ಮದುವೆಯಾದ ಒಂದೇ ತಿಂಗಳಿಗೆ ಸಿಹಿಸುದ್ದಿ ಕೊಟ್ಟ ದೀಪಿಕಾ ದಾಸ್; ಗಂಡನ ಮೇಲೆ ಕನ್ನಡಿಗರು ಫಿದಾ

 | 
ಗ

ಇತ್ತೀಚೆಗೆ ಗೋವಾದಲ್ಲಿ ಮದುವೆಯಾಗಿದ್ದ ನಟಿ ದೀಪಿಕಾ ದಾಸ್ ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಇದಕ್ಕೆ ಬಹುತೇಕ ಅವರ ಬಿಗ್ ಬಾಸ್ ಸ್ನೇಹಿತರೆಲ್ಲಾ ಬಂದಿದ್ದಾರೆ. ಆದರೆ ಅವರಿಗೆ ತೀರಾ ಆತ್ಮೀಯರಾಗಿದ್ದ ಶೈನ್ ಶೆಟ್ಟಿ ಗೈರಾಗಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಶೈನ್ ಶೆಟ್ಟಿ ಜೊತೆಗೆ ದೀಪಿಕಾ ಗೆಳೆತನವಿತ್ತು. ಅದು ಮನೆಯಿಂದ ಹೊರಬಂದ ಮೇಲೂ ಮುಂದುವರಿದಿತ್ತು. 

ಈ ಜೋಡಿ ನೋಡಿ ಎಷ್ಟೋ ಜನ ನಿಜ ಜೀವನದಲ್ಲಿ ನೀವೇ ಮದುವೆಯಾಗಿ ಎಂದು ಸಲಹೆ ನೀಡಿದ್ದು ಇದೆ. ಆದರೆ ಇಬ್ಬರೂ ತಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದೇ ಹೇಳುತ್ತಾ ಬಂದಿದ್ದರು. ಇದೀಗ ದೀಪಿಕಾ ಗೋವಾದಲ್ಲಿ ತಾವು ಪ್ರೀತಿಸಿದ ದೀಪಕ್ ಎನ್ನುವ ಹುಡುಗನ ಜೊತೆ ಮದುವೆ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಸ್ನೇಹಿತರಿಗಾಗಿ ಆರತಕ್ಷತೆಯನ್ನೂ ಇಟ್ಟುಕೊಂಡಿದ್ದರು. ಇದಕ್ಕೆ ಶೈನ್ ಶೆಟ್ಟಿ ಹೊರತುಪಡಿಸಿ ಬಿಗ್ ಬಾಸ್ ನ ಅವರ ಸ್ನೇಹಿತರೆಲ್ಲರೂ ಬಂದಿದ್ದರು.

ಶೈನ್ ಶೆಟ್ಟಿ ಶೂಟಿಂಗ್ ನಲ್ಲಿ ಇದ್ದ ಕಾರಣ ತಮ್ಮ ತಾಯಿಯನ್ನು ಕಳಿಸಿದ್ದರು. ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ, ಪ್ರಿಯಾಂಕ ಶಿವಣ್ಣ, ನೀತು, ಅನುಪಮಾ ಗೌಡ ಸೇರಿದಂತೆ ಬಹುತೇಕ ಬಿಗ್ ಬಾಸ್ ಸದಸ್ಯರು ಬಂದಿದ್ದರು. ಆದರೆ ಶೈನ್ ಶೆಟ್ಟಿ ಬದಲಿಗೆ ಅವರ ತಾಯಿ ಹಾಜರಾಗಿದ್ದರು. ಸ್ನೇಹಿತನಾಗಿ ಶೈನ್ ಶೆಟ್ಟಿ ಆರತಕ್ಷತೆಗೆ ಬರಲಿಲ್ಲ ಎಂದು ಅವರ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದು ನಿಜ.

ಅವರಿಬ್ಬರು ಬಿಗ್​ಬಾಸ್ ಮನೆಯಲ್ಲಿಯೂ ಕ್ಲೋಸ್ ಆಗಿದ್ದರು. ತುಂಬಾ ಅತ್ಮೀಯರಾಗಿದ್ದರು. ಇವರು ಲವರ್ಸ್ ಎಂದೇ ಫೇಮಸ್ ಆಗಿದ್ದು ಖಂಡಿತಾ ಮದುವೆಯಾಗುತ್ತಾರೆ ಎಂದು ನಂಬಿದ್ದರು ಜನ. ಆದರೆ ಈಗ ದೀಪಿಕಾ ಮದುವೆಯಾಗಿದ್ದಾರೆ. ನಟ ಶೈನ್ ಶೆಟ್ಟಿ ಅವರು ದೀಪಿಕಾ ದಾಸ್ ಅವರಿಗೆ ಮದುವೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿ ದೀಪಿಕಾ ದಾಸ್ ಅವರಿಗೆ ಮದುವೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ನಟನ ಫೋಟೋ ಹಿಡಿದು ಕರಿಮಣಿ ಮಾಲೀಕ ನೀನಲ್ಲ ಎಂದಿದ್ದಾರೆ.