ಮನೆಗೆ ಆಧಾರಸ್ತಂಭವಾಗಿದ್ದ ದೇವರಾಜ್ ಇ ಹಲೋಕ, ಸೂತಕದಲ್ಲಿ ಹೆಂಡತಿ ಮಕ್ಕಳು
Jul 5, 2025, 18:46 IST
|

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಪೂರ್ಣ ಅರೋಗ್ಯವಾಗಿದ್ದವರೂ ಸಹ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಜೂನ್ 13 ರಂದು ಕಾರಿನಲ್ಲಿ ಬಲಿಯಾಗಿದ್ದ ದೇವರಾಜ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕರಾಳ ಸತ್ಯ ಬಯಲಾಗಿದೆ. ಅರೋಗ್ಯ ಚೆಕ್ ಮಾಡಿಸಿಕೊಂಡಿದ್ದಾಗ ಸಂಪೂರ್ಣ ಸುರಕ್ಷಿತವಾಗಿದ್ದ ದೇವರಾಜ್ ಹಠಾತ್ ಸಾವನ್ನಪ್ಪಿದ್ದು, ಎಲ್ಲರಿಗೂ ಅಚ್ಚರಿಯಾಗಿತ್ತು.
ಅದೇನಾಯ್ತೋ ಏನೋ ಅಂತ ಎಲ್ಲರೂ ಗಾಬರಿಯಾಗಿದ್ದರು. ಇದೀಗ ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಹೃದಯ ಸ್ತಂಭನ. ಸಹಜ ಸಾವು ಎಂದು ವರದಿಯಿಂದ ತಿಳಿದುಬಂದಿದೆ. ಬೆಳಿಗ್ಗೆ ವಾಕ್, ಮನೆಯಲ್ಲೇ ಊಟ ಮಾಡುತ್ತಿದ್ದ ದೇವರಾಜ್, ಜಂಕ್ ಫುಡ್ ನಿಂದ ದೂರಾವಿದ್ದರು. ಆದರೂ ಸಹ ಜಮೀನಿಗೆ ಹೋಗಿ ಬರುವುದಾಗಿ ಹೋಗಿದ್ದ ದೇವರಾಜ್ ವಾಪಸ್ ಮನೆ ಬಂದಿದ್ದು ಹೆಣವಾಗಿ.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನಹೋದಂತೆ ಹೆಚ್ಚಾಗುತ್ತಲೇ ಇದೆ. ಅಲ್ಲದೇ ವೈದ್ಯರೂ ಕೂಡಾ ಈ ಬಗ್ಗೆ ತನಿಖೆ ನಡೆಸುತ್ತಲೇ ಇದ್ದಾರೆ. ಇದೀಗ ಹೃದ್ರೋಗ ತಜ್ಞರು ಡಾ ಮಹಂತೇಶ್ ಚರಂತಿಮಠ ಕಾರಣ ತಿಳಿಸಿದ್ದು, ಹಾಸನದಲ್ಲಿ ಬಾಡೂಟ ಆಯೋಜನೆ ಹೆಚ್ಚಿರುತ್ತದೆ. ಹೃದಯಾಘಾತಕ್ಕೆ ಅಧಿಕ ಮಾಂಸಹಾರ ಸೇವನೆಯೇ ಕಾರಣ ಎಂದು ಹೇಳಿದ್ದಾರೆ. ಆದ್ದರಿಂದ ಹಾಸನದಲ್ಲಿ ಹಾರ್ಟ್ ಆಟ್ಯಾಕ್ ಕೇಸ್ ಹೆಚ್ಚಾಗಲು ಬಾಡೂಟವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ನಮ್ಮ ಜೀವನ ಶೈಲಿ ಬದಲಾವಣೆ, ಕೆಲಸದ ಒತ್ತಡದಿಂದ ಹೃದಯಾಘಾತ ಕೇಸ್ ಹೆಚ್ಚಾಗ್ತಿವೆ. ಯುವಜನತೆ ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ. ಈ ಮೊದಲು 40 ವಯಸ್ಸಿನ ಮೇಲ್ಪಟ್ಡವರಿಗೆ ಹೃದಯಾಘಾತ ಕೇಸ್ ದಾಖಲಾಗ್ತಿತ್ತು, ಆದ್ರೆ ಈಗ 20ರ ಹರೆಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಯುವಕರು ಹಾರ್ಟ್ ಅಟ್ಯಾಕ್‌ಗೆ ಒಳಗಾಗಲು ಕಾರಣ ಅತಿಯಾದ ಮಾಂಸಹಾರ ಸೇವನೆ ಎಂದು ಹೇಳಿದ್ದಾರೆ.ನಿದ್ರೆಯ ಕೊರತೆಯೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವೈದ್ಯರು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.