ದೀಪಿಕಾ ಪಡುಕೋಣೆ ಮಗು ಮುದ್ದಾದ ಮುಖ ರಿವೀಲ್, ಯಾರ ತರಹ ಇದೆ ಗೊ ತ್ತಾ
Updated: Sep 22, 2024, 12:27 IST
|
2018ರಲ್ಲಿ ವಿವಾಹವಾಗಿದ್ದ ರಣವೀರ್ ಸಿಂಗ್-ದೀಪಿಕಾ ಜೋಡಿ ಮದುವೆಯಾಗಿ 6 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ಈ ಬ್ಯೂಟಿಫುಲ್ ದಂಪತಿಗೆ ಹೆಣ್ಮಗುವಿನ ಜನನವಾಗಿದೆ. ಇಂದು ದೀಪಿಕಾ ಪಡುಕೋಣೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ದೀಪಿಕಾ ಹಾಗೂ ರಣವೀರ್ ಮಗು ಜತೆಗಿನ ಪೋಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗ್ತಿದೆ.
ದೀಪಿಕಾ ಮಗಳನ್ನು ಎತ್ತಿಕೊಂಡ ಫೋಟೋ ಸಖತ್ ಸುದ್ದಿಯಾಗ್ತಿದೆ. ಹೇಗಿದೆ ಫೋಟೋ? ನೀವೆ ನೋಡಿ.ರಣವೀರ್ ಸಿಂಗ್-ದೀಪಿಕಾ 2018 ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ 6 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ಇದೀಗ ದೀಪಿಕಾ ಡಿಸ್ಚಾರ್ಜ್ ಆಗಿದ್ದಾರೆ. ರಣವೀರ್ ಸಿಂಗ್ ಮತ್ತು ಅವರ ಕುಟುಂಬದೊಂದಿಗೆ ಆಸ್ಪತ್ರೆಯಿಂದ ಹೊರಬಂದಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
ದೀಪಿಕಾ ಅವರನ್ನು ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 8 ರಂದು, ದಂಪತಿ ಮಗಳನ್ನು ಸ್ವಾಗತಿಸಿದ್ದರು.ಇದೀಗ ದೀಪಿಕಾ ಆಸ್ಪತ್ರೆಯಿಂದ ಹೊರಡುತ್ತಿರುವ ಮೂರು ಕಾರುಗಳನ್ನು ಪಾಪರಾಜಿಗಳು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಾರಿನೊಳಗೆ ದೀಪಿಕಾ ಮಗುವನ್ನು ಎತ್ತಿಕೊಂಡು ಕುಳಿತಿರುವ ಫೋಟೋಗಳು ವೈರಲ್ ಆಗಿವೆ. ಕಾರಿನ ಗ್ಲಾಸ್‌ಗೆ ಪರದೆ ಹಾಕಿದ್ದರೂ ಸಾಕಷ್ಟು ಫೋಟೋಗಳು ವೈರಲ್ ಆಗಿವೆ.
ಈ ವರ್ಷದ ಆರಂಭದಲ್ಲಿ ದೀಪಿಕಾ ಗರ್ಭಿಣಿಯಾಗಿರುವುದನ್ನು ಘೋಷಿಸಿದ್ದರು. ಬಳಿಕ ಬೇಬಿ ಬಂಪ್ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. 2025ರ ಮಾರ್ಚ್‌ವರೆಗೂ ದೀಪಿಕಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬಳಿಕ ಕಲ್ಕಿ 2 ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.