ಕೊನೆಗೂ ನಾನು ಗರ್ಭಿಣಿ ಎಂದು ಅನೌನ್ಸ್ ಮಾಡಿದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಶಾ‌.ಕ್

 | 
೭೭ಗಹ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಅಂದರೆ, ಈ ಜೋಡಿಯ ಮಡಿಲಿಗೆ ಪುಟಾಣಿಯ ಆಗಮನವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿಯನ್ನು ನೀಡಿದೆ ಈ ಜೋಡಿ. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಮಗುವಿನ ಆಗಮನವಾಗಲಿದೆ ಎಂದು ಈ ಸ್ಟಾರ್‌ ದಂಪತಿ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಈ ಸುದ್ದ ಹೊರಬೀಳುತ್ತಿದ್ದಂತೆ, ಅಭಿಮಾನಿ ವಲಯದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

2018ರಲ್ಲಿಯೇ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಜೋಡಿಯ ಮದುವೆಯಾಗಿತ್ತು. ಅಂದಿನಿಂದ ಇದೀಗ ಸುದೀರ್ಘ ಆರುವರ್ಷದ ಬಳಿಕ ಖುಷಿಯ ವಿಚಾರವನ್ನು ನೀಡಿ ಸಂಭ್ರಮಿಸಿದ್ದಾರೆ. ದೀಪಿಕಾ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಬಾಲಿವುಡ್‌ ಸೆಲೆಬ್ರಿಟಿ ಅಂಗಳದಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟಿಯರಾದ ಕೃತಿ ಸನೋನ್‌, 'ಓಹ ಮೈ ಗಾಡ್, ನಿಮ್ಮಿಬ್ಬರಿಗೂ ಅಭಿನಂದನೆಗಳು' ಎಂದು ಕಾಮೆಂಟ್‌ ಮಾಡಿದ್ದಾರೆ.

ಬಾಲಿವುಡ್‌ನ ಈ ಸ್ಟಾರ್‌ ಜೋಡಿ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ನವೆಂಬರ್‌ 14, 2018ರಂದು ವಿವಾಹವಾದರು. ಸುಮಾರು 6 ವರ್ಷಗಳ ಕಾಲ ಡೇಟಿಂಗ್‌ ಮಾಡಿದ ಬಳಿಕ ಇಟಲಿಯ ಲೇಕ್‌ ಕಾಮೊದಲ್ಲಿ ವಿವಾಹವಾದರು. ಇವರಿಬ್ಬರು ಮೊದಲ ಬಾರಿಗೆ ಸಂಜಯ್‌ ಲೀಲಾ ಬನ್ಸಾಲಿಯವರ ರೋಮಾಂಟಿಕ್‌ ಸಿನಿಮಾ ಗೊಲಿಯಾನ್‌ ಕಿ ರಾಸ್‌ಲೀಲ್‌ ರಾಮ್‌ ಲೀಲಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಇದಾದ ಬಳಿಕ ಇವರು ಬಾಜಿರಾವ್‌ ಮಸ್ತಾನಿ ಮತ್ತು ಪದ್ಮಾವತ್‌ ಸಿನಿಮಾದಲ್ಲಿ ಜತೆಯಾಗಿ ನಟಿಸಿದರು. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಇವರಿಬ್ಬರಬು ಬೆಲ್ಜಿಯಂನಲ್ಲಿ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವ ಆಚರಿಸಿದರು

ಇದೇ ವರ್ಷದ ಜನವರಿ ತಿಂಗಳಲ್ಲಿ ವೋಗ್ಯೂ ಸಿಂಗಾಪುರ್‌ ಜತೆ ದೀಪಿಕಾ ಪಡುಕೋಣೆ ಮಾತನಾಡುವಾಗ "ತಾಯಿಯಾಗುವ" ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತು ಆಲೋಚಿಸುವಿರಾ? ಎಂಬ ಪ್ರಶ್ನೆಗೆ "ಖಂಡಿತಾ, ರಣವೀರ್‌ ಮತ್ತು ನಾನು ಮಕ್ಕಳನ್ನು ಇಷ್ಟಪಡುತ್ತೇವೆ. ನಮ್ಮ ಸ್ವಂತ ಕುಟುಂಬ ಆರಂಭಿಸುವ ದಿನದ ನಿರೀಕ್ಷೆಯಲ್ಲಿದ್ದೇವೆ" ಎಂದು ಅವರು ಹೇಳಿದ್ದರು. ದೀಪಿಕಾ ಪಡುಕೋಣೆ ಇತ್ತೀಚೆಗೆ ವಾಯುಪಡೆಯ ಸಾಹಸ ಕಥೆಯನ್ನು ಹೊಂದಿರುವ ಫೈಟರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೃತಿಕ್‌ ರೋಷನ್ ಜತೆ ನಾಯಕಿಯಾಗಿ ನಟಿಸಿದ್ದರು. ಇದು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಸಿನಿಮಾ. 

ಇದರಲ್ಲಿ ಅನಿಲ್‌ ಕಪೂರ್‌, ಕರಣ್‌ ಸಿಂಗ್‌ ಗ್ರೋವರ್‌ ಮತ್ತು ಅಕ್ಷಯ್‌ ಓಬೆರಾಯ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರ ಮುಂದಿನ ಸಿನಿಮಾ ಕಲ್ಕಿ 2898 ಎಡಿ. ಪ್ರಭಾಸ್‌ ಜತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌ ಕೂಡ ನಟಿಸುತ್ತಿದ್ದಾರೆ. 2024ರ ಮೇ 9 ಅಂದರೆ ಮುಂದಿನ ತಿಂಗಳಲ್ಲಿಯೇ ಕಲ್ಕಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.