ಪತ್ನಿ ಮುಂದೆ ಆನೆಯಂತೆ ನಡೆದುಕೊಂಡು ಬಂದ ಡಿ ಬಾಸ್; ವಿಜಯಲಕ್ಷ್ಮಿ ಫಿದಾ
Sep 7, 2024, 19:38 IST
|
ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ರು. ಇದೇ ವೇಳೆ ವಿಜಯಲಕ್ಷ್ಮಿ ಕೆಲವು ಪೇಪರ್ ಗಳನ್ನು ಹಿಡಿದುಕೊಂಡು ಬಂದಿದ್ರು. ಅದೇನು ಎನ್ನುವ ಕುತೂಹಲ ಮೂಡಿತ್ತು. ಜಾಮೀನು ಅರ್ಜಿಗೆ ಸಹಿ ಹಾಕಿಸಲು ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬಂದಿದ್ರು ಎನ್ನಲಾಗ್ತಿದೆ.
ಸೆಲ್ ನಿಂದ ಸಂದರ್ಶಕರ ಕೊಠಡಿಗೆ ಬಂದ ನಟ ದರ್ಶನ್ ಕುಟುಂಬಸ್ಥರನ್ನು ಭೇಟಿ ಮಾಡಿದ್ರು. ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗದೀಪ ಜೊತೆ ದರ್ಶನ್ ಕೆಲ ಕಾಲ ಚರ್ಚೆ ನಡೆಸಿದ್ರು. ಜಾರ್ಜ್ ಶೀಟ್ ಕುರಿತು ಇಬ್ಬರ ಜೊತೆ ಚರ್ಚೆ ನಡೆದಿದೆ ಎನ್ನಲಾಗ್ತಿದೆ. ಇದೇ ವೇಳೆ ವಿಜಯಲಕ್ಷ್ಮಿ ತಂದಿದ್ದ ಜಾಮೀನು ಅರ್ಜಿಗೆ ದರ್ಶನ್ ಸಹಿ ಹಾಕಿದ್ದಾರಂತೆ.
ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗದೀಪ ಜೊತೆ ದರ್ಶನ್ ಕಾನೂನು ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇದೇ ವೇಳೆ ಸಹೋದರನ ಸ್ಥಿತಿ ಕಂಡು ದಿನಕರ್ ಕಣ್ಣೀರು ಹಾಕಿದ್ರು ಎನ್ನಲಾಗ್ತಿದೆ.ಸುಮಾರು 1.15 ಗಂಟೆಗಳ ಕಾಲ್ ಕಾರಾಗೃಹದಲ್ಲಿಯೇ ಇದ್ದ ವಿಜಯಲಕ್ಷ್ಮಿ ಮತ್ತು ದಿನಕರ ತೂಗುದೀಪ್, ಸಂಜೆ 5.23ಕ್ಕೆ ಬಳ್ಳಾರಿ ಜೈಲಿನಿಂದ ಹೊರಗಡೆ ಬಂದಿದ್ದಾರೆ.
ವಿಜಿಟರ್ಸ್ ರೂಮ್ ನಲ್ಲಿ ದರ್ಶನ್ ನೊಂದಿಗೆ ವಿಜಯಲಕ್ಷ್ಮಿ 26 ನಿಮಿಷಗಳ ಕಾಲ ಚರ್ಚೆ ಮಾಡಿದ್ದು, ಇನ್ನು ಅರ್ಧ ಗಂಟೆ ಜೈಲು ಅಧಿಕಾರಿಗಳ ಜೊತೆ ಚರ್ಚಿಸಿದ್ರು ಎನ್ನಲಾಗ್ತಿದೆ. ಹೆಂಡತಿಯನ್ನು ನೋಡಲು ದರ್ಶನ್ ಓಡೋಡಿ ಬಂದಿದ್ದಾರೆ. ಜಾಮೀನು ಅರ್ಜಿ ಕೈಯಲ್ಲಿ ಹಿಡಿದು ಹೊರಗಡೆ ಬಂದ ವಿಜಯಲಕ್ಷ್ಮಿಯನ್ನು ಮಾಧ್ಯಮದವರು ಮಾತಾಡಿಸಲು ಯತ್ನಿಸಿದ್ರು.
ಪ್ರತಿಕ್ರಿಯಿಸಲು ನಿರಾಕರಿಸಿ ಹೊರಗಡೆ ಬಂದು ನೇರವಾಗಿ ಕಾರ್ ನಲ್ಲಿ ಕುಳಿತುಕೊಂಡಿದ್ದಾರೆ. ಜೈಲು ಹೊರಗಡೆ ಕಾದು ನಿಂತ ಅಭಿಮಾನಿಗಳು, ಡಿ ಬಾಸ್ ಎಂದು ಘೋಷಣೆ ಕೂಗಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.