನಾ? ಅನ್ನೋ ಪ್ರಶ್ನೆಗಳು ಉದ್ಭವಿಸಿವೆ. ಕೇಂದ್ರ ಸರ್ಕಾರದ ಹೊಸ ಸೂಚನೆಗಳ ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಬದಲಾದ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ದೊರೆಯೋದು ಗ್ಯಾರಂಟಿ ಎನ್ನಲಾಗ್ತಿದೆ.
ಯಾಕೆಂದರೆ ರೇಣುಕಾಸ್ವಾಮಿಗೆ ನಾನು ಎದೆಯ ಮೇಲೆ ಒದ್ದೆ ಎಂದು ದರ್ಶನ್ ತಪ್ಪೊಪ್ಪಿಕೊಂಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಇದು ಉಲ್ಲೇಖವಾಗಿದೆ. ಹತ್ಯೆ ಕೇಸ್‌ನಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿಗಳು ಲಭ್ಯವಾಗಿದೆ. ಇದರ ಬಗ್ಗೆ ದರ್ಶನ್ ಒಪ್ಪಿಕೊಂಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿದೆ. ಕಾಲ್ ರೆಕಾರ್ಡ್ಸ್, ಟೆಕ್ನಿಕಲ್ ಎವಿಡೆನ್ಸ್, ಪ್ರತ್ಯಕ್ಷ ಸಾಕ್ಷಿಗಳು, ತನಿಖೆ ವೇಳೆಯ ಸರ್ಕಾರಿ ಸಿಬ್ಬಂದಿ ಸಹ ಸಾಕ್ಷಿದಾರರಾಗಿದ್ದಾರೆ.
ಇನ್ನೂ ತಾವೇ ಹೆಣೆದ ಬಲೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ದರ್ಶನ್ ವಿರುದ್ಧ 302, 201, 120 (ಬಿ), 355, 364, 148 & 149 ಸೆಕ್ಷನ್ ನಲ್ಲಿ ಪ್ರಕರಣಗಳು ದಾಖಲಾಗಿವೆ. ಅತ್ಯಂತ ಕಠಿಣ ಸೆಕ್ಸನ್‌ಗಳ ಅಡಿಯಲ್ಲಿ ದರ್ಶನ್ ವಿರುದ್ಧ ಕೇಸ್ ದಾಖಲಾಗಿದ್ದು ದಾಸ ಹೊರಬರುವುದು ಕಷ್ಟಸಾಧ್ಯ.ಕೊಲೆ ಪ್ರಕರಣ, ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ, ಕಿಡ್ನ್ಯಾಪ್, ಗಲಭೆ, ಮಾರಣಾಂತಿಕ ಆಯುಧ ಬಳಸಿ ದಾಳಿಗೈದ ಆರೋಪಗಳು ಇವೆ. ಈ ಎಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ದರ್ಶನ್‌ಗೆ ಜಾಮೀನು ಸಿಗುವುದು ಕಷ್ಟ ಇದೆ. ಪ್ರಬಲ ಸಾಕ್ಷಿಗಳು ಇರುವ ಹಿನ್ನೆಲೆ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ ದರ್ಶನ್.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.