ದಶಕಗಳ ಹಿಂದೆ 350 CC ಬುಲೆಟ್ ಬೈಕ್ ಬೆಲೆ ಕೇವಲ 5% ಇತ್ತು, ಅದರೆ 2025 ರಲ್ಲಿ 2 ಲಕ್ಷ ಕಂಡ್ರಿ
ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಎಂದರೆ ಗಾಂಭೀರ್ಯ, ಶಕ್ತಿ ಮತ್ತು ಪರಂಪರೆಯ ಸಂಕೇತ. ಇಂದಿಗೂ ರಸ್ತೆಯ ಮೇಲೆ ಬುಲೆಟ್ ಬೈಕ್ ಸಾಗಿದಾಗ ಅದರ ಧ್ವನಿ ಮತ್ತು ಶೈಲಿ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಈ ಬೈಕ್ ಒಂದು ಕಾಲದಲ್ಲಿ ಎಷ್ಟು ಕಡಿಮೆ ಬೆಲೆಗೆ ಸಿಕ್ಕಿತೆಂದು ಕೇಳಿದ್ರೆ ನಂಬೋಕೆ ಆಗೋದಿಲ್ಲ!
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ 1986ರ ಹಳೆಯ ಬಿಲ್ ಪ್ರಕಾರ, ಆ ಕಾಲದಲ್ಲಿ ಬುಲೆಟ್ 350 ಬೈಕಿನ ಬೆಲೆ ಕೇವಲ ₹18,700 ಮಾತ್ರ! ಈ ಬಿಲ್ ಜನವರಿ 23, 1986ರಂದು M/s RS ಇಂಜಿನಿಯರಿಂಗ್ ಇಂಡಸ್ಟ್ರೀಸ್ ಮೂಲಕ ನೀಡಲ್ಪಟ್ಟಿದ್ದು, ಬೊಕಾರೊ ಸ್ಟೀಲ್ ಸಿಟಿಯ ಸಂದೀಪ್ ಆಟೋ ಕಂಪನಿ ಮೂಲಕ ಬೈಕ್ ಮಾರಾಟವಾಗಿತ್ತು. ಆ ಸಮಯದಲ್ಲಿ ಹಸ್ತಬರಹದ ಕಾಗದದ ಬಿಲ್ಲುಗಳೇ ಸಾಮಾನ್ಯವಾಗಿದ್ದವು.
ಇಂದಿನ ದಿನಗಳಲ್ಲಿ ಅದೇ ಬುಲೆಟ್ 350 ಬೆಲೆ ಸುಮಾರು ₹2 ಲಕ್ಷದಷ್ಟಿದೆ. ಅಂದರೆ ನಾಲ್ಕು ದಶಕಗಳಲ್ಲಿ ಈ ಬೈಕಿನ ಬೆಲೆ ಹತ್ತು ಪಟ್ಟು ಏರಿಕೆಯಾಗಿದೆ. ಇದರಿಂದ ಭಾರತೀಯ ಆರ್ಥಿಕತೆ, ಕರೆನ್ಸಿ ಮೌಲ್ಯ ಮತ್ತು ವಾಹನ ಕ್ಷೇತ್ರದ ಬೆಳವಣಿಗೆಯ ಚಿತ್ರಣ ಸ್ಪಷ್ಟವಾಗುತ್ತದೆ.ರಾಯಲ್ ಎನ್‌ಫೀಲ್ಡ್ ಕಂಪನಿಯು ಇಂಗ್ಲೆಂಡ್‌ನ ಎನ್‌ಫೀಲ್ಡ್ ಸೈಕಲ್ ಕಂಪನಿಯಿಂದ 1901ರಲ್ಲಿ ಪ್ರಾರಂಭಗೊಂಡು, ಇಂದಿಗೂ ವಿಶ್ವದ ಅತ್ಯಂತ ಹಳೆಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಮೋಟರ್‌ಸೈಕಲ್ ಬ್ರಾಂಡ್ ಆಗಿದೆ.
ಚೆನ್ನೈ ಮೂಲದ ಈ ಕಂಪನಿ ತನ್ನ “ಮೇಡ್ ಲೈಕ್ ಎ ಗನ್” ಶೈಲಿಯಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದೆ.ಕಾಲ ಬದಲಾಗಿದ್ದರೂ, ಬುಲೆಟ್‌ನ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. 1986ರ ₹18,700 ಬಿಲ್ ಇಂದು ಕೇವಲ ಬೈಕಿನ ದರವನ್ನು ಮಾತ್ರವಲ್ಲ, ಭಾರತದ ಜೀವನಶೈಲಿ ಮತ್ತು ಆರ್ಥಿಕ ಇತಿಹಾಸವನ್ನೂ ನೆನಪಿಗೆ ತರುತ್ತದೆ. ಬೆಲೆ ಎಷ್ಟೇ ಏರಿದ್ದರೂ, ಬುಲೆಟ್ ಬೈಕ್ ತನ್ನ ರಾಜ ವೈಭವವನ್ನು ಇಂದಿಗೂ ಹೆಮ್ಮೆಯಿಂದ ಪ್ರದರ್ಶಿಸುತ್ತಿದೆ.