ಮದುವೆ ಬಳಿಕ ಮೊದಲ ರಾತ್ರಿಗೆ ರೆಡಿಯಾದ ದೀಪಿಕಾ ದಾಸ್; ಸದ್ದಿಲ್ಲದೆ ಎಲ್ಲವೂ ಮುಗಿಯಿತು
ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ದೀಪಿಕಾ ದಾಸ್ ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡಿದ್ದಾರೆ. ದೀಪಿಕಾ ಮದುವೆಯಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ರು ಎನ್ನಲಾಗ್ತಿದೆ. ದೀಪಿಕಾ ದಾಸ್ ಮಾ.01ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ವೀಟ್ ಶಾಕ್ ನೀಡಿದ್ರು. ಅಷ್ಟೇ ಅಲ್ಲದೇ ಕಮೆಂಟ್ ಬಾಕ್ಸ್ ಆಫ್ ಮಾಡಿ ಕುತೂಹಲ ಕೆರಳಿಸಿದ್ರು.
ದೀಪಿಕಾ ದಾಸ್ ಮಾರ್ಚ್ 01ರಂದು ದೀಪಕ್ ಅವರ ಬಾಳ ಸಂಗಾತಿಯಾಗಿ ಹೊಸ ಜೀವನ ಶುರು ಮಾಡಿದ್ದಾರೆ. ಮನಗೆದ್ದವನ ಜೊತೆ ದೀಪಿಕಾ ದಾಸ್ ಏಳು ಹೆಜ್ಜೆ ಇಟ್ಟಿದ್ದಾರೆ. ಬೀಚ್ ಎದುರು ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡಲಾಗಿದೆ. ಅದ್ಧೂರಿಯಾಗಿ ಸಿದ್ಧಕೊಂಡಿದ್ದ ಮಂಟಪದಲ್ಲಿ ದೀಪಿಕಾ ದಾಸ್ ಕಲ್ಯಾಣ ನಡೆದಿದೆ.
ದೀಪಿಕಾ ದಾಸ್ ಮದುವೆ ಫೋಟೋ ನೋಡಿದ ಫ್ಯಾನ್ಸ್, ದೀಪಿಕಾ ದಾಸ್ ಕೈ ಹಿಡಿದ ಹುಡುಗ ಯಾರು? ಇವರದ್ದು ಲವ್ ಮ್ಯಾರೇಜಾ ಅಥವಾ ಅರೇಂಜ್ ಮ್ಯಾರೇಜಾ ಎಂದು ಕೇಳ್ತಿದ್ದಾರೆ. ದೀಪಿಕಾ ದಾಸ್ ತಾನು ಮದುವೆಯಾದ ಹುಡುಗ ಯಾರು ಎನ್ನುವ ವಿಚಾರವನ್ನು ತಿಳಿಸಿಲ್ಲ. ಗಂಡನ ಹೆಸರನ್ನು ಮಾತ್ರ ದೀಪಿಕಾ ದಾಸ್ ರಿವೀಲ್ ಮಾಡಿದ್ದಾರೆ. ದೀಪಿಕಾ ಕೈ ಹಿಡಿದ ಹುಡುಗನ ಹೆಸರು ದೀಪಕ್. ಹೆಸರು ನೋಡಿದ ಫ್ಯಾನ್ಸ್ ದೀಪಿಕಾ, ದೀಪಕ್ ಜೋಡಿ ಸೂಪರ್ ಎನ್ನುತ್ತಿದ್ದಾರೆ.
ಇನ್ನು ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ದೀಪಕ್ ಎಂಬುವವರನ್ನು ದೀಪಿಕಾ ದಾಸ್ ಮದುವೆ ಆಗಿದ್ದಾರೆ. ದೀಪಿಕಾ ದಾಸ್ ಹೆಚ್ಚಾಗಿ ದುಬೈಗೆ ಹೋಗ್ತಿದ್ರು. ಆಗಾಗ ಇನ್ಸ್ಟಾದಲ್ಲೂ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ದುಬೈನಲ್ಲಿರುವ ಹುಡುಗನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.