ಗಂಡನ ಕೈ ಹಿಡಿದು ಎಂಟ್ರಿ ಕೊಟ್ಟ ದೀಪಿಕಾ ದಾಸ್, ಈ ಮುದ್ದಾದ ಜೋಡಿ ನೋಡಲು ಎರಡು ಕಣ್ಣು ಸಾಲಲ್ಲ

 | 
ೂೂೂ

ಮದುವೆ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು ‘ಬಿಗ್ ಬಾಸ್’ ಬೆಡಗಿ ದೀಪಿಕಾ ದಾಸ್. ಇದೀಗ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಆರತಕ್ಷತೆ ಮತ್ತು ಬೀಗರೂಟ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ದೀಪಿಕಾ ದಾಸ್ ದಂಪತಿ ಶುಭಹಾರೈಸಲು ಸ್ಯಾಂಡಲ್‌ವುಡ್ ನಟ-ನಟಿಯರು ಭಾಗಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳಾದರೂ ಅವರ ಹೆಸರು ಕೀರ್ತಿಯನ್ನು ಬಳಸಿಕೊಳ್ಳದೆ ಸ್ವಂತ ಹೆಸರಿನಿಂದಲೇ ಫೇಮಸ್ ಆಗಿರುವ ಈ ನಟಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.ಮಾರ್ಚ್ 10ರಂದು ಮಧ್ಯಾಹ್ನ 12.30ಕ್ಕೆ ಆರತಕ್ಷತೆ ಕಾರ್ಯಕ್ರಮ ಜರುಗಿದ್ದು, ಬಿಗ್ ಬಾಸ್ ಖ್ಯಾತಿ ದಿವ್ಯಾ ಉರುಡುಗ , ಪ್ರಶಾಂತ್ ಸಂಬರಗಿ, ನೀತು ವನಜಾಕ್ಷಿ, ಅನುಪಮಾ ಗೌಡ, ಚಂದನಾ ಅನಂತಕೃಷ್ಣ, ಪ್ರಿಯಾಂಕಾ, ಪನ್ನಗ ಭರಣ, ಕಿಶನ್, ಸಿಂಗರ್ ವಾಸುಕಿ ವೈಭವ್  ಸೇರಿದಂತೆ ಅನೇಕರು ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಿ ವಿಶ್ ಮಾಡಿದ್ದಾರೆ.‌

ಅದಷ್ಟೇ ಅಲ್ಲ, ಸ್ನೇಹಿತೆ ದೀಪಿಕಾ ದಾಸ್ ಇನ್ನೂನು ಬೇಕಾಗಿದೆ ಒಲವು ಎಂಬ ಸಾಂಗ್ ಹಾಡಿ ನವ ಜೋಡಿಗೆ ವಿಶೇಷವಾಗಿ ಶುಭಕೋರಿದ್ದಾರೆ ವಾಸುಕಿ ವೈಭವ್. ವಾಸುಕಿ-ದೀಪಿಕಾ ಸ್ನೇಹ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.ಮಾರ್ಚ್ 1ರಂದು ದೀಪಿಕಾ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದ್ದರು.

 ಜೊತೆಗೆ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನೂ ಅವರು ಹಂಚಿಕೊಂಡಿರಲಿಲ್ಲ. ಮೊನ್ನೆಯಷ್ಟೇ ತನ್ನ ಕರಿಮಣಿ ಮಾಲೀಕನನ್ನು ನಟಿ ಪರಿಚಯಿಸಿದ್ದರು. ಪತಿಯ ಹೆಸರು ದೀಪಕ್  ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದರು.ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. 

ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು. ಸರ್ಪ್ರೈಸ್ ಕೂಡ ಸ್ವೀಟ್ ಆಗಿದೆ. ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ದೀಪಿಕಾ ದಾಸ್ ಮನವಿ ಮಾಡಿದ್ದರು.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.