ಕೈಯಲ್ಲಿ ಮಗು ಹಿಡಿದುಕೊಂಡು ಅಮ್ಮನ ಬರ್ತಡೆ ಆಚರಿಸಿದ ದೀಪಿಕಾ ದಾಸ್
Apr 16, 2025, 18:58 IST
|

ಕನ್ನಡ ಕಿರುತೆರೆಯ ನಟಿಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಇದೀಗ ಪಾರು ಪಾರ್ವತಿ ಸಿನಿಮಾದಲ್ಲಿ ನಾಯಕಿ ನಟಿಯಾಗುವ ಮೂಲಕ ಕನ್ನಡದ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ತುಂಬಾ ಸ್ಟ್ರಾಂಗ್ ವ್ಯಕ್ತಿತ್ವದಂತೆ ಕಾಣುವ ದೀಪಿಕಾ ದಾಸ್ ಜೀವನದಲ್ಲಿಯೂ ಕೆಲವು ನೋವಿನ ವಿಚಾರಗಳಿವೆ. ಇದೀಗ ಮೊದಲ ಬಾರಿಗೆ ನಟಿ ದೀಪಿಕಾ ದಾಸ್ ತಮ್ಮ ತಂದೆ-ತಾಯಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನನಗೆ ಚಿಕ್ಕವಳಿದ್ದಾಗ ಅಮ್ಮನ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ನಾನು ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ಆದರೆ ನಿಜ ಹೇಳಬೇಕು ಅಂದರೆ ನಮ್ಮ ಅಪ್ಪ ಹೋದ ಮೇಲೆ ಅಮ್ಮನ ಬೆಲೆ ಏನೂ ಅಂತಾ ಗೊತ್ತಾಯ್ತು. ನಮ್ಮ ತಂದೆ ಈಗಿಲ್ಲ. ನಾನು ನಟನೆಗೆ ಬಂದು ಒಂದು ವರ್ಷ ಆಗಿತ್ತು ಅಷ್ಟೇ. ಕೃಷ್ಣ ರುಕ್ಮಿಣಿ ಧಾರಾವಾಹಿ ಮಾಡಿ ಒಂದು ವರ್ಷ ಆಗಿತ್ತು. ಅದರ ನಡುವೆ ಬೇರೆ ಸಿನಿಮಾ ನೋಡುತ್ತಿದೆ. ಈ ಮಧ್ಯೆ ಅಪ್ಪ ತೀರಿ ಹೋದರು. ಹಾಗಾಗಿ ಅಮ್ಮನ ಜೊತೆಯೇ ಬೆಳೆದೆ.
https://youtube.com/shorts/LXwrZM9PfwE?si=VH4t6acSTkPjSBJX
ಅಪ್ಪ ಹೋದ ಮೇಲೆ ನಿಜವಾಗಿಯೂ ಗೊತ್ತಾಗಿದ್ದು ನಮ್ಮ ಅಮ್ಮ ನಮಗೆ ಅವರದೇ ಆದ ರೀತಿಯಲ್ಲಿ ನಮಗೆ ಪ್ರೀತಿ ಕೊಡುತ್ತಿದ್ದರು ಅಂತಾ. ಮೊದಲು ಅವರು ಕೊಡುತ್ತಿದ್ದ ಪ್ರೀತಿಗೆ ನಾವು ಗೌರವ ಕೊಡುತ್ತಿರಲಿಲ್ಲ. ಅಪ್ಪ ಹೋದ ಮೇಲೆ ಅಮ್ಮನೇ ಅಪ್ಪ-ಅಮ್ಮ ಎರಡೂ ಆಗಿ ನಮಗೆ ಬಲವಾಗಿ ನಿಂತರು. ಅದರಿಂದಲೇ ಇವತ್ತು ದೀಪಿಕಾ ದಾಸ್ ನಿಂತಿರುವುದು. ಅಪ್ಪನ ಜೊತೆಗಿದ್ದಾಗ ಮುದ್ದಿನ ಮಗಳಾಗಿದ್ದೆ. ಆದರೆ ಅಮ್ಮ ದೀಪಿಕಾ ದಾಸ್ ಎನ್ನುವ ವ್ಯಕ್ತಿತ್ವವನ್ನು ಸೃಷ್ಟಿ ಮಾಡಿದರು ಎಂದು ತಮ್ಮ ತಾಯಿಯ ಬಗ್ಗೆ ದೀಪಿಕಾ ದಾಸ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈದೀಗ ನಟಿ ದೀಪಿಕಾ ಅವರ ತಾಯಿ ಪದ್ಮಲತಾ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ತಾಯಿಯ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ ಮಗಳು ದೀಪಿಕಾ ದಾಸ್. ನಟಿ ದೀಪಿಕಾ ದಾಸ್ ತಾಯಿಯ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಅಮ್ಮನ ಹುಟ್ಟು ಹಬ್ಬದಂದು ನಟಿ ದೀಪಿಕಾ ದಾಸ್ ಲೈಟ್ ಬ್ಲೂ ಕಲರ್ ಲಾಂಗ್ ಗೌನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಮ್ಮನ ಬರ್ತ್ ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಇನ್ನೂ, ಅಮ್ಮನಿಗಾಗಿ ಸ್ಪೆಷಲ್ ಕೇಕ್ ಕಟ್ ಮಾಡಿಸಿ ಖುಷಿಪಟ್ಟಿದ್ದಾರೆ. ಬರ್ತ್ ಡೇ ಸೆಲೆಬ್ರೇಶನ್ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.